ಇಂದಿರಾ ಮೋಟೆಬೆನ್ನೂರ ಮಕ್ಕಳ ಕವಿತೆ-

ಮಕ್ಕಳ ವಿಭಾಗ

ಇಂದಿರಾ ಮೋಟೆಬೆನ್ನೂರ

ಮುದ್ದು ಕಂದ

ಉಕ್ಕಿ ಹರಿದ ಕಂಬನಿ ಮಾಲೆ
ಬಿಕ್ಕಿ ಊದಿದ ಕೆನ್ನೆಯ ಮೇಲೆ
ದುಃಖದಲೀ ಗಂಟಲುಬ್ಬಿ
ಕುಳಿತೆಯೇಕೆ ಮುದ್ದು ಕಂದ…?

ಕದ್ದು ಬೆಣ್ಣೆ ತಿಂದ ಗೋಪಿಕಂದ
ಮುದ್ದು ಮೊಗದ ದೇವಕಿನಂದ
ಎದ್ದು ಹೋಗಲಾರದೆ ಕುಳಿತ
ಭಂಗಿ ನೋಡು ಎಷ್ಟು ಚೆಂದ…

ತುಟಿ ಕಚ್ಚಿ ಅಳು ನುಂಗಿ
ಕಣ್ಣ ತುಂಬ ನೀರು ತುಂಬಿ…
ಮಾತು ಬರದೆ ಮೌನವಾಗಿ
ನೋಡುತಿರುವೆ ಯಾರನು?….

ಯಶೋದೆಯಮ್ಮನಿನ್ನ ಕೈಯಕಟ್ಟಿ
ಮರೆಗೆ ನಿಂತು ನೋಯುತಿಹಳು….
ಗುಂಗುರು ಕೂದಲ ಚೆಲುವ ಚೆನ್ನಿಗ
ಕೇಶವನ ಬಾಲ ಲೀಲೆ ಕಂಡು…..

ಹಗ್ಗದಲಿ ಕೈಯ ಕಟ್ಟಿ
ಕುಳಿತ ಪುಟ್ಟ ತುಂಟ ಕೃಷ್ಣ…
ಜಗವ ಪೊರೆವ ದೇವನಾಟ
ತಾಯಿ ಮಗುವ ದಿವ್ಯ ನೋಟ….


Leave a Reply

Back To Top