ಮನಸ್ಸು
ಲತಾ ಧರಣೇಶ್
ಎತ್ತ ತಿರುಗಲಿ ಕಂಗಳಲಿ ನಿನ್ನದೇ ನೋಟ
ಮುಳ್ಳಿನ ಹಾಸಿಗೆ ನಿನ್ನಯ ನೆನಪುಗಳೇ
ಬದುಕಲಿ ಮುಳುಗಲಿದೆ ಪ್ರೀತಿ ನಿನ್ನದೇ ಕಾಟ
ಸಂಸಾರ ಸಾಗರದಲಿ ಮುಳುಗದ ನೋವುಗಳೇ
ನಿನ್ನನೆ ಮೆಚ್ಚಿದೆ ನಿಶ್ಚಲದಲಿ ಮೊಬ್ಬಾಗಿದೆ ನೋಟ ಬೇಡವಾಗಿದೆ ಬದುಕು ಇಲ್ಲಸಲ್ಲದ ಮಾತುಗಳೇ
ಮಿಂಚಿ ಮಿನುಗುವ ತಾರೆಗಳ ಒಲವಿನ ಕೂಟ
ಏರಲಾರೆವು ನಿಮ್ಮಲ್ಲಿಗೆ ಮೆಚ್ಚಿಕೊಂಡು ಮನಸುಗಳೇ
ಹುಣ್ಣಿಮೆ ರಾತ್ರಿಯಲಿ ನೆಲಗಾಳಿ ಬೆಳದಿಂಗಳ ಊಟ
ಯಾರು ತಿಳಿಯರು ಈ ಸೃಷ್ಟಿಯ ನಿಯಮಗಳೇ
ಲತಾ ಧರಣೇಶ್