ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
???
ಒಡೆದ ಕನ್ನಡಿ
ಒಡೆದ ಹಾಲು
ಒಡೆದ ಒಲವು
ನನಸಾಗದ
ಕನಸಿನ ನೆನಪಲಿ
ಹೊರಬಂದ ಕಣ್ಣೀರು
ಹೊಟ್ಟೆಯೊಳಗೆ
ಸತ್ತಾಗ ಕೂಸು
ತಾಯಿಗಾದ ತ್ರಾಸು
ಹದ್ದೊಂದು ಬಂದು
ಕಣ್ಬಿಡದ ಮೈನಾ
ಮರಿಯ ನುಂಗಿದ ಚಿತ್ರ
ಮುಂಗುಸಿ
ಎದುರಾದಾಗ
ತನುವ
ಅಡಗಿಸಲು
ಹೆಣಗುವ ಉರಗ
ಸಾವ ನೆಣೆಸುವ ನಾನು
ನನ್ನ ಆರುಮೆಯ
ಆಚೆಗಟ್ಟಿ ಸುಖವ
ನರಸಲು ಅಲೆದಾಡುವ ನೀನು
ಇದೇನಾ ಬದುಕು