ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-ನಿರ್ಲಿಪ್ತ ವ್ಯಾಪಾರಿ

ಕಾವ್ಯ ಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ನಿರ್ಲಿಪ್ತ ವ್ಯಾಪಾರಿ

ಬಂತು ಚುನಾವಣೆಯ ಹಬ್ಬ
ಪಕ್ಷಗಳನು ಒಂದುಗೂಡಿಸುವವ
ನಿಷ್ಪಕ್ಷಪಾತಿ ವ್ಯಾಪಾರಿ ಅಬ್ಬಬ್ಬ

ಮಾರಾಟಕ್ಕಿವೆ ರಂಗು ರಂಗಿನ
ಪಕ್ಷಚಿನ್ಹೆಗಳ ಅನೇಕ ಧ್ವಜಗಳು
ಜನರಿಗೆ ಟೋಪಿ ಹಾಕಲು ಟೋಪಿ

ಕಣ್ಣೀರೊರೆಸಲು ಶಾಲುಗಳು
ಅಹಂಕಾರ ಮೆರೆವ ಟೀಶರ್ಟಗಳು
ಪಕ್ಷಭೇದವಿಲ್ಲ ಇಲ್ಲಿ ಮಾರಾಟಕ್ಕಿವೆ

ಎಲ್ಲ ರಾಜಕಾರಣಿಗಳು ಬರುವರು
ಆದೇಶಿಸುವರು ಟೋಪಿ ಟವಲ್
ವ್ಯಾಪಾರಿಗೆ ನಗುವೋ ನಗು

ಟೇಲರಗಳಿಗೆ ದಿನವಿಡೀ ದುಡಿಮೆ
ನಿರ್ಲಿಪ್ತರಾಗಿ ಎಲ್ಲ ಪಕ್ಷಳಿಗೆ ಮಣೆ
ಹಾಕುತ ಹಣ ಸಿಕ್ಕರೆ ಸಾಕೆನ್ನುವರು

ಲಕ್ಷ ಲಕ್ಷ ವ್ಯಾಪಾರ ವ್ಯವಹಾರ
ಬೇಕಿಲ್ಲ ಅವನಿಗೆ ರಾಜಕಾರಣ
ಯಾರು ಗೆದ್ದರುಅಷ್ಟೆ ಬಿದ್ದರೂ ಅಷ್ಟೆ

ಕೈಮುಗಿದು ಹೇಳುವವ ಅವನು
ತಾಯಿ ಭಾರತಿಯ ಮಕ್ಕಳುನಾವು
ದೇಶಕಾಗಿ ದುಡಿಯೋಣ ಎಲ್ಲರೂ

ಬಟ್ಟೆ ಒಂದೇಯಾದರೂ ಚಿನ್ಹೆಗಳು
ಹಲವು ನೀವೆಲ್ಲ ಬೇರೆಯಾದರೂ
ದೇಶವೊಂದೇಎನುತಮುಂದೆಬನ್ನಿ


One thought on “ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-ನಿರ್ಲಿಪ್ತ ವ್ಯಾಪಾರಿ

  1. ಚೆನ್ನಾಗಿದೆ ಮೇಡಂ ಕವಿತೆ. ಪ್ರಸ್ತುತ ಪರಿಸ್ಥಿತಿಯ ವಿಡಂಬನೆ!

Leave a Reply

Back To Top