ಅಂಕಣ ಸಂಗಾತಿ
ಸಕಾಲ
ಆರಂಭಿಕ ಶಿಕ್ಷಣ ಬಾಂಧವ್ಯಕ್ಕೆ ಭೂಷಣ
ಟೀಚರ್ ನಮ್ಮ ಅಪ್ಪ ದಿನಾ ಕುಡಿದು ಬರುತ್ತಾರೆ,ರಾತ್ರಿಯಿಡಿ ಅಮ್ಮನೊಂದಿಗೆ ಜಗಳವಾಡುತ್ತಾರೆ.ಊಟಮಾಡಲು ಬಿಡಲ್ಲ,ಮಲಗಲು ಬಿಡಲ್ಲ,ಸಿಕ್ಕ ವಸ್ತುಗಳಿಂದ ಮನೆಯನ್ನು ಅಸ್ತವ್ಯಸ್ತ ಮಾಡುತ್ತಾರೆ. ರಾತ್ರೋರಾತ್ರಿ ನಮ್ಮನ್ನು ಅಮ್ಮನನ್ನು ಮನೆಯಿಂದ ಹೊರ ಹಾಕಿ ಬಾಗಿಲು ಜಡಿದು ತಾವೊಬ್ಬರೆ ಮಲಗುತ್ತಾರೆ.ನಾವು ಚಳಿಯಲ್ಲಿ ನಡುಗುತ್ತ,ಅಕ್ಕಪಕ್ಕದವರ ನೆರವಿನಿಂದ ಬಾಗಿಲ ಬಳಿ ಕುಳಿತಾಗ ಅಮ್ಮ ಕಣ್ಣೀರು ಹಾಕುತ್ತ ಬಿಗಿದಪ್ಪಿ ತಾನು ರಾತ್ರಿಯಿಡಿ ಜಾಗರಣೆ ಮಾಡುತ್ತಾಳೆ. ಉಪವಾಸದಿಂದ ನಿದ್ರೆ ಬರದೆ ಹಸಿವೆಂದಾಗ ಕಣ್ಣೀರೆ ಊಟನಮಗೆ. ಬೆಳಗಾಗುತ್ತಲೇ ಅಪ್ಪ ಏನು ಆಗಿಲ್ಲದ ರೀತಿಯಲ್ಲಿ ಇದ್ದಾಗ ನಮಗೆಲ್ಲ ಭಯ.ಯಾವಾಗ ಏನಾಗುವುದೋ ನಿಮ್ಮ ಅಪ್ಪನಂತೆ ನೀವಾಗ ಬೇಡಿ, ಚೆನ್ನಾಗಿ ಕಲಿತು ಜೀವನ ಮಾಡಿ ನಮ್ಮಂತೆ ಬೇಡ ಎನ್ನುತ್ತ ಶಾಲೆಗೆ ಕಳಿಸುವಳು ಎಂದಾಗ ಕರುಳು ಚುರ್ ಎಂದಿತು.ಮಕ್ಕಳು ಎಲ್ಲವನ್ನು ಗಮನಿಸುವರು.ಭಾವಿಭವಿಷ್ಯ ಕಾಣಬೇಕಾದ ಮಕ್ಕಳಿಗೆ ಇಂತಹ ಸ್ಥಿತಿಗಳು ಎಂತಹ ಪರಿಣಾಮ ಬೀರಲು ಸಾಧ್ಯ.ಕುಟುಂಬ ಸಮಾಜದ ಒಂದು ಅಂಗವೆಂಬುದನ್ನು ಮರೆಯಬಾರದು.
ಅಪ್ಪ-ಅಮ್ಮನಲ್ಲಿ ಹೊಂದಾಣಿಕೆ ಸರಿ ಇದ್ದರೆ ಮಕ್ಕಳು ಖಂಡಿತಾ ಯಶಸ್ಸು ಕಾಣುತ್ತಾರೆ.ಕೆಲವೊಂದು ಅಧ್ಯಯನಗಳ ಪ್ರಕಾರ,ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಮಕ್ಕಳ ಪೋಷಕರು ಕೂಡ ಅದೇ ರೀತಿಯ ಗುಣಲಕ್ಷಣಗಳನ್ನು ಮಕ್ಕಳ ಯಶಸ್ಸಿನ ಮೇಲೆ ಪೋಷಕರು ಯಾವ ರೀತಿ ಪ್ರಭಾವ ಬೀರುತ್ತಾರೆ.ಪ್ರತೀ ಮಗುವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ, ಹಾಗಾಗಿ ನಾವು ಯಾವತ್ತಿಗೂ ಮಕ್ಕಳನ್ನು ಬೇರೆ ಮಕ್ಕಳ ಜೊತೆಗೆ ಹೋಲಿಸಬಾರದು.ಮಕ್ಕಳು ಬೆಳೆಯುವ ರೀತಿ ಮತ್ತು ಅವರ ಸಾಮರ್ಥ್ಯಗಳ ಮೇಲೆ ಹೆತ್ತವರ ಸ್ಥಿತಿ ಕೂಡ ಪರಿಣಾಮ ಬೀರುತ್ತದೆ. ಅಂದರೆ, ಕೆಲವು ಮಕ್ಕಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ಮಾಡಿ ತೋರಿಸುತ್ತಾರೆಂದರೆ, ಅದಕ್ಕೆ ಅವರ ಪೋಷಕರು ಕೂಡ ಒಂದು ರೀತಿಯಲ್ಲಿ ಕಾರಣರಾಗಿರುತ್ತಾರೆ.ಕೆಲವೊಂದು ಅಧ್ಯಯನಗಳ ಪ್ರಕಾರ,ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುವ ಮಕ್ಕಳ ಪೋಷಕರು ಕೂಡ ಅದೇ ರೀತಿಯ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ. ಮಕ್ಕಳ ಯಶಸ್ಸಿನ ಮೇಲೆ ಪೋಷಕರು ಯಾವ ರೀತಿ ಪ್ರಭಾವ ಬೀರುತ್ತಾರೆ ಎಂಬುದನ್ನು ಸ್ವಲ್ಪ ಅರ್ಥೈಸಿಕೊಳ್ಳುವುದು ಮುಖ್ಯಾನಿಸುತ್ತೆ.
ಇಂದಿನ ಸಮಯದಲ್ಲಿ ಅಪ್ಪ ಅಮ್ಮ ಇಬ್ಬರೂ ದುಡಿತವನ್ನು ಅವಲಂಬಿಸಿರುವುದು ಅನಿವಾರ್ಯದ ಸಂಗತಿ.ಅದರಲ್ಲ ಉದ್ಯೋಗಸ್ಥ ತಾಯಂದಿರು,ತಮ್ಮ ಮಗು ಪ್ರತ್ಯೇಕತೆಯ ಆತಂಕದಿಂದ ಬಳಲುತ್ತಿದ್ದರೆ ಅದರ ಬಗ್ಗೆನಿಗಾ ವಹಿಸುವುದು ಅನಿವಾರ್ಯ.ಮಕ್ಕಳ ಬೆಳವಣಗೆಯು ಮತ್ತು ಪ್ರತಿ ನಡವಳಿಕೆಗಳಿಗೆ,ಉದ್ಯೋಗಸ್ಥ ತಂದೆ ತಾಯಂದಿರು ಕೂಡ ಮಕ್ಕಳ ಮುಂದೆ ಒಂದು ಉದಾ.ಯನ್ನು ಸೃಷ್ಟಿಸುತ್ತಾರೆ.ಮಕ್ಕಳಿಗೆ ತಮ್ಮ ತಂದೆ ತಾಯಿ ಯಾವ ಕೆಲಸ ಮಾಡುತ್ತಾರೆ,ತಾವು ಮುಂದೆ ಏನಾಗಬೇಕು ಎಂಬ ಚಿಂತನೆಯನ್ನು ಸೂಕ್ಷ್ಮವಾಗಿ,ತಾವು ಉದ್ಯೋಗಸ್ಥ ಮಹಿಳೆ/ಪುರುಷ ಎಂಬ ಕಲ್ಪನೆಯನ್ನು ಆಂತರಿಕವಾಗಿ ಗ್ರಹಿಸುತ್ತಾರೆ.ಗಂಡ್ಮಕ್ಕಳು ಮನೆ ಕೆಲಸಗಳಲ್ಲಿ ತೊಡಗಿಕೊಳ್ಳುವ ಅಥವಾ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವರು ಮತ್ತು ಹೆಣ್ಣು ಮಕ್ಕಳು ತಾಯಿಯ ನಡವಳಿಕೆಯನ್ನು ಮಾದರಿಯಾಗಿ ಇಟ್ಟುಕೊಂಡು ವೃತ್ತಿಯ ಆಕಾಂಕ್ಷೆಗಳನ್ನು ತಮ್ಮದಾಗಸಿ ಕೊಳ್ಳಲು ಇದು ಕಾರಣವಾಗುತ್ತದೆ.
ಇದರಿಂದಾಗಿ ಉದ್ಯೋಗಸ್ಥ ತಾಯಂದಿರಿಂದ ಆಗುವ ಇನ್ನೊಂದು ಕಾರಣವೆಂದರೆ ಲಿಂಗ ಸಮಾನತೆ.ಉದ್ಯೋಗಸ್ಥ ತಾಯಂದಿರಿಗೆ ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕೆಲಸ ಮಾಡುವ ಹಾಗೂ ಪ್ರೋತ್ಸಾಹ ನೀಡುವುದು ಮತ್ತು ಸಹಾಯ ಮಾಡುವ ಗುಣಗಳನ್ನು ಹೊಂದಿರುವಂತೆ ಹೊಂದಾಣಿಕೆ ಮನೋಭಾವ ಬೆಳೆಸಲು ಸಹಕಾರಿ. ಮಕ್ಕಳಿಗೆ ಕೆಲಸಗಳನ್ನು ನೀಡುವುದು ಬಹು ಮುಖ್ಯ.ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಚಿಕ್ಕಪುಟ್ಟ ಕೆಲಸಗಳ ಜವಾಬ್ದಾರಿಯನ್ನು ವಹಿಸುವುದು ಅವರ ಭವಿಷ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿ ಸಾಬೀತಾಗಬಲ್ಲದು ಎಂಬುವುದರಲ್ಲಿ ಎರಡು ಮಾತಿಲ್ಲ.ಜವಾಭ್ಧಾರಿ ತೆಗೆದುಕೊಳ್ಳುವುದು ಮತ್ತು ಕೆಲಸದಾಳು ಅಥವಾ ಪೋಷಕರ ಮೇಲೆ ಅವಲಂಬಿತವಾಗಿರದ ಪರಿಸ್ಥಿತಿ ಮಕ್ಕಳಲ್ಲಿ ಸ್ವತಂತ್ರ ಹಾಗೂ ಸ್ವಾಯತ್ತತೆಯ ಪ್ರಜ್ಞೆ ಮೂಡಲು ಸಹಾಯ ಮಾಡುತ್ತದೆ. ಅವೆರಡೂ ಭವಿಷ್ಯದಲ್ಲಿ ಪ್ರೇರಕ ಅಂಶಗಳಾಗಿ ಕೆಲಸ ಮಾಡುತ್ತವೆ. ಬಟ್ಟೆ ಒಗೆಯಲು ಅಥವಾ ಮಡಚಲು ಸಹಾಯ ಮಾಡುವುದ,ಕಸಹೊರ ಹಾಕಿಬರುವುದು ಮುಂತಾದ ಕೆಲಸಗಳು ಬಹಳಷ್ಟು ಉಪಯೋಗಕಾರಿ ಆಗಬಲ್ಲವು.
ಆರೋಗ್ಯಕರ ಸಂಬಂಧಗಳು ಪ್ರತಿ ಕುಟುಂಬದಲ್ಲಿ ಇರಲೇ ಬೇಕು, ಕಲಹದ ವಾತಾವರಣವುಳ್ಳ ಕುಟುಂಬ ಅಥವಾ ವಿಚ್ಚೇದಿತ ಪೋಷಕರ ಕುಟುಂಬದಲ್ಲಿ ಬೆಳೆದ ಮಕ್ಕಳಿಗೆ ಹೋಲಿಸಿದರೆ, ಪರಸ್ಪರ ಪ್ರೀತಿ ವಿಶ್ವಾಸದ ಮತ್ತು ಆರೋಗ್ಯಕರ ಸಂಬಂಧವನ್ನು ಹೊಂದಿರುವ ಪೋಷಕರ ಮಕ್ಕಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಾರೆ. ಏಕೆಂದರೆ ವಿಚ್ಚೇದನ ಮತ್ತು ಅನ್ಯ ರೀತಿಯ ಸಂಘರ್ಷಗಳು ಮಾನಸಿಕ ಬೆಳವಣಿಗೆ ಮತ್ತು ಭಾವನಾತ್ಮಕ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿರಂತರ ಕಲಹಗಳಿಂದ ಉಂಟಾಗುವ ನೋವು ಹಾಗೂ ಸಂಕಟ ಮಕ್ಕಳ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಆರಂಭಿಕ ಗಣಿತ ಕಲಿಕೆ,ಶಾಲೆಗೆ ಹೋಗಲು ಆರಂಭಿಸುವ ಮುನ್ನವೇ ಲೆಕ್ಕವನ್ನು ಕಲಿಸುವುದು “ಪ್ರಾರಂಭಿಕ ಶಿಕ್ಷಣ” ಎನ್ನಲಾಗುತ್ತದೆ. ಗಣಿತದ ಮೂಲಭೂತ ಪರಿಕಲ್ಪನೆಗಳಾದ ಸಂಖ್ಯೆಯ ಕ್ರಮ ಮತ್ತು ಮಗ್ಗಿಗಳನ್ನು ಪೋಷಕರು ಮಕ್ಕಳಿಗೆ ಆರಂಭದ ಹಂತದಲ್ಲೇ ಕಲಿಸಿದ್ದರೆ, ಭವಿಷ್ಯದಲ್ಲಿ ಅಂತಹ ಮಕ್ಕಳು ಉತ್ತಮ ಗಣಿತ ಮತ್ತು ಓದುವ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ಅಧ್ಯಯನಗಳು ತಿಳಿಸಿವೆ. ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಹೊಂದಿರುತ್ತಾರೆ,ಶಿಕ್ಷಣವನ್ನು ಪೂರ್ಣಗೊಳಿಸದ ಪೋಷಕರು ತಮ್ಮ ಮಕ್ಕಳನ್ನು ಅದೇ ಹಾದಿಯಲ್ಲಿ ಬೆಳೆಸುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಪಡೆದ ಪೋಷಕರು , ‘ಸಾಮಾನ್ಯ’ಎಂಬ ಪರಿಕಲ್ಪನೆಯಡೆಗಿನ ತಮ್ಮ ಮಕ್ಕಳ ದೃಷ್ಟಿಕೋನ ಬದಲಾಯಿಸಿ,ಅವರನ್ನು ಯಶಸ್ಸಿನ ಹಾದಿಯಲ್ಲಿ ನಡೆಯಲು ಪ್ರೋತ್ಸಾಹಿಸುತ್ತಾರೆ.ಅದು ಅಸಾಮಾನ್ಯನು ಅಸಾಧಾರಣ ವ್ಯಕ್ತಿಯಾಗಿ ಬೆಳೆಯಲು ದಾರಿತೋರಿದಂತೆ.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
Nice madam
ಸರ್ವ ಕಾಲಿಕ ಸತ್ಯ ವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.. ಒಂದೊಂದು ಸಾಲುಗಳು ಮನ ಮುಟ್ಟುವಂತೆ ಮೂಡಿಬಂದಿದೆ.