ಅಗ್ಗಿಷ್ಟಿಕೆ

ಕಾವ್ಯ ಸಂಗಾತಿ

ಭಾರತಿ ಅಶೋಕ್

ಅಗ್ಗಿಷ್ಟಿಕೆ

ಆ ಊರಲಿ ಅಪರೂಪಕೆ ಸುರಿದ ಜಡಿ ಮಳೆಗೆ ಸಿಕ್ಕಿ
ತೋಯ್ದು ತೊಪ್ಪೆಯಾದವಳೊಬ್ಬಳು
ಅಲ್ಲಿಯ ಪುಟ್ಟ ಹಿತ್ತಲಿನ ಅಗ್ಗಿಷ್ಟಿಕೆಯ ಬಿಸುಪಿಗೆ ಮೊರೆ ಹೋದಳು
ಹಿಂದೆಯೇ ಬಂದ ಬಿಸಿಲು
ಮಳೆ ಮರೆಸಿದರೂ
ಈಗವಳ ಊರಲ್ಲಿ ಮಳೆಯಾಗುತ್ತಿದೆ, ನೆನೆಯುತ್ತಲೂ ಇದ್ದಾಳೆ
ಹಿತ್ತಲುಗಳು ಇವೆ
ಆದರೆ ಅಗ್ಗಿಷ್ಟಿಕೆಯೇ ಇಲ್ಲ!
ಮತ್ತದೆ
ಆ ಊರ ಆ ಹಿತ್ತಲಿನ ಬೆಚ್ಚನೆಯ ಅಗ್ಗಿಷ್ಟಿಕೆ ನೆನಪಾಗುತ್ತಿದೆ ಅವಳಿಗೆ
ಸಿಗುವುದೆಂಬ ಭಾವದಲಿ
ಮತ್ತದೆ ಆ ಹಿತ್ತಲ ಅಗ್ಗಿಷ್ಟಿಕೆಯ
ಹುಡುಕುತ್ತಾ ನಡೆದವಳಿಗೆ
ವಿಷ್ಮಯವೆಂಬಂತೆ
ಅಗ್ಗಿಷ್ಟಿಕೆಯೂ ಕಾದು ಹೋಗಿತ್ತು ತನ್ನೊಳಗೆ ಕೆಂಡವನ್ನಿಟ್ಟುಕೊಂಡು


Leave a Reply

Back To Top