ಅಂಬಮ್ಮ ಪ್ರತಾಪ ಸಿಂಗ್-ಗಜಲ್

ಕಾವ್ಯ ಸಂಗಾತಿ

ಗಜಲ್

ಅಂಬಮ್ಮ ಪ್ರತಾಪ ಸಿಂಗ್

ಬಾಳ ಕಡಲ ಪಯಣದಲಿ ಬಿರುಗಾಳಿಯೇ ಹೆಚ್ಚು
ಬದುಕಲಿ ನಿನ್ನ ಜೊತೆಗೆ ಮುಳ್ಳ ರಾಶಿಯೇ ಹೆಚ್ಚು

ಸಪ್ತಪದಿ ತುಳಿದು ನೂರಾರು ಕನಸು ಕಂಡಿದ್ದೆ
ಮಿಥ್ಯ ಜಗದಲಿ ನೋವ ಮಾರ್ದನಿಯೇ ಹೆಚ್ಚು

ಮೂರುಗಂಟಿನ ನಂಟಲಿ ಏಳು ಜನ್ಮಗಳ ಬಂಧ
ಹುಟ್ಟು ಸಾವಿನ ಎಣಿಕೆಯಲಿ ಚಿಂತೆಯೇ ಹೆಚ್ಚು

ಮೆಹಂದಿ ರಂಗು ಕರಗುವ ಮೊದಲೆ ಬದುಕು ಭಾರ
ನಿಶ್ಯಬ್ದ ರಾತ್ರಿಯಲಿ ವಿರಹದ ಬಿಕ್ಕಳಿಕೆಯೇ ಹೆಚ್ಚು

ಜಗತ್ತು ಒಂದೆ ವೇಗದಲ್ಲಿಂದು ಓಡುತ್ತಿದೆ ವನಿತಾ
ಪ್ರೀತಿಯ ತಂಪು ತಾಣದಲೂ ಬಿಸಿಲಧಗೆಯೇ ಹೆಚ್ಚು


Leave a Reply

Back To Top