ಮಕ್ಕಳ ಕವಿತೆ
ಅರುಣಾ ರಾವ್
ಹಬ್ಬಗಳು
ಹಬ್ಬಗಳೆಂದರೆ
ಬಲು ಒನಪು|
ಧರಿಸಲುಬಹುದು
ಹೊಸ ಉಡುಪು||
ಹಬ್ಬದ ದಿನದಿ
ಶಾಲೆಗೆ ರಜವು
ಹೋಮ್ವರ್ಕ್ ಇಲ್ಲ
ಮಜವೋ ಮಜವು||
ಮನೆಯ ಮುಂಗಡೆ
ಬಣ್ಣದ ರಂಗೋಲಿ|
ಅಮ್ಮನು ಮಾಡುವ
ಉಂಡೆ ಚಕ್ಕುಲಿ||
ರೇಷಿಮೆ ರವಿಕೆ
ಲಂಗವ ತೊಡಲು|
ಹಬ್ಬಕೆ ಕೊಡುವುದು
ವಿಶೇಷ ಮೆರುಗು||
ಹಾಡು ಹಸೆಗಳ
ಭರಾಟೆ ಜೋರು|
ದೇವರ ಎಡೆಗೆ
ಘಮಘಮ ಕೀರು|
ಬಂಧು ಬಾಂಧವರು
ಮನೆಗೆ ಬರುವರು|
ಸಡಗರ ಸಂಭ್ರಮ
ಹೊತ್ತು ತರುವರು||
ಭಕ್ತಿ ಭಾವದಿ
ದೈವವ ಪೂಜಿಸಿ|
ಪಂಕ್ತಿ ಭೋಜನದ
ಸವಿ ಆನಂದಿಸಿ||
ಅರುಣಾ ರಾವ್
Beautiful expression in a simple way!