ಲಲಿತಾ ಮ ಕ್ಯಾಸನ್ನವರ/ಪುಸ್ತಕ ಎನ್ನುವ ಜಗತ್ತು.

ಪುಸ್ತಕ ಸಂಗಾತಿ

ಪುಸ್ತಕ ಎನ್ನುವ ಜಗತ್ತು.

ಲಲಿತಾ ಮ ಕ್ಯಾಸನ್ನವರ

Huge pile of books

ಪುಸ್ತಕ ಮುಸ್ತಕದಲ್ಲಿರುವ ಜ್ಞಾನದ ಅಕ್ಕಿ ಕಾಳುಗಳನ್ನು ಹೆಕ್ಕಿ ತೆಗೆದು, ಪದಪುಂಜಗಳೆಂಬ ಅನ್ನ ಮಾಡಿ ದೇವರಿಗೆ ಸಮರ್ಪಿಸುವ ನೈವೇದ್ಯ ಎಂದು ಧಾರ್ಮಿಕರು ಹೇಳಿದರೆ, ಪುಸ್ತಕವೂ ಜ್ಞಾನದ ಬಿಡಾರ ಎಂದು ಲೇಖಕ ಪ್ರಕಾಶ್ ಕೋಡಿಹಳ್ಳಿ ಹೇಳುತ್ತಾರೆ.
ಪುಸ್ತಕವು ಆತ್ಮ ಸಂಗಾತಿ ಎನ್ನುವದು ನನ್ನ ಅನಿಸಿಕೆ. ತಲೆತಗ್ಗಿಸಿ ಓದು ನಿನ್ನ ತಲೆ ಎಂದಿಗೂ ತಗ್ಗಿಸಿದಂತೆ ನಾನು ನೋಡಿ ಕೊಳ್ಳುತ್ತೇನೆ ಎನ್ನುವ ಭರವಸೆ ಪುಸ್ತಕದಿಂದ ‌ಮಾತ್ರಸಾಧ್ಯ.ಪುಸ್ತಕಗಳು ಆತ್ಮ ಸಂಗಾತಿ ಅವು ನಮ್ಮ ಹ್ರದಯದ ಬಡಿತಕ್ಕೆ ಸ್ಪಂದಿಸುತ್ತವೆ. ಯಾರು ಎಲ್ಲಿ ಬೇಕಾದರೂ ಕೈಬಿಟ್ಟರು ಪುಸ್ತಕ ಮಾತ್ರ ಎಂದಿಗೂ ಕೈಬಿಡುವುದಿಲ್ಲ. ನೀವು ಪುಸ್ತಕ ಬಿಟ್ಟರು ಅದರ ಜ್ಞಾನ ದೀವಿಗೆ ನಿಮ್ಮನ್ನು ಸದಾ ಬೆಳಕಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
ವಿಶ್ವ ಪುಸ್ತಕ ದಿನವನ್ನು ಪ್ರತಿ ವರ್ಷ ಎಪ್ರಿಲ್ 23ರಂದು ಆಚರಿಸಲಾಗುವುದು ಮೊದಲು ವೆಲೆನ್ಸಿಯನ್ ಬರಹಗಾರ ವಿಸೆಂಟ್ ಕಾವೆಲ್ ಆಂಡ್ರೆಸ್ ಅವರದ್ದು. ಲೇಖಕ ಮಿಗುವೆಲ್ ಡಿ ಸೆರ್ವಾಂಟೆಸ್ ಅವರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಣೆಗೆ ತಂದರು.ಮೊದಲು ಆಂಡ್ರೆಸ್ ಅವರು ಸೆರ್ವಾಂಟೆಸ್ ಅವರ ಜನ್ಮದಿನ ಗುರುತಿಸಲು ಅಕ್ಟೋಬರ್ 7ರಂದು ಮತ್ತು ನಂತರ ಅವರ ಮರಣ ವಾರ್ಷಿಕೋತ್ಸವ ಗುರುತಿಸಲು ಎಪ್ರಿಲ್ 23 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಈ ದಿನವೂ ಎಲ್ಲಾ ಗ್ರಂಥ ಸೂಚಿ ಹಬ್ಬಕ್ಕಿಂತ ಕಡಿಮೆಯಲ್ಲ, ಇದನ್ನು ವಿಶ್ವ ಪುಸ್ತಕ ದಿನ ಮತ್ತು ಹಕ್ಕು ಸ್ವಾಮಿಯ ದಿನ ಎಂದು ಕರೆಯಲಾಗುತ್ತದೆ. ಇದು ಅಂತರಾಷ್ಟ್ರೀಯ ಓದುವ ದಿನವೂ ಹೌದು, ಪ್ರಕಾಶನ ಮತ್ತು ಹಕ್ಕು ಸ್ವಾಮ್ಯವನ್ನು ಉತ್ತೇಜಿಸಲು ಯುನೈಟೆಡ್ ನೇಶನ್ಸ್ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮವಾಗಿದೆ 1995ರಲ್ಲಿ ಮೊದಲ ಬಾರಿ ಈ ವಿಶ್ವ ಪುಸ್ತಕ ದಿನ ಆಚರಿಸಲಾಯಿತು.


ಪುಸ್ತಕ ಪರಿಚಯದ ಪ್ರಾಮುಖ್ಯತೆ::
ಪುಸ್ತಕಗಳು ಒಂದು ಅನನ್ಯ ಪೋರ್ಟಬಲ್ ಮ್ಯಾಜಿಕ್, ಅವು ನಮ್ಮನ್ನು ಒಂದು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಇಡೀ ಜಗತ್ತನ್ನು ಬದಲಾಯಿಸಬಲ್ಲ. ಆದ್ದರಿಂದ ಪುಸ್ತಕಗಳನ್ನು ಪ್ರೀತಿಸಿ ಅದರಲ್ಲಿನ ಒಂದೊಂದು ಅಕ್ಷರ, ಪದ ,ವಾಕ್ಯ ಸನ್ನಿವೇಶ, ಭಾವ ಲಹರಿ, ನಿಗೂಢತೆ, ಭಯಾನಕತೆ, ಬರಹದ ಉದ್ದೇಶ ಬರಹದ ಸನ್ನಿವೇಶ, ಬರಹದ ಶೈಲಿ, ಬರಹಗಾರನ ಪ್ರಯತ್ನ, ಪ್ರೇರಕರು ,ಪ್ರಕಾಶಕರು, ಓದುಗನ ಆಸ್ಥೆ,ಮನಸ್ಸಿನ ತಳಮಳ ಎಲ್ಲವನ್ನು ಒಬ್ಬ ಉತ್ತಮ ಓದುಗಾರ ವಿವೇಚಿಸಬಲ್ಲ, ಬರಹಗಾರನಿಗೆ ಸ್ಪೂರ್ತಿ ಕೊಡಬಲ್ಲ, ಲೇಖಕನ ಪ್ರೇರಣೆಗೆ ಓದುಗನ ಓದುವಿಕೆಯು ಆತ್ಮ ಸಾಕ್ಷಾತ್ಕಾರದ ನುಡಿಗಳೇ ಪುಸ್ತಕ ಪರಿಚಯ, ಆದ್ದರಿಂದ ಒಬ್ಬ ಓದುಗ 100 ಜನರನ್ನು ಒಬ್ಬ ಲೇಖಕ ಸಾವಿರ ಜನ ಓದುಗರನ್ನು ಮುಟ್ಟಲು ಇರುವ ಸೇತುವೆಯೇ ಪುಸ್ತಕ ಪರಿಚಯ.
ಕನಿಷ್ಠ 49 ಪುಟಗಳನ್ನು ಒಳಗೊಂಡಿರುವ ಮುದ್ರಿತ ಕೃತಿಯನ್ನು ಯುನೆಸ್ಕೋ ಪ್ರಕಾರ ಪುಸ್ತಕ ಎನ್ನುವರು. ಪುಸ್ತಕಗಳಲ್ಲಿ ಹಲವು ಪ್ರಕಾರಗಳಿವೆ. ಭಾವಗೀತೆ, ಮಹಾಕಾವ್ಯ, ನಾಟಕೀಯ, ಪತ್ತೆದಾರಿ, ಪ್ರಣಯ ಭಾವ, ಐತಿಹಾಸಿಕ, ಸಮಕಾಲೀನ, ಸಮಾಲೋಚನಾ, ವೈದ್ಯಕೀಯ, ಮನರಂಜನೆ, ಪಾಕೆಟ್, ಪಠ್ಯಪುಸ್ತಕ ,ಕಾಮಿಕ್ಸ್ ವೈಜ್ಞಾನಿಕ ಕೈಪಿಡಿ, ಆರೋಗ್ಯಕೈಪಿಡಿ ,ಭಾಷಾ ಪುಸ್ತಕ, ಧಾರ್ಮಿಕ, ನೀತಿ ಬೋಧಕ, ಜೀವನ ಚರಿತ್ರ ,ಕಾವ್ಯಾತ್ಮಕ ಸ್ವಸಹಾಯಕ, ಕಲಾತ್ಮಕ ಹೀಗೆ ಅನೇಕ ರೀತಿಯ ಪುಸ್ತಕಗಳಿವೆ.ಇವುಗಳನ್ನು ಓದುವುದು ಮತ್ತು ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿದರೆ ನಮ್ಮ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತವಾಗುತ್ತದೆ.
Practice makes perfect.. ಎನ್ನುವಂತೆ ಮರುಓದು ಬೇಕೇ ಬೇಕು.ಇದು ಓದಿರುವದನ್ನು ನೆನಪಿಟ್ಟುಕೊಳ್ಳಲು ಸಹಾಯಮಾಡುತ್ತದೆ. ಓದಿದನ್ನು ಮರುಮನನ ಮಾಡುತ್ತಾ ಓದಬೇಕು. ಓದುವಾಗ ಮುಖ್ಯ ಶಬ್ದ ಮತ್ತು ವಿಷಯಗಳ ಮೇಲೆ ಹೈಲೈಟ್ ಮಾಡಬೇಕು ಚಿಕ್ಕ ಚಿಕ್ಕ ಟಿಪ್ಪಣಿಗಳನ್ನು ಮಾಡಿಟ್ಟುಕೊಂಡು ಓದಬೇಕು. ಓದಲು ಉತ್ತಮವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಕೂಲಂಕುಶ ಮಾಹಿತಿ, ಪುಸ್ತಕದ ಮತ್ತು ಲೇಖಕನ ಅಂತರ್ಯದ ತಿರುಳನ್ನು ಪರಿಚಯಿಸುತ್ತಾ ಸಾಗಿದರೆ ನಾವು ಲೇಖಕನಿಗೆ ಕೊಡುವ ಯಾವ ಪ್ರಶಸ್ತಿಗಿಂತಲೂ ಕಡಿಮೆ ಏನಲ್ಲ. ಪುಸ್ತಕ ಲೇಖಕ ಇವರ ಕೊಂಡಿ ನಾವು ಓದುಗರು. ಓದುತ್ತಾ ಸಾಗಿ ಪರಿಚಯಿಸುತ್ತಾ ಹೋಗಿ.


ಜಗತ್ತನ್ನು ಬೆಳಗಲು ಒಬ್ಬ ಸೂರ್ಯ ಬೇಕು ಬದುಕನ್ನು ಬೆಳಗಲು ಒಂದು ಪುಸ್ತಕ ಬೇಕು ಪುಸ್ತಕಗಳು ಅಂತರಂಗ ಮತ್ತು ಬಹಿರಂಗದ ಜ್ಞಾನಮಾರ್ಗಗಳು. ಆಧುನಿಕತೆಯ ನಾಗಾಲೋಟದಲ್ಲಿ ಓಡುತ್ತಿರುವ ನಮಗೆ ನಮ್ಮ ಯುವ ಪೀಳಿಗೆಗೆ ಇಂದೇ ಪುಸ್ತಕದ ಗೀಳು ಹಚ್ಚಬೇಕಾಗಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಪುಸ್ತಕ ಖರೀದಿಸಿ ಓದಿ ಸಂಗ್ರಹಿಸಿ ನಮ್ಮ ನಮ್ಮ ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯ ಮಾಡೋಣ ಏನಂತೀರಿ?…



ಲಲಿತಾ ಮ ಕ್ಯಾಸನ್ನವರ.

2 thoughts on “ಲಲಿತಾ ಮ ಕ್ಯಾಸನ್ನವರ/ಪುಸ್ತಕ ಎನ್ನುವ ಜಗತ್ತು.

  1. ತಮ್ಮ ಪುಸ್ತಕ ಪ್ರೀತಿಯನ್ನು ಪರಿಚಯಿಸಿದ ಲೇಖನ ಸೊಗಸಾಗಿದೆ ಸಖಿ
    ಅಭಿನಂದನೆಗಳು

  2. ಪುಸ್ತಕದ ಮಹತ್ವ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಮೇಡಂ.

Leave a Reply

Back To Top