ಕಾವ್ಯ ಸಂಗ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಪ್ರೀತಿ
ಕ್ರೋಧದಿಂದ ದ್ವೇಷ
ಹುಟ್ಟುತ್ತದೆ ನಿಜ ! ಆದರೆ..!
ಪ್ರೀತಿ ಸತ್ತು ಸಮಾಧಿಯ
ಸ್ನೇಹ ಮಾಡಿದ್ದು ಯಾರಿಗೂ..
ಸುಳಿ ಸುಯ್ಯುವ ದಿಲ್ಲ
ಸಂಗಾತಿಯೇ..
ಕರಮುಗಿದು ಕೇಳುವೆ
ಬಿಟ್ಟುಬಿಡು ಕ್ರೋಧವ
ಪ್ರೀತಿಯ ಹಾದಿ..
ಬಲು ಕಠಿಣ
ಸಾಂಗತ್ಯ ಬಯಸಿ
ಹೆಜ್ಜೆಹಾಕು ಇದೇನೂ..
ಶಾಶ್ವತವಲ್ಲ ನಾಕು
ದಿನದ ಪಯಣ
ತಬ್ಬಿಕೊಂಡುಬಿಡು
ಪ್ರೀ..ತಿಯನ್ನು!!
ತಕರಾರು ಮಾಡದೇ..
ಆರುಮೆಯ ತೋಟದ
ಮೊಗ್ಗು ತಾನಾಗೇ..
ಅರಳುತ್ತದೆ
ತಣಿಸಿಬಿಡು ಸಾಕು !!
ಆರುಮೆಯ..
ಹೃದಯದಾಸೆ !
ನಿಂಗೂ..ಗೊತ್ತಿದೆ
ಪ್ರತಿಫಲ ಬಯಸು
ವದಿಲ್ಲ ಪ್ರೀತಿ
ಕೇ..ವಲ ಭರವಸೆಯ ನಂಬಿ
ಶರತ್ಕಾಲದ ತೋಟವನ್ನೇ..
ವಸಂತನಿಗೆ ಕಾಣಿಕೆ
ಕೊಟ್ಟು ಬಿಡುತ್ತದೆ ಪ್ರೀತಿ..
ಮರು ನುಡಿಯದೇ..