ಯುಗಾದಿ ವಿಶೇಷ

ಸುಧಾ ಪಾಟೀಲ್

ಗಜಲ್

ಹೊತ್ತು ಗೊತ್ತಿಲ್ಲ, ಗಡಿಮೇರೆಗಳಿಲ್ಲ ನನ್ನ ಕವನಕ್ಕೆ
ಗೊಂದಲಗಳ ಸರಮಾಲೆಗಳಿಲ್ಲ ನನ್ನ ಕವನಕ್ಕೆ

ಗೋಜಲುಗಳ ಗೊಂಚಲುಗಳಿಲ್ಲದೆ ಬರೆಯಬೇಕಿದೆ ಕವನ
ನಿರಾಸೆಯ ಹಂದರಗಳಿಲ್ಲ ನನ್ನ ಕವನಕ್ಕೆ

ಎಲ್ಲರ ವಿಚಾರಗಳನು ಮೆಟ್ಟಿ ನಿಲ್ಲುವ ಸಮಯವಿದು
ಸೋಲುಗಳ ಯೋಚನೆಗಳಿ ಲ್ಲ ನನ್ನ ಕವನಕ್ಕೆ

ಅರ್ಥವಿಲ್ಲದ ಪ್ರಕ್ರಿಯೆಗಳ ತಡಕಾಡುವುದ ಮರೆತೆ
ಮುಖಾಮುಖಿಯಾಗುವ ಸ್ಪರ್ಧಿಗಳಿಲ್ಲ ನನ್ನ ಕವನಕ್ಕೆ

ಧೀಮಂತ ನಾಯಕನಂತೆ
ಘಟ್ಟಿತನದಿ ಹೊರಹೊಮ್ಮಿತು ಹೃದಯದಿಂದ
ಯಾವುದರ ಮುಲಾಜು ಹಂಗುಗಳಿಲ್ಲ ನನ್ನ ಕವನಕ್ಕೆ


ಸುಧಾ ಪಾಟೀಲ್

One thought on “

Leave a Reply

Back To Top