ಯುಗಾದಿ ವಿಶೇಷ
ಗೋನವಾರ ಕಿಶನ್ ರಾವ್
ಶೋಭನಕೃತ್
ಒಂದೊಂದು ಯುಗಾದಿಗೆ
ವೈವಿಧ್ಯ ಹೆಸರು
ಈ ಸಾರೆ………
ಶೋಭನಕೃತ್ !!
ನಂದನದ ನಂತರದ
ಒಂದು ದಶಕ !
ಏಳು ದಶಕಗಳೀಗ
ಬೇಡಲಿನ್ನೇನಿದೆ
ಊರು ವಿದಾಯ ಹೇಳಲಿದೆ
ಕಾಡು ಕರೆಯುತಿದೆ
ಅತ್ತ ದರಿ ಇತ್ತಪುಲಿ
ಸಾಕೆನಿಸುತಿದೆ
ಎಡಬಿಡಂಗಿತನ
ಕಂಡದ್ದು ನೂರು
ಕೇಳಿದ್ದು ?
ಇರಬೇಕು ಟ್ರಿಲಿಯನ್ !
ಆಚರಿಸಿದ್ದು ಸೊನ್ನೆ
ಶೂನ್ಯ ಮಾಸ ಶ್ರಾವಣ
ಒಂದು ತಿಂಗಳು ಆಯುವಿನಲಿ
ಅಧಿಕ !!
ವಸುಧೈವ ಕುಟುಂಬಕಂ
ಸರ್ವೇ ಜನೋ ಸುಖೀ..
ಬೇಡ. ಹಳತು-ಸವಕಲು…..
ಹೊಸದೇನಾದರೂ
ನೋಡೋಣ ಶೋಭನದ
ಮೆರವಣಿಗೆ; ಸಿಗಬಹುದೇನೋ
ಮುಂಬರುವ ಕ್ರೋಧಿ ?
ಸಿಕ್ಕೀತೇ ಸಹನೆ ?
೦-೦-೦-೦-೦
ಒಂದೊಂದು ಯುಗಾದಿಗೆ
ವೈವಿಧ್ಯ ಹೆಸರು
ಈ ಸಾರೆ………
ಶೋಭನಕೃತ್ !!
ನಂದನದ ನಂತರದ
ಒಂದು ದಶಕ !
ಏಳು ದಶಕಗಳೀಗ
ಬೇಡಲಿನ್ನೇನಿದೆ
ಊರು ವಿದಾಯ ಹೇಳಲಿದೆ
ಕಾಡು ಕರೆಯುತಿದೆ
ಅತ್ತ ದರಿ ಇತ್ತಪುಲಿ
ಸಾಕೆನಿಸುತಿದೆ
ಎಡಬಿಡಂಗಿತನ
ಕಂಡದ್ದು ನೂರು
ಕೇಳಿದ್ದು ?
ಇರಬೇಕು ಟ್ರಿಲಿಯನ್ !
ಆಚರಿಸಿದ್ದು ಸೊನ್ನೆ
ಶೂನ್ಯ ಮಾಸ ಶ್ರಾವಣ
ಒಂದು ತಿಂಗಳು ಆಯುವಿನಲಿ
ಅಧಿಕ !!
ವಸುಧೈವ ಕುಟುಂಬಕಂ
ಸರ್ವೇ ಜನೋ ಸುಖೀ..
ಬೇಡ. ಹಳತು-ಸವಕಲು…..
ಹೊಸದೇನಾದರೂ
ನೋಡೋಣ ಶೋಭನದ
ಮೆರವಣಿಗೆ; ಸಿಗಬಹುದೇನೋ
ಮುಂಬರುವ ಕ್ರೋಧಿ ?
ಸಿಕ್ಕೀತೇ ಸಹನೆ ?
ತುಂಬಾ ಚೆನ್ನಾಗಿದೆ