ಯುಗಾದಿ ವಿಶೇಷ

ಹೊಸ ವ(ಹ)ರುಷ

ಮಧುರಾ ಮೂರ್ತಿ

ಸಿಹಿ ನೆನಪುಗಳ ಹುಡುಕುತ
ಕಹಿ ನೆನಪುಗಳು ಮರೆಯಾಗಲಿ
ಮನದ ಕಲ್ಮಶ ತೊಳೆಯುತ
ಜ್ಞಾನ ಜ್ಯೋತಿಯು ಬೆಳಗಲಿ

ಮನದಿ ಹುರುಪು ತುಂಬುಂತ
ಕಾರ್ಯ ಯೋಜನೆ ತೆರೆಯಲಿ
ಉದಯಿಸುವ ರವಿಯ ನೋಡಿ
ಗುರಿಯು ಭರವಸೆ ಪಡೆಯಲಿ

ದ್ವೇಷ ಅಸೂಯೆಯೆಲ್ಲ ನಶಿಸಿ
ಪ್ರೀತಿ ಹೊನಲು ಹರಿಯಲಿ
ಅನುಭವದ ಹಳೆಯ ದಿನಗಳೆಲ್ಲ
ಸದಾ ಎಚ್ಚರಿಕೆಯ ನೀಡಲಿ

ಹಳೆಯ ಕೊಳೆಯನೆಲ್ಲ ಕಳೆದು
ಯುಗಾದಿ ಹರುಷವ ತುಂಬಲಿ
ಹೊಸತು ಸ್ನೇಹ ಬಂಧ ಬೆಸೆದು
ಬಾಳು ಸುಮಧುರವಾಗಲಿ

ಛಲದ ಹೆಜ್ಜೆಯಲಿ ಸಾಗುತ
ಬಾಳಿಗೊಂದು ಅರ್ಥ ಸಿಗಲಿ
ಮಣ್ಣಲಿ ಒಂದಾಗುವ ತನಕ
ಬದುಕು ಮಾನ್ಯತೆ ಪಡೆಯಲಿ


One thought on “

Leave a Reply

Back To Top