ಯುಗಾದಿ ವಿಶೇಷ

ಜಯಂತಿ ಸುನಿಲ್

ಹಳೆತು ಪೊರೆಯನು ಕಳಚಿ ಹೊಸತು ಚಿಗುರನು ಧರಿಸಲು ಬಂತು ಯುಗಾದಿ..!!

ಚಳಿಯ ಚಳುವಳಿ ಮುಗಿದು,ಧಗೆಯು ಎಲ್ಲೆಡೆ ಬಿಗಿದು
ಕೆಂಪಾದ ಭುವಿಯಲಿ ತಂಪಾದ ತಳಿರುಗೆ ತಲೆದೂಗಲು ಬಂತು ಯುಗಾದಿ..!!

ಸಾಲು ಸಾಲು ಸೋಲುಗಳ ಹಾಸಿಗೆಯಿಂದೆದ್ದು…
ಗೆಲುವೆಂಬ ಬೆಳಕಿನ ಮುಲಾಮು ಜಗಕೆ ಸೋಕಿಸಲು ಬಂತು ಯುಗಾದಿ..!!

ಕಳೆದ ನಿನ್ನೆ ಮೊನ್ನೆಯ ಬದಿಗೆ ಸರಿಸಿತು ಹೆಜ್ಜೆ ಸವೆತವು…
ಮುದುಡಿದ ಮನಸುಗಳಿಗೆ,ಮೊರಟಿದ ಸಸಿಗಳಿಗೆ ತಾರೀಪು ಮಾಡಲು ಬಂತು ಯುಗಾದಿ..!!

ಸೃಷ್ಟಿಯ ನಿರಂತರ ತಿಗರಿಯಲಿ ಈದಿನ,ಈ ಕ್ಷಣ ಎಲ್ಲವೂ ಹೊಸತು…
ಹಳದಿ ಎಲೆಗಳು ಸಡಿಲವಾಗಿ ಚಿಗುರೊಡೆದ ಹಸಿರೆಲೆಗಳ ಜಯದ ಓಲೆ ಬರೆಯಲು ಬಂತು ಯುಗಾದಿ..!!


Leave a Reply

Back To Top