ಬಿ.ಟಿ.ನಾಯಕ್ ಕವಿತೆ- ಹುಟ್ಟು ಕುಲವ ನಾನರಿಯೆ 

ಕಾವ್ಯ ಸಂಗಾತಿ

ಬಿ.ಟಿ.ನಾಯಕ್

ಹುಟ್ಟು ಕುಲವ ನಾನರಿಯೆ 

ಕೂಸಿನ ಹುಟ್ಟು ಕುಲ ನಾನರಿಯೆ ನೀವು ಬಲ್ಲಿರಾ ,
ಕೂಸಿಗೆ ಕುಲದ ಕಲುಷವಾದದು ನೀವು ಬಲ್ಲಿರಾ. 
 
ಬೆತ್ತಲೆ ದೇಹ ಬಂದಾಗದರ ಉಸಿರೊಂದೇ ಇತ್ತಲ್ಲ, 
ಜುಟ್ಟಿಲ್ಲ ಜನಿವಾರವಿಲ್ಲ ಉಡಿದಾರ ಶಿವದಾರವಿಲ್ಲ,
ಉದ್ದಡ್ಡ ನಾಮವಿಲ್ಲ ಕರೆಯಲದಕೆ ಹೇಳ್ವ ಹೆಸ್ರಿಲ್ಲ,
ಮಾಂಸ ಮುದ್ದೆಗೆ ಜೀವ್ಕೊಟ್ಟ ಮಾದೇವನೇ ಎಲ್ಲ. 


 
ಕೂಸೆಂದು ಕರೆಯುವರು ಕಾಸನ್ನು ಸುರಿಯುವರು, 
ಆಸರೆಯ ದಿಕ್ಕೆನ್ನುವರು, ಅರಿತು ಸಂತಾನವೆನ್ವರು, 
ಬಾಳಿನ ಬಂಗಾರವೆನ್ವರು, ಮುಂದಿನಧಿಪತೇನ್ವರು,
ಕತ್ತಲು ಬೆಳಕಿನರಿವಿಲ್ಲದದಕೆ ತಮ್ಮ ದೈವ ಎನ್ವರು. 
 
ಕೂಸಿಗೆ ಕುಲ ಕೊಟ್ಟದಕೊಂದು ಹೆಸರು ಊದ್ವರು,
ಬರುವ ಕತ್ತಲ ಜೀವನೂಹಿಸದೇ ಸಂತಸ ಪಡ್ವರು,  
ಭಿನ್ನ ಭಿನ್ನರ ಮಧ್ಯ ಕಸಿವಿಸಿಗೊಂಡದು ಚೀರ್ವದು, 
ಕುಲದ ಬೆಳಕರಿವಾಗದ ವರೆಗದು ಕತ್ತಲಲ್ಲಿರ್ವದು.  

—————————–

ಬಿ.ಟಿ.ನಾಯಕ್, 

8 thoughts on “ಬಿ.ಟಿ.ನಾಯಕ್ ಕವಿತೆ- ಹುಟ್ಟು ಕುಲವ ನಾನರಿಯೆ 

  1. ಬೆಳೆದಂತೆ ಎಲ್ಲವೂ ವಿಭಿನ್ನ. ಒಳ್ಳೆಯ ಸಂದೇಶ ನೀಡುವ ಕವಿತೆ. ಅಭಿನಂದನೆಗಳು ನಾಯಕರೇ.

    1. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.

  2. ಬದುಕಿನ ಅರ್ಥದ ಆಳಕ್ಕಿಳಿದ ಕವನ

  3. ಬದುಕಿನಾಳ ಅರಿಯುವ ಅರ್ಥಗರ್ಭಿತ ಕವನ ಸುಂದರ ವಾಗಿದೆ

    1. ತಮ್ಮ ಅನಿಸಿಕೆ ನನಗೆ ಸ್ಪೂರ್ತಿ ತಂದಿದೆ. ಧನ್ಯವಾದಗಳು.

  4. ಕವಿತೆ ಸೊಗಸಾಗಿದೆ. ಭಾಷೆ ಶೈಲಿ ಇನ್ನೂ ಚೆನ್ನ. ಅಭಿನಂದನೆಗಳು ನಾಯಕರೇ

    1. ತಮ್ಮ ಸದಭಿಪ್ರಾಯ ನನಗೆ ಸ್ಪೂರ್ತಿ ನೀಡಿದೆ. ಧನ್ಯವಾದಗಳು.

Leave a Reply

Back To Top