ಕಾವ್ಯ ಸಂಗಾತಿ
ಚಂದಿರ..
ಲಲಿತಾ ಮ ಕ್ಯಾಸನ್ನವರ

ಚಂದಿರ..
ಬೆಳದಿಂಗಳ ಬೆಳಕ ಚೆಲ್ಲುತ
ಭೂಮಿಯ ಹಣಿಕೆ ನೋಡುತ
ನೀಲಿಬಾನಲಿ ಚಿಕ್ಕಿತಾರೆ ಜೊತೆಯಲಿ
ಹಾಲ್ ಬೆಳದಿಂಗಳ ಭುವಿಗೆ ಚೆಲ್ಲಿದ ಅಧೀರ
ಭೋರ್ಗರೆವ ಶರದಿಯಲೆಯ ಮೇಲೆ
ತಂಪ ನೆರೆದು ಸಾಗಿದನು ಚಂದ್ರಚಕೋರ
ರಮ್ಯ ನೋಟದ ಒಡೆಯ ತಾನಾದನು
ಭುವಿ ಬಾನಿಗೆ ತೋರಣ ಕಟ್ಟಿದನು

ಹೂ ಹಣ್ಣಿನ ಗಿಡಕ್ಕೆ ಖಗ ಪಿಕಗಳುಲಿಗೆ
ದನಿಯಾಗುತ ಭಾವಭಾಷ್ಯ ಬರೆದ ಇಂದುಭೂಷಣ
ಗೂಡಲಿ ಆಡುತಾಡುತ ಹೊಸತನಕೆ
ಭಾಷ್ಯ ಬರೆದ ಶಶಾಂಕ ಶುಭಕರ
ಹರೆಯದ ಮನದಲ್ಲಿ ಭಾವ ಬಿತ್ತಿದ
ಹೊಸ ದಾಲಿಂಗನಕ್ಕೆ ಮುನ್ನುಡಿ ಬರೆದ
ಮೋಹನ ರಾಗಕೆ ರಾಗ ನೀಡುತ
ಬೆಳದಿಂಗಳ ಬೆಳಕನೀಡಿ ಹರಸಿದ ಚಂದ್ರಕರ
ಲಲಿತಾ ಮ ಕ್ಯಾಸನ್ನವರ