ಭಾರತಿ ಕೊಡ್ವ ಕೆರೆಯವರ ಸುಪ್ರಭಾತ ಕಾದಂಬರಿ

ಪುಸ್ತಕ ಸಂಗಾತಿ

ಸುಪ್ರಭಾತ

ಭಾರತಿ ಕೊಡ್ವ ಕೆರೆ

ಸುಪ್ರಭಾತ ಎಂದು ಕೂಡಲೇ ನಮಗೆ ಬೆಳಗಿನ ನೆನಪಾಗುತ್ತದೆ. ಹಕ್ಕಿಗಳ ಚಿಲಿಪಿಲಿ ಕೆಂಪಾದ ಸೂರ್ಯನ ಉದಯ ಮತ್ತು ಶುದ್ಧವಾದ ವಾತಾವರಣ.
ಭಾರತಿ ಕೊಡ್ವ ಕೆರೆ ಮೇಡಂ. ಅವರ ಪುಸ್ತಕ. “ಸುಪ್ರಭಾತ” ಕಾದಂಬರಿ ಕಳುಹಿಸಿದ್ದರು. ಧನ್ಯವಾದಗಳು ಮೇಡಂ ಭಾರತಿ ಮೇಡಂ, ಯಾರಿಗೆ ಪರಿಚಯವಿಲ್ಲ
ಕಥಾಗುಚ್ಚದಲ್ಲಿ ಅವರು ಚಿರಪರಿಚಿತರು. ಅವರ ಮೊದಲ ಕಾದಂಬರಿ” ಸುಪ್ರಭಾತ”ಅದನ್ನು ಓದಿದಾಗ ಉಷಾ ನವರ ತ್ನರಾಮ್. ಸಾಯಿಸುತೆ,ಯವರ ಕಾದಂಬರಿ ಓದಿದ ಹಾಗೆ ಅನ್ನಿಸಿತು. ಎಸ್ಟೇಟ್ ದೊಡ್ಡಬಂಗಲೇ ಅದರ ಸುತ್ತಲೂ ಹೆಣೆದ ಕಥೆ. ಸುರವಿನಿಂದಲೇ ಸಸ್ಪೆನ್ಸ್ ಕೊನೆವರೆಗೂ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ. ಅಕ್ಕ ತಂಗಿಯರ ಬಾಂಧವ್ಯ. ಶ್ರಾವ್ಯಳ, ಮುನಿಸು,ಕೋಪ, ತಾಪ ,ಅತಿ ಸ್ವಾಭಿಮಾನ, ಹೊಂಬಿಸಿಲಿನ ಆರತಿ ಅವರನ್ನು ನೆನಪಿಸುತ್ತದೆ. ಅಚ್ಚುಕಟ್ಟಾದ ಬರವನಿಗೆ ಹಿಡಿತ ಇದೆ. ಕಥೆಯ ,ಕೊನೆಗೊತ್ತಾಗಬಾರದು. ನಾನು ಓದುವಾಗ. ಮಧ್ಯದಲ್ಲಿ ಹಿಂದಿನ ಪುಟ್ಟದಲ್ಲಿಬರೆದಂತ ಓದುಗರ ಅಭಿಪ್ರಾಯ ನೋಡಿದೆ. ಕಥೆ ಗೊತ್ತಾಗಿ ಸ್ವಲ್ಪ ಆಸಕ್ತಿ ಕುಂದಿದರು ಯಾವಾಗ ಹೇಗೆ ಎಂಬ ಕುತೂಹಲ ಉಳಿಯಿತು. ಕೊನೆಯ ಮೂರು ನಾಲ್ಕು ಪೇಜಿನವರೆಗೂ ಏನು ಗೊತ್ತಾಗುವುದಿಲ್ಲ.
ಕಥೆಗೆ ತಕ್ಕಂತೆ ಮುಖಪುಟ ಹೆಸರು ಆಕರ್ಷಕವಾಗಿದೆ. ಬಹಳವರ್ಷದ ನಂತರ ಒಂದು ಸುಂದರವಾದ ಕಾದಂಬರಿಯನ್ನು ಓದಿದ ಅನುಭವ. ಹೀಗೆ ಅವರ ಸಾಹಿತ್ಯ ಕೃಷಿ ಮುಂದುವರೆಯಲೆಂದು ಆಶಿಸುತ್ತೇನೆ.
ಭಾರತಿ ಮೇಡಂ ಅವರ ಹೆಲ್ಪಿಂಗ್ ನೇಚರ್ ಬಹಳ. ಆತ್ಮಕಥೆ ಅಭಿಯಾನದಲ್ಲಿ ಸುಂದರವಾಗಿ ಬರೆದಿದ್ದರು. ಅಷ್ಟೇ ಅಲ್ಲದೆ “ಬುಕ್ ಬ್ರಹ್ಮದಲ್ಲಿ”ನನ್ನ ಪುಸ್ತಕ ಬರುವಂತೆ ಅವರೇ ಫೋನ್ ನಂಬರ್ ಕೊಟ್ಟು ಹಾಕಿಸಿದ್ದರು.
ಇದರಿಂದ ಗುಲ್ಬರ್ಗದ ಒಬ್ಬ ಮಹಿಳೆ” ಪಿ ಎಚ್ ಡಿ “ಮಾಡುತ್ತಿದ್ದಾರೆ ಉತ್ತರ ಕರ್ನಾಟಕದ ಮಹಿಳೆಯರು ಬರೆದಂತಹ ಆತ್ಮಕಥೆಗಳನ್ನು ತೆಗೆದುಕೊಂಡು “ಪಿ ಎಚ್ ಡಿ “ಮಾಡ್ತಿದ್ದಾರೆ ಬುಕ್ ಬ್ರಹ್ಮದಲ್ಲಿ ನನ್ನ ಪುಸ್ತಕವನ್ನು ನೋಡಿ “ಪಿ ಎಚ್ ಡಿ” ಗಾಗಿ ಅದನ್ನು ತೆಗೆದುಕೊಂಡಿದ್ದಾರೆ.
ಮೈಲ್ಯಾಂಗ್, ಆಡಿಯೋದಲ್ಲಿ ಭಾರತಿ ಮೇಡಂ ಅವರಒಂದು ಕಥೆ ಬಂದಿತ್ತು ಅದನ್ನು ನಾನು ವಿಚಾರಿಸಲಾಗಿ ನನಗೂ ಆ ನಂಬರ್ ಕೊಟ್ಟರು ನಾನು ಈಗ ಅಲ್ಲಿ ಒಂದು ಕಥೆ ಕಳುಹಿಸಿದ್ದೇನೆ. ಹೀಗೆ ಭಾರತಿ ಮೇಡಂ ಅವರ ಸಹಾಯ.
ಪುಸ್ತಕ ಒಂದಿಷ್ಟು ಜನರಿಗೆ ಕೊಟ್ಟಾಗ ನನಗೆ ಆತಂಕವಿತ್ತು, ಹೇಗೆ ಸ್ವೀಕರಿಸುತ್ತಾರೆ ಎಂದು ಯಾರದಾದರೂ ವಿಮರ್ಶೆ ಅಥವಾ ಅಭಿಪ್ರಾಯ ಬರಲಿ ಎಂದು ಕಾಯುತ್ತಿದ್ದೆ. ಮೊದಲ ವಿಮರ್ಶೆ ಅಥವಾ ಅಭಿಪ್ರಾಯ “ಹಳೇಬೀಡು ಕೃಷ್ಣಮೂರ್ತಿ ಸರ್” ಅವರದು ದೊಡ್ಡ ಪತ್ರಕರ್ತರು “ಮೊದಲಿನಿಂದ ನಾನು ಪುಸ್ತಕವನ್ನು ಹಾಗೆ ತೆಗೆದುಕೊಳ್ಳುವುದಿಲ್ಲ ಅದು ನನ್ನ ನಿಯಮ ಆದರ್ಶ” ಎಂದರು .ಎಷ್ಟು ಹೇಳಿದರು ಕೇಳದೆ ಮೂರು ನೂರು ರೂಪಾಯಿ ಕಳುಹಿಸಿದರು ಅವರ ನಿಯಮ ಮುರಿಯುವುದು ಬೇಡವೆಂದು ನಾನು ತೆಗೆದುಕೊಂಡೆ ಮತ್ತು ಮೊದಲ ಆಶೀರ್ವಾದ ರೂಪದಲ್ಲಿ ಅವರ ವಿಮರ್ಶೆ ಬರೆದರು ತುಂಬಾ ಸಮಾಧಾನವಾಗುವಂತೆ ಬರೆದಿದ್ದರು. ಓದುಗರ ಮುಂದೆ ಕುಳಿತು ನೀವು ಕಥೆ ಹೇಳಿದಂತೆ ಇದೆ ಹಳ್ಳಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ ಅಂತ ಇನ್ನು ಬಹಳಷ್ಟು ಬರೆದಿದ್ದರು. “ಶ್ರೀ ಕರ್” ಅವರಿಗೆ ಪುಸ್ತಕ ಕಳಿಸ್ಬೇಕೆಂದು ವಿಳಾಸ ಕೇಳಿದಾಗ ಅವರು ಹಾಗೆ ಹೇಳಿದರು “ನಾನು ಹಾಗೆ ಪುಸ್ತಕ ತೆಗೆದುಕೊಳ್ಳುವುದಿಲ್ಲವೆಂದು” ಅವರು 250 ಕಳಿಸಿದರು. ಅವರ ನಿಮಗಳನ್ನು ಮುರಿಯಬಾರದೆಂದು ನಾನು ತೆಗೆದುಕೊಂಡೆ ಬಹಳಷ್ಟು ಮಂದಿ ಕೇಳಿದರು ನಾನು” ಕಾಂಪ್ಲಿಮೆಂಟರಿ”ಯಾಗಿ ಕೊಡ್ತಾ ಇದೀನಿ ಬೇಡವೆಂದು ನಿರಾಕರಿಸಿದೆ. ಆನಂತರ ಭವನೇಶ್ವರಿ ಹೆಗಡೆ ಮೇಡಂ ಅವರು ಚೆನ್ನಾಗಿ ಬರೆದಿದ್ದರು ಯಾವುದೇ ತೊಂದರೆ ಬಂದಾಗ ಅದರಲ್ಲಿ ಹುದುಗಿ ಹೋಗದೆ ಅದನ್ನು ದಾಟಿ ಮೇಲೆಬಂದು ನಾಲ್ಕು ಜನರಿಗೆ ದಾರಿ ದೀಪವಾಗಲಿಈಪುಸ್ತಕ, ಎಂದು ಹಾರೈಸಿದರು . ಆನಂತರ ನನಗೆ ಧೈರ್ಯ ಬರಲು ತೊಡಗಿತು, ಎಲ್ಲರಿಗೂ ಕೊಡಲು ಶುರು ಮಾಡಿದೆ .ಲೋಕಲ್ ಒಂದಿಷ್ಟು ಕೊಟ್ಟಿದ್ದೇನೆ.
ಶಾರದಾ ಕೃಷ್ಣ ಮೇಡಂ ಓದಿ ಚೆನ್ನಾಗಿ ಬರೆದಿದ್ದರು. ಮತ್ತು ಪುಸ್ತಕ ಅವಲೋಕದಲ್ಲಿ ನನಗೆ ಪರಿಚಯ ಮಾಡಿಸಿದರು. ಇಲ್ಲಿ ಆತ್ಮಕಥೆ ಅಭಿಯಾನದಲ್ಲಿ ಬರೆದಿದ್ದು, ತುಂಬಾ ಜನರ ಹಾರೈಕೆ ಮೆಚ್ಚುಗೆ ಪ್ರೋತ್ಸಾಹ ಸಿಕ್ಕಿತು. ನಾನು ಪುಸ್ತಕ ಬಿಡುಗಡೆ ಅಂತ ಏನು ಮಾಡಿರಲಿಲ್ಲ ಆದರೆ ಇಲ್ಲಿ ಅವಲೋಕನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಅನುಭವ ಆಯ್ತು ಸಂತೋಷವಾಯಿತು. ಕಥಾಗುಚ್ಚದಲ್ಲಿ ಫ್ರೆಂಡ್ಸ್ ಅಲ್ಲದೆ ಅವಲೋಕದಲ್ಲಿ ಇನ್ನು ಬಹಳಷ್ಟು ಫ್ರೆಂಡ್ಸ್ ಸಹೋದರ ಸಹೋದರಿ ಯರು ಸಿಕ್ಕರು
ಹಾಗೆ ಪಾರ್ವತಿ ದೇಸಾಯಿ ಮೇಡಂ ತುಂಬಾ ಆತ್ಮೀಯರು, ಫೋನ್ ನಲ್ಲಿ ಮಾತಾಡ್ತಾ ಇರ್ತೀವಿ ಅವರಿಗೆ ಪುಸ್ತಕ ಕಳಿಸಿದ್ದೆ ಆದರೆ ಅದು ಕಳೆದುಹೋಯಿತು ಹೀಗೆ ನನ್ನ ಮೂರ್ ಪುಸ್ತಕಗಳು ಕಳೆದು ಹೋಗಿದ್ದಾವೆ. ಒಂದು ಪ್ರತಿಷ್ಠಾನ ಸ್ಮರಣಿ ಕೆ ಬಹುಮಾನ ಪ್ರಶಸ್ತಿ. ಮಹಿಳಾ ಪುಸ್ತಕಗಳಿಗೆ ಅದನ್ನು ಪೇಪರಿನಲ್ಲಿ ಬಂದಿದ್ದನ್ನು ನನಗೆ ಕಳುಹಿಸಿ ಇಲ್ಲಿ ಪುಸ್ತಕಗಳನ್ನು ಕಳುಹಿಸಿ ಎಂದು ತಿಳಿಸಿದರು ಬಹುಮಾನ ಬರುತ್ತದೆ ಎಂದಲ್ಲ,ಇಂಥ ಪುಸ್ತಕಗಳು ಬಂದಿದ್ದವು, ಎಂದು ಗೊತ್ತಾಗುತ್ತದೆ. ಒಳ್ಳೆ ಡೈರೆಕ್ಟರ್ ಓದುತ್ತಾರೆ ಕಳುಹಿಸಿ ಎಂದು ಪ್ರೋತ್ಸಾಹಿಸಿದರು ಹೀಗಾಗಿ ಅಲ್ಲಿ ಕಳುಹಿಸಿದೆ.
ಮಲ್ಲಾಾರೆಡ್ಡಿ ಸರ್ ಎಲ್ಲರಿಗೂ ಚಿರಪರಿಚಿತ ರು ಅವರು ಬಿಜಿಯಾಗಿದ್ದರೂ ನನ್ನ ಪುಸ್ತಕ ಓದಿ ವಿಸ್ತಾರವಾಗಿ ಬರೆದಿದ್ದಾರೆ.
ಸವಿತಾ ಶಾಸ್ತ್ರಿ, ಗಾಯತ್ರಿ ಶಿವಾನಂದ್ ಮೇಡಂ. ರಾಜೇಂದ್ರ ಇನಾಮ್ದಾರ್ ಸಹೋದರ. ಆದಷ್ಟು ಬೇಗ ಓದಿ ತುಂಬಾ ಆತ್ಮೀಯವಾಗಿ, ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಶಾಮಲಾದೇವಿ ಮೇಡಂ ಅಂತೂ ತುಂಬಾ ಇಷ್ಟ ಪಟ್ಟಿದ್ದಾರೆ ಮತ್ತೊಮ್ಮೆ ಮತ್ತೊಮ್ಮೆ ಪುಸ್ತಕ ಓದುತ್ತೇನೆ ಅಂದಿದ್ದಾರೆ .
ಕುಮದಾ ದೇಶಪಾಂಡೆ ಮೇಡಂ, ಮೀನಾ ಜಡೆ ಮೇಡಂ ನಾನು ಕೇಳಿದ ಕೊಡಲೇ ಏನು ಹೇಳದೆ ಇಬ್ಬರು ಪುಸ್ತಕ, ಕೊಂಡರು, ಮೀನ ಜಡೆ ಮೇಡಂ ಓದಿ ಚೆನ್ನಾಗಿ ಬರೆಯುತ್ತೀರಿ ಹಾಗೆ ಬರೆಯುತ್ತೀರಿ ಎಂದು ತಿಳಿಸಿದರು.
ಆದರೆ ಇನ್ನೂ ಓದಿ ತಿಳಿಸಬೇಕಾದವರು ಬಹಳಷ್ಟು ಜನ ಇದ್ದಾರೆ ಅವರುಆದಷ್ಟು ಬೇಗ ಓದಿ ತಮ್ಮ ವಿಮರ್ಶೆಯನ್ನು ತಿಳಿಸುತ್ತಾರೆ ಎಂದು ಕೋರಿಕೊಳ್ಳುತ್ತಾ ಮತ್ತೊಮ್ಮೆ ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಪುಸ್ತಕ ಓದಿ ತಿಳಿಸಿದ ಎಲ್ಲರಿಗೂ ಧನ್ಯವಾದಗಳುಅರ್ಪಿಸುತ್ತಾ

———————–


ಸರೋಜ ಗಡಾದ

Leave a Reply

Back To Top