ಯುಗಾದಿ ವಿಶೇಷ
ಡಾ ಶಶಿಕಾಂತ ಪಟ್ಟಣ
ಗುಬ್ಬಿ ಹೇಳಿದ ಕಥೆ
ಅವಸಾನದ ಅಂಚಿನಲಿ
ಪುಟ್ಟ ಜೀವ ಮರುಗಿ
ಕಣ್ಣೀರು ಇಟ್ಟ
ಗುಬ್ಬಿ ಹೇಳಿದ ಕಥೆ
ಆಗ ಎಲ್ಲೆಂದರಲ್ಲಿ
ಹುಲ್ಲುಗಾವಲು
ಕಟ್ಟಿಕೊಂಡಿತ್ತು ತನ್ನ
ಪುಟ್ಟ ಗೂಡು.
ಈಗ ಎಲ್ಲವೂ ಮಾಯ
ಕಾಡು ನಾಶ
ಮರಗುಳುರುಳಿ ಮಾಯ
ಮುಗಿಲು ಮುಟ್ಟುವ
ಕಾಂಕ್ರೀಟ್ ಚಾವಣಿ
ಆಗೆಲ್ಲ ಗುಬ್ಬಿ
ಚಿವು ಗುಡುತ್ತಿದ್ದವು
ರಾತ್ರಿಯಿಡಿ ಮಕ್ಕಳಿಗೆ
ಸೋಪಾನ ಹಾಡುತ್ತಿದ್ದವು.
ಈಗ ದೈತ್ಯಾಕಾರದ
ಫೋನ್ ಟವರ್ ನಿಂತಿವೆ
ಕರ್ಕಶ ಸಪ್ಪಳ
ವಿಲಿ ವಿಲಿ ಒದ್ದಾಡಿ
ಮರಿಗಳು ಸತ್ತವು
ಮೊಟ್ಟೆಯೊಡೆದು
ಆಸು ನೀಗಿದವು
ಎಳೆಯ ಭ್ರೂಣ .
ಕನಿಕರವಿಲ್ಲದ
ಮನುಜ ರಕ್ಕಸ
ಹೊರಗೆ ಸೂರ್ಯ
ಬೆಂಕಿ ಉಗುಳುತ್ತಿದ್ದಾನೆ.
ಕೆರೆ ನುಂಗಿ ಈಗ
ಭವ್ಯ ಬಂಗಲೆಗಳು
ಇಲ್ಲ ಕುಡಿಯಲು ನೀರು
ತಿನ್ನಲು ಕಾಳು
ಕಸಿದು ಕೊಂಡರು
ನಮ್ಮ ಕನಸುಗಳು ಸೂರು
ವಿಜ್ಞಾನದ ಆವಿಷ್ಕಾರಗಳ
ಭರಾಟೆ
ಕ್ಷಿಪಣಿಗಳ ಹಾರಾಟ
ಯುದ್ಧ ಅಣು ಬಾಂಬು
ಎಲ್ಲೆಡೆ ವಿಷಾನಿಲ ಸೋರಿಕೆ
ಸೋತಿದ್ದೇವೆ ಸತ್ತಿದ್ದೇವೆ
ವಿದಾಯ ಹೇಳುತ್ತೇವೆ
ನಮ್ಮನ್ನು ಕೊಲ್ಲುವ
ನೀವಾದರೂ ಬದುಕಿ
ನಗೆ ನೆಮ್ಮದಿ ಸಂತಸದಿ
ಹೋಗಿ ಬರುತ್ತೇವೆ ನಾವು
ಭೂಮಿಯ ಪಳೆಯುಳಿಕೆ
ಡಾ ಶಶಿಕಾಂತ ಪಟ್ಟಣ
Excellent poem amazing lines