ಕಾವ್ಯ ಸಂಗಾತಿ
ಈಶ್ವರ ಜಿ ಸಂಪಗಾವಿ
ಗಜಲ್
ನಡುವೆ ಯಾರೋ ಹಾಕಿದ ಗೆರೆ ಇದು ದಾಟಬಾರದೆಂದು
ಮನದಲಿ ಯಾಕೋ ಬರೆದೇ ಬಿಟ್ಟಿದೆ ತಾಳಬಾರದೆಂದು
ಗೆರೆ ಮೀರಿ ಬರಬಾರದೆಂಬ ಆಣೆ ಮಂತ್ರ ಹಾಕಿರಬಹುದೆ
ವಯಸು ಕೇಳಿದೆ ಕಬಡ್ಡಿ ಆಟವ ಯಾಕೆ ಆಡಬಾರದೆಂದು
ನೀನು ಜಿಗಿದು ಇಲ್ಲವೇ ನಾನತ್ತ ಹಾರಿ ಕೈಯ ಮುಟ್ಟೋಣ
ಗಟ್ಟಿಯಾಗಿ ಅಪ್ಪಿ ಹಿಡಿದು ಬೇಗ ಮೇಲೆ ಏಳಬಾರದೆಂದು
ಧೈರ್ಯಮಾಡಿ ಲಕ್ಷ್ಮಣರೇಖೆ ಎಂಬುದ ಮರೆತು ಬಾ ಇಲ್ಲಿ
ನನ್ನ ಅಂಕಣದಿ ಸೋಲಿಸಿಬಿಡು ಎತ್ತಲು ಓಡಬಾರದೆಂದು
ಈಶನಾಡಿಸಿದ ಆಟವಿದೆಂದು ಜನರಾಡಿ ನಗಬಾರದಿಂದು
ಸಭ್ಯತೆಯ ರೇಖೆ ಪಾರಾದ ಅಳುಕ ನಿನ್ನ ಕಾಡಬಾರದೆಂದು