ಲಲಿತಾ ಪ್ರಭು ಅಂಗಡಿ-ರಘುಪತಿ ಗಿರಿಸತಿ

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ರಘುಪತಿ ಗಿರಿಸತಿ

ರಘುಪತಿ ಗಿರಿಸತಿ
ಪ್ರೀತಿ ಪ್ರೇಮದಲಿ ಸಾಹಿತ್ಯದ ರಸ ಬೆರಸಿ
ಸಂಶೋಧನೆಯ ಸಾರಕೆ ವಿಮರ್ಶೆಯ ಬೆಳಕು ತೊಡಿಸಿ
ಕವಿತೆಯಲಿ ಪ್ರೇಮದ ಸವಿಜೇನ ಸುರಿಸಿ
ದಾಂಪತ್ಯ ಜೀವನದ ಸಾಗರದಲಿ
ಪ್ರೀತಿ ವಿಶ್ವಾಸದ ನೌಕೆಯ ಬಳಸಿ
ಸುಖ ಸಂಸಾರಕೆ ಒಲುಮೆಯ ಹುಟ್ಟು ಹಾಕಿ
ಬದುಕೆಂಬ ಬಾಳ ಬಳ್ಳಿಗೆ ಅನುಬಂಧದ
ನಂಟಿನ ಅಮ್ರೃತದ ಸಾರ ಅರಿತು
ಕನ್ನಡದ ಕನ್ನಡಿಯಲಿ ಮೂಡಿಬಂದವು
ಮನೋಗತದ ಮನೋಭಿಲಾಷೆ
ವಿಮರ್ಶೆಯಲಿ ತೂರಿಬಂದವು ಸಾಹಿತ್ಯದೊಲವು ಬಗೆ
ಕವನದಂತೆ ಜೀವನ ನಡೆಸಿ
ಕಗ್ಗಂಟನು ಕಡೆಗಣಿಸಿ ಕಥಾಮಾನಸಿಗೆ
ಮುತ್ತುಪೋಣಿಸಿ
ಪುತ್ರರಿರ್ವರಿಗೆ ತಾಯಿಮುಖವ ತೋರಿಸಿ
ಬಂದ ದಾರಿಯ ಅಡೆತಡೆಗೆ ಸೆರಗು ಬಿಡೋ ಮರುಳೆ ಎಂದು ಮುಂದೆಸಾಗಿ
ಕನ್ನಡದ ಕಸ್ತೂರಿಗೆ ಕಾವ್ಯವಿಮರ್ಶೆಯ ಕಾಪಿಟ್ಟು
ಸಾಹಿತ್ಯದ ಸವಿರುಚಿಯ ಜಗಳಾಡಿ ನಾನು ನೀನು ನೀನು ನಾನು ಎನ್ನುವ ಅಹಂಬಿಟ್ಟು
ಮಧುರ ಕನ್ನಡದ ಗಂಧವ ತೀಡಿ
ಮನೋರಮೆ ಮುದ್ದಣರ ನೆನೆಸುವ
ನಿಮ್ಮದಾಂಪತ್ಯ ಜೀವನ ಸವಿಜೇನು
ಗುರು ದಂಪತಿಗಳ ಬಾಳು ಕಾವ್ಯಜೇನು


ಲಲಿತಾ ಪ್ರಭು ಅಂಗಡಿ

Leave a Reply

Back To Top