ಶೃಂಗಾರ
ನಾಗರತ್ನ ಎಚ್ ಗಂಗಾವತಿ
ಮನೆಯ ಅಂಗಳದಿ
ಆಡಿ ಬೆಳೆದಾಕೆ.
ಮನೆ ಮನಗಳ
ಬೆಳಕು ಈಕೆ
ಅಣ್ಣನ ಮುದ್ದಿನ ತಂಗಿ ಈಕೆ
ಅಪ್ಪನ ನೆಚ್ಚಿನ ಮಗಳು ಈಕೆ
ಸಂಸಾರವೆಂಬ ನೌಕೆ
ಹೊತ್ತು ನಡೆಸಿದಾಕೆ.
ಮಗುವಿನ ಹಸಿವ
ಅರಿತು ನೀಗಿಸಿದಾಕೆ.
ಅಮ್ಮನ ಮನವ ಕದ್ದಕೆ
ಗೆಳತಿಯ ರೊಂದಿಗೆ ಆಡಿ ಬೆಳೆ ದಾಕೆ.
ಶೃಂಗಾರ ಮೊಗದಕೆ
ಎಲ್ಲರ ಗಮನ ಸೆಳೆದಕೆ.
ಓ ಹೆಣ್ಣೇ ನೀ ಜಾಣೆ
ನಿನಗೊಂದು ನಮನ.
ತುಂಬಾ ಚೆನ್ನಾಗಿದೆ
Excellent friend
ಉದಯ ಕಾಲದ ಉಷಾಕಿರಣದಂತಿದೆ ಈ ಕವಿತೆಯ ಸಾಲುಗಳು.
ಉತ್ತಮ.
ಮಗಳ ಮಮತೆಯ ಕವಿತೆ