ಮಕ್ಕಳ ಕವಿತೆ
ಅರುಣಾ ರಾವ್
ದೇಸಿ ಆಟಗಳು
ಆಟಕೆ ಬಾರೊ ಅಪ್ಪಣ್ಣ
ಅಪ್ಪಾಳೆ ತಪ್ಪಾಳೆ ತಿರುಗೋಣ
ತಾತನ ಕೋಲಿನ ಕುದುರೆಯನೇರಿ
ಅಂಗಳವೆಲ್ಲಾ ಸುತ್ತೋಣ
ಕುಂಟೆ ಬಿಲ್ಲೆ ಲಗೋರಿ ಚೆಂಡು
ಆಟವು ಸೊಗಸು ಅಪ್ಪಣ್ಣ
ದೈಹಿಕ ಬಲವು ಮನಸಿಗೆ ಹಿತವು
ಇವುಗಳಲ್ಲಿದೆ ಕೇಳಣ್ಣ
ಕವಡೆ ದಾಳ ಗೋಲಿ ಬುಗುರಿ
ತಿಳಿದಿವೆಯೇನೋ ಅಪ್ಪಣ್ಣ
ಲೆಕ್ಕದ ಪಾಠ ಆಟದಿ ವಿಹಿತ
ಗೊತ್ತಿದೆಯೇನು ನಿನಗಣ್ಣ
ಮೊಬೈಲು ಫೋನು ದೂರದರ್ಶನ
ನೋಡಿದ್ದು ಸಾಕು ಅಪ್ಪಣ್ಣ
ಕನ್ನಡಕದ ಬಳುವಳಿ ಹೊರತು
ಬೇರೆ ಲಾಭ ಇಲ್ಲಣ್ಣ
———————
ಅರುಣಾ ರಾವ್