ಯುಗಾದಿ ವಿಶೇಷ

ಯುಗಾದಿ ವಿಶೇಷ

ಲಕ್ಷ್ಮೀದೇವಿ ಪತ್ತಾರ,

ಯುಗಾದಿ

ಯುಗದ ಆದಿ ಯುಗಾದಿ ಪ್ರಕೃತಿ ಧರಿಸುವದು ಹಚ್ಚ ಹಸಿರಿನ ಹೊಸ ಉಡುಗಿ ಯುಗಾದಿಯೆಂದರೆ ಸಂಭ್ರಮಕ್ಕೆ ಮುನ್ನುಡಿ

ತರುಲತೆಗಳು ಹಳೆ ಎಲೆಗಳ ಉದುರಿಸಿ ಬಂಗಾರದೆಲೆ ಧರಿಸಿ
ಬಣ್ಣಬಣ್ಣದ ಹೂವುಗಳ ಮುಡಿಗೇರಿಸಿ ಕುಣಿದು ನಲಿಯುವವು ಸೌಗಂಧ ಸೂಸಿ

ಜಡತೆಯ ಚಳಿ ಕಳೆದು
ಚೈತನ್ಯ ತುಂಬುವುದು ಎಳೆಬಿಸಿಲು
ಎಲ್ಲರಲ್ಲೂ ಹೊಸ ಉತ್ಸಾಹ ಹುಮ್ಮಸ್ಸು
ಚೈತ್ರ ಮಾಸದ ಚಂದ್ರಮಾನ ಯುಗಾದಿಯ ಸೊಗಸು

ಚೈತ್ರ ಕಾಲದಿ ಗಿಡಗಂಟೆಗಳ ಗೂಡಿನಿಂದ ಕೋಗಿಲೆಯ ಹಾಡು
ಹೊಲಗದ್ದೆಗಳಲ್ಲಿ ರೈತರ ಸುಗ್ಗಿ ಹಾಡು
ಕವಿ-ಕಲಾವಿದರ ಭಾವಾಭಿವ್ಯಕ್ತಿಗೆ ಮೂಡುವುದು ಕೊಡು
ಯುಗಾದಿ ಪಾದ ಊರಿದಾಕ್ಷಣ ಎಲ್ಲಲ್ಲೂ ನವವರ್ಷದ ನಾವಿನ್ಯತೆಯ ಸೊಗಡು

—————————–.

————————–

Leave a Reply

Back To Top