ಯುಗಾದಿ ವಿಶೇಷ

ನಾಗರತ್ನ ಎಚ್ ಗಂಗಾವತಿ

ಹರುಷ.

ನವಮಾಸದಿ ಹರ್ಷದಿಂದ
ದ್ವೇಷವ ಮರೆತು
ಪ್ರೀತಿಯಿಂದ ಎಲ್ಲರ ಬಾಳಲಿ ಮೂಡಲಿ
ಹೊಸ ಚೈತನ್ಯದೊಂದಿಗೆ ಒಟ್ಟಾದ ನವ ಹರ್ಷ

ಕೃತಿ ಕೃತಿಯಲ್ಲಿ ಹೊಸ ಹೊಸ
ಕಾರ್ಯದೊಂದಿಗೆ
ಮುನ್ನಡೆಯಲಿ ನೋವು ನಲಿವ ಮರೆತು
ಕೋಗಿಲೆಯ ಧ್ವನಿಯ ಕೇಳಲು ನವಯುಗದ ಸಂತಸ

ಎಲ್ಲೆಡೆ ನೋಡು ಹಚ್ಚ ಹಸಿರು ತಂಪು
ನವಿಲಿನ ನಾಟ್ಯವ
ನೋಡುತಲಿ ಮನದಿ ಮೂಡಲಿ ಹೊಸ ಹುರುಪುಗಳ ನವಮಾಸ

ನಾನು ನೀನು ಎನ್ನದೆ
ಎಲ್ಲ ರೊಟ್ಟಿಗಿರು
ಒಂದಾಗಿ ಹಬ್ಬ ಆಚರಿಸಲು ಸಡಗರವು ಸಡಗರ
ನಿನ್ನೆಯ ಕಹಿಯ ಮರೆತು ಬೆಲ್ಲದ ಸಿಹಿಯ ಸವಿದು. ಎಲ್ಲರ ಮನದಿ ಯುಗಾದಿ ನವ ಕಳೆಯ ತುಂಬಿತು

———————————————————-

.


ನಾಗರತ್ನ ಎಚ್ ಗಂಗಾವತಿ

3 thoughts on “

Leave a Reply

Back To Top