ಇಮಾಮ್ ಮದ್ಗಾರ ಕವಿತೆ-ಪ್ರೀತಿ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಪ್ರೀತಿ

ಪ್ರೀತಿ ಎಂದರೆ ತಾಕುವ
ಬೆಳದಿಂಗಳಲ್ಲ !
ನಡು ಬಿಸಿಲಿನಲಿ
ಹರಿಯುವ ಮೈಯ್ಯಬೆವರು !!

ಪ್ರೀತಿ ಎಂದರೆ ತಂಗಾಳಿಯಲ್ಲ
ಬಿರುಸುಯ್ಯಿವ ಬಿರುಗಾಳಿಯಲಿ
ಸುರಿಸುಯ್ಯುತ ಸುಂಟರ
ಗಾಳಿಯ ಹಿತವ
ಸವಿಯುವದು ಪ್ರೀತಿ !!

ಪ್ತೀತಿ ಎಂದರೆ ಸ್ತಬ್ಧ
ಸಾಗರವಲ್ಲ !
ಹುಣ್ಣಿಮೆಯ ದಿನ ಭೋರ್ಗರೆಯುವ
ಹುಚ್ಚು ಸಮುದ್ರ !
ಪ್ರೀತಿ.

ಮಲ್ಲಿಗೆಯಲ್ಲ ಪ್ರೀತಿ !
ನಿನ್ನಕಣ್ಣ ನೋಟದಿ
ಕಮಲವನ್ನು ನಾಚಿಸಿ ದಂತಲ್ಲ
ಮುಳ್ಳುಗಳ ನಡುವೆಯೂ
ನಗುವ ಚೆಲ್ಲುವ ಕೆಂಗುಲಾಬಿ ಪ್ರೀತಿ !!

ಪ್ರೀತಿ ಎಂದರೆ
ಸಾಯುವ ಸಂಜೆಯೊಳು
ಮರಳ ಮಡಿಲಲಿ
ಜೊತೆಯಾಗಿ ಚುಕ್ಕಿಗಳ
ಲೆಕ್ಕ ಹಾಕೋದು ಪ್ರೀತಿ…

ಪ್ರೀತಿ ಎಂದರೆ
ಒಡಲೊಳಗೆ ಬೆಂಕಿ
ಉರಿಯಲು ಕಡ್ಡಿ
ಗೀಚೀದಂತಲ್ಲ..
ಧಗಧಗಿಸುವ ಒಡಲ
ಕಿಡಿಗೆ ಹೆಸರಿಟ್ಟಂತಲ್ಲ
ಪ್ರೀತಿ !!

ಪ್ರೀತಿ ಎಂದರೆ
ಧಗಧಗಿಸುವ ಬೆಂಕಿ
ಯರಿಯಲೂ
ನೀ.‌.ನಿಟ್ಟ ಹೆಸರನ್ನೇ
ಕನವರಿಸಿ ಕರಕ ಲಾಗುವದು
ಪ್ರೀತಿ !!!


ಇಮಾಮ್ ಮದ್ಗಾರ

Leave a Reply

Back To Top