ಕುವೆಂಪು ವಿವಿ ಕನ್ನಡ ಭಾರತಿ ಯ ಹೆಮ್ಮೆಯ ಸಾಧಕ

ವಿಶೇಷ ಲೇಖನ

ಕುವೆಂಪು ವಿವಿ ಕನ್ನಡ ಭಾರತಿ ಯ ಹೆಮ್ಮೆಯ ಸಾಧಕ

ಕುವೆಂಪು ವಿವಿ ಕನ್ನಡ ಭಾರತಿ ಯ ಹೆಮ್ಮೆಯ ಸಾಧಕ

       ಸಾಧನೆ ಎಂಬುದು ಸಾಧಕರ ಸ್ವತ್ತು.ತುಂಬಿದ ಜ್ಞಾನಸೆಲೆಯನ್ನು ಯಾರಿಂದಲೂ ಧ್ವಂಸ‌ ಮಾಡಲಾಗದು.ನಮ್ಮೊಳಗಿರುವ ವಿದ್ಯೆ ಸ್ಥಿರವಾದ ಸಂಪತ್ತಾಗಿರುತ್ತದೆ.ತುಂಬಿದ ಕೊಡ ತುಳುಕಲಾರದು  ಎಂಬ ಮಾತು‌ ನಿಜ.ವಾಗ್ದೇವಿಯ ಭಂಡಾರವನ್ನು ತಮ್ಮ ಖಜಾನೆಯಲ್ಲಿ ಇರಿಸಿಕೊಂಡು ಸಾತ್ವಿಕ ಚಿಂತನೆಯಡಿಯಲ್ಲಿ  ಹಮ್ಮು ಬಿಮ್ಮುಗಳಿರದ ಸೀದಾಸಾದಾ ನೇರ ನಡೆ ನುಡಿಯ, ಯಾವುದೇ ತೆರನಾದ ಪ್ರಚಾರವನ್ನು ಬಯಸದ  ಹಾಗೂ  ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ, ಸ್ನೇಹಿತರ ಹಿತೈಶ್ರೀಗಳ ಆಪ್ತ ಜೀವವಾಗಿ,ಕಷ್ಡದಲ್ಲಿ ತೊಂದರೆ ಸಂಕಷ್ಟದಲ್ಲಿ ಸಿಲುಕಿದವರಿಗೆ ದಾರಿದೀಪವಾಗಿರುವ,

ಪ್ರೊ ಶಿವಾನಂದ ಕೆಳಗಿನಮನಿ ಅವರು ಕುವೆಂಪು ಕನ್ನಡ ಭಾರತಿಯಲ್ಲಿ ಸುಮಾರು ೨೦೦೮ ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಶ್ರೇಷ್ಟತೆಯ ವ್ಯಸನವನ್ನು  ಹೊಂದಿರದ,ಆಡಂಬರ‌ದ ಸೋಗಿಗೆ ಅಂಟಿ ಕೊಳ್ಳದೆ,ಪ್ರಶಸ್ತಿಯ ಹಿಂದೆ ಓಡದ ಅತ್ಯಂತ ಸರಳ ಸಜ್ಜನ ವ್ಯಕ್ತಿತ್ವ ಹೊಂದಿರುವ ಕೆಳಗಿನಮನಿಯವರು ವಿಭಿನ್ನ ಆಯಾಮದ ದೃಷ್ಟಿಕೋನಗಳನ್ನು ಹೊಂದಿದವರು.,

ಹಾಗೂ ಸದಾ ಕಾರ್ಯತತ್ಪರತೆಯಲ್ಲಿ ದಕ್ಷತೆಯನ್ನು, ಹಿಡಿದಿಟ್ಟುಕೊಂಡು ತಮ್ಮ ಕೈಂಕರ್ಯದಲ್ಲೇ ತನ್ಮಯತೆಯನ್ನು ಕಾಣುವ ಇಂತಹ ವ್ಯಕ್ತಿತ್ವದವರು ಬಹಳ ಅಪರೂಪ.ಇಂತಹ ಪಾಂಡಿತ್ಯಪೂರ್ಣ ವ್ಯಕ್ತಿತ್ವದವರು ನಮ್ಮ‌ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಇರುವುದೊಂದು ಅತಿದೊಡ್ಡ ಹೆಮ್ಮೆ ಎಂದರೆ ಅದು ಅತಿಶಯೋಕ್ತಿ ಆಗಲಾರದು. ವಿದ್ವತ್ಪೂರ್ಣ ಮಹನೀಯರು‌ ದಿನಾಂಕ:-೧೮-೦೧-೨೦೨೩ ರಂದು ಕುವೆಂಪು ಕನ್ನಡ ಭಾರತೀಯ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿರುವುದು ನಮ್ಮ ಹೆಮ್ಮೆಯ ಕುವೆಂಪು ವಿವಿಗೆ ಭಾಗ್ಯೋದಯದ ಸಮಯವೆಂದೆ ತಿಳಿಯಬಹುದಾಗಿದೆ. ಈಗಾಗಲೇ ಸರಿ ಸುಮಾರು ೬೩ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಮೇರು ಸಾಹಿತಿ ಸಂಶೋಧಕರು‌ ಚಿಂತಕರಾದ ಇವರ ಉಳಿದ ೧೨ ಕೃತಿಗಳು ಪ್ರಕಟಣಾ ಕಾರ್ಯದ ಚಲನೆಯಲ್ಲಿವೆ. ಇಂತಹ ಬಹುಮುಖ ಪ್ರತಿಭಾ ಸಂಪನ್ನರಾದ ಇವರು ನಾವೀನ್ಯಶೀಲ ಚಿಂತನೆಯೊಂದಿಗೆ ಸೃಜನಾತ್ಮಕ ಕಾರ್ಯಕ್ಷಮತೆ ಸೇರಿ ಬಹು ಉಪಯುಕ್ತವಾದ ಯೋಜನೆಗಳು ಅನುಷ್ಠಾನಗೊಂಡು ಸಾಕಾರಗೊಳ್ಳಲಿ.

ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಪ್ರೇರಣಾದಾಯಕವಾಗಿರಲಿ ಎಂಬುದು ನಮ್ಮ ಶುಭ ಹಾರೈಕೆ.ಕುವೆಂಪು ವಿವಿ ಯ ಕನ್ನಡ ಭಾರತಿಯು ನಾಡಿನೆಲ್ಲೇಡೆ ಮತ್ತು ಹೊರನಾಡಿಗೂ ಕನ್ನಡದ ಕಂಪು ಪಸರಿಸಲಿ ಎಂಬ ಸದಾಶಯದೊಂದಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿರುವೆ.

ಪ್ರೊ. ಶಿವಾನಂದ ಕೆಳಗಿನಮನಿ ಅವರ ಒಂದು ಕಿರು ಪರಿಚಯ:-

1. ಹೆಸರು                      :     ಡಾ. ಶಿವಾನಂದ ಕೆಳಗಿನಮನಿ

2. ಜನ್ಮಸ್ಥಳ                  :    ಹಾವೇರಿಜಿಲ್ಲೆ ಸುಣಕಲ್ಲಬಿದರಿ

3. ವಿದ್ಯಾರ್ಹತೆ             :     ಕನ್ನಡ ಎಂ.ಎ., ಪಿಎಚ್.ಡಿ.

                                ಡಿಪ್ಲೋಮ ಇನ್ ಬಸವ

                                ಡಿಪ್ಲೋಮ ಇನ್ ಲಿಂಗ್ವಿಸ್ಟಿಕ್

5.  ವೃತ್ತಿ                        :   ಪ್ರಾಧ್ಯಾಪಕರು

                                         ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ

                                         ಜ್ಞಾನ ಸಹ್ಯಾದ್ರಿ, ಶಂಕರಘಟ್ಟ, 577 451

6. ಸೇವಾ ಅನುಭವ      :     ೨೫ ವರ್ಷಗಳು ವರ್ಷಗಳು

ಸಂಶೋಧನಾ ಯೋಜನೆಗಳು

ಕನಕದಾಸ ರಾಷ್ಟೀಯ ಇತಿಹಾಸ ಮತ್ತು ಸಂಶೋಧನೆಕೇAದ್ರ ಬೆಂಗಳೂರು.

1.    ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕ ಸಂಘರ್ಷ- ೨೦೧೧-೧೩

ಯು.ಜಿ.ಸಿ. ಯೋಜನೆ

2.    ಮಾದಿಗ ಲಿಂಗಾಯಿತರು ಒಂದು ಅಧ್ಯಯನ -೨೦೦೮

3.    ಕರ್ನಾಟಕದಲ್ಲಿ ಮಾತಂಗಿ ಸಂಸ್ಕೃತಿ ಮತ್ತುದೈವಾರಾಧನೆಒಂದುಅಧ್ಯಯನ

ರಾಷ್ಟೀಯ ಸಂತ ಕನಕದಾಸ ಸಂಶೋಧನ ಕೇಂದ್ರ, ಬೆಂ.

4.    ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕ ಅನನ್ಯತೆ-೨೦೧೫

ಸಾಹಿತ್ಯ ಅಕಾಡೆಮಿ ಯೋಜನೆ

5.    ಭೈರರ ಸಂಸ್ಕೃತಿಯಲ್ಲಿ ಮಹಿಳೆ -೨೦೦೮

6.    ಕಾಳಮುಖ ದರ್ಶನ-೨೦೨೨

7.    ವೀರ ಮಾಹೇಶ್ವರರು-೨೦೨೨

ಭಾಷಾಭಿವೃದ್ಧಿ ಪ್ರಾಧಿಕಾರ

8.    ಕಿತ್ತೂರು ಕರ್ನಾಟಕ ಪ್ರಜ್ಞೆ-೨೦೨೧

1.   ನಿರ್ದೇಶಕರು, ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ-೨೦೧೭-೧೮

2.    ನಿರ್ದೇಶಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ-೨೦೧೭-೧೯

3.    ಸಂಚಾಲಕರು, ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾಲಯ-೨೦೧೭ ರಿಂದ

4.    ಸಹನಿರ್ದೇಶಕರು, ಪ್ರಸಾರಾಂಗ-೨೦೧೧ ರಿಂದ೨೦೧೫

5.    ಸಂಚಾಲಕರು, ಕನ್ನಡ ಕಂಪ್ಯೂಟರ್ ಕೇಂದ್ರ-೨೦೧೧ ರಿಂದ ೨೦೧೫

6.    ಸಂಚಾಲಕರು, ದೂರಶಿಕ್ಷಣ ಕೇಂದ್ರ-೨೦೧೧ ರಿಂದ ೨೦೧೬

7.    ಕರ‍್ಯಕಾರಿ ಸಂಪಾದಕ, ವಾರ್ತಾಪತ್ರ ಪ್ರಸಾರಾಂಗ, ಕುವೆಂಪು ವಿ.ವಿ.-೨೦೧೧ ರಿಂದ ೨೦೧೫

8.    ಉಪನಿರ್ದೇಶಕರು, ಪ್ರಸಾರಾಂಗ-೨೦೧೫

9.    ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಸಲಹೆಗಾರರರು-೨೦೧೮-೧೯

10.    ಕರ್ನಾಟಕ ವಿದ್ಯಾವರ್ಧಕ ಸಂಘ ಸದಸ್ಯರು-೨೦೧೦ ರಿಂದ

11.    ದ.ರಾ.ಬೇAದ್ರೆ ರಾಷ್ಟಿçÃಯ ಟ್ರಸ್ಟ್ನ ಸದಸ್ಯರು-೨೦೧೪-೨೦೧೬

12.    ಪ್ರೊ.ತೇಜಸ್ವಿ ಕಟ್ಟೀಮನಿ ಟ್ರಸ್ಟ್ನ ಉಪಾಧ್ಯಕ್ಷರು-೨೦೧೦-೨೦೧೬

13.    ಮಾತಂಗ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ- ೨೦೧೬ ರಿಂದ

14.    ಕುವೆAಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಕಾಂಟೆAಟ್ ರಿವೀವ್ ಕಮೀಟಿ         ಸದಸ್ಯರು-೨೭.೦೬.೨೦೧೭ ರಿಂದ

15.    ಸದಸ್ಯರು, ಪರೀಕ್ಷಾ ಮಂಡಳಿ, ಕುವೆಂಪು ವಿ.ವಿ. ಶಂಕರಘಟ್ಟ

16.    ಕುವೆAಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ ಕನ್ನಡ ವಿಷಯದ ಎಂ.ಎ. ಕೋರ್ಸ್ಗೆ ಕೋ-ಆರ್ಡಿನೇಟರ್ ೨೦೧೦ ರಿಂದ

17.    ಸ್ಥಳೀಯ ತಪಾಸಣೆ ಸಮಿತಿಯ ಸದಸ್ಯರು, ಕುವೆಂಪು ವಿಶ್ವವಿದ್ಯಾನಿಲಯ. ೨೦೧೪-೧೫

18.    ಸದಸ್ಯರು, ಸ್ನಾತಕೋತ್ತರ ಅಧ್ಯಯನ ಮಂಡಳಿ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಮೈಸೂರು-೨೦೧೩ ರಿಂದ ೨೦೧೫

19.    ಸ್ಥಳೀಯ ತಪಾಸಣೆ ಸಮಿತಿಯ ಸದಸ್ಯರು, ಕುವೆಂಪು ವಿಶ್ವವಿದ್ಯಾನಿಲಯ. ೨೦೧೩-೧೪

20.    ಸದಸ್ಯರು, ಪರೀಕ್ಷಾ ಮಂಡಳಿ, ದ್ರಾವಿಡ ವಿ.ವಿ. ಕುಪ್ಪಂ ೨೦೧೪ ರಿಂದ ೨೦೧೫

21.    ಅಧ್ಯಕ್ಷರು, ಪರೀಕ್ಷಾ ಮಂಡಳಿ ಕನ್ನಡ ಭಾರತಿ, ಕುವೆಂಪು ವಿ.ವಿ. ೨೦೧೪-೧೫

22.    ಸದಸ್ಯರು, ಪರೀಕ್ಷಾ ಮಂಡಳಿ, ಮಂಗಳೂರು ವಿ.ವಿ. ೨೦೧೩ ರಿಂದ

23.    ಸದಸ್ಯರು, ಪರೀಕ್ಷಾ ಮಂಡಳಿ, ಗುಲಬರ್ಗಾ ವಿ.ವಿ. ೨೦೧೨ ರಿಂದ ೨೦೧೫

24.    ಸದಸ್ಯರು, ಪರೀಕ್ಷಾ ಮಂಡಳಿ, ಬೆಂಗಳೂರು ವಿ.ವಿ. ೨೦೧೨ ರಿಂದ ೨೦೧೫

25.    ಸದಸ್ಯರು, ಪರೀಕ್ಷಾ ಮಂಡಳಿ, ಮಹಿಳಾ ವಿ.ವಿ. ಬಿಜಾಪುರ-೨೦೧೨ ರಿಂದ

26.    ಸದಸ್ಯರು, ಪರೀಕ್ಷಾ ಮಂಡಳಿ, ಕನ್ನಡ ವಿ.ವಿ. ಹಂಪಿ ೨೦೧೨ ರಿಂದ

27.    ಸ್ಥಳೀಯ ತಪಾಸಣೆ ಸಮಿತಿಯ ಸದಸ್ಯರು, ಕುವೆಂಪು ವಿಶ್ವವಿದ್ಯಾನಿಲಯ ೨೦೧೧-೧೨

28.    ಸದಸ್ಯರು, ಪರೀಕ್ಷಾ ಮಂಡಳಿ, ಕರ್ನಾಟಕ ವಿ.ವಿ. ಧಾರವಾಡ-೨೦೧೧ ರಿಂದ ೨೦೧೪

೨೧.    ಹಾ.ಮಾ.ನಾ. ಟ್ರಸ್ಟ್, ಮಂಡ್ಯ ಆಜೀವ ಸದಸ್ಯತ್ವ-೨೦೧೪.

ಪ್ರಶಸ್ತಿಗಳು  ಮತ್ತು  ಬಹುಮಾನಗಳು

೧.    ಅಖಿಲ ಭಾರತದಲಿತ ಸಾಹಿತ್ಯಗೌರವ ಪ್ರಶಸ್ತಿ-೨೦೧೮

೨.    “ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕ ಸಾಂಸ್ಕೃತಿಕಅನನ್ಯತೆ” ಕೃತಿಗೆಕನ್ನಡ ಸಾಹಿತ್ಯ ಪರಿಷತ್ತು ೨೦೧೮ರ “ಅಣ್ಣಾಜಿರಾವ್ ಹುದ್ಧಾರ್ ಪ್ರಶಸ್ತಿ” ಪುಸ್ತಕ ಬಹುಮಾನ

೩.    ದಲಿತ ಸಾಹಿತ್ಯ ಪರಿಷತ್ತ್ ಪುಸ್ತಕ ಬಹುಮಾನ-೨೦೧೪

೪.    ಮಲ್ಲೇಪುರಂ ಜಿ. ವೆಂಕಟೇಶ ಪ್ರತಿಷ್ಠಾನ(ರಿ), ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕಅನನ್ಯತೆಕೃತಿಗೆ ಪುಸ್ತಕ ಪುರಸ್ಕಾರ

೫.    ೨೦೧೬ನೆಯ ಸಾಲಿನ ಶೈಕ್ಷಣಿಕ ಅಮೋಘ ಸಾಧನೆಗಾಗಿ `ಶಿಕ್ಷಕ ರತ್ನ’ À್ರಶಸ್ತಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಹೀಡ್ ಸ್ವಯಂ ಸೇವಾ ಸಂಸ್ಥೆ, ಬೆಂಗಳೂರು

೬.    ೨೦೧೩ನೇ ಸಾಲಿನ ಶೈಕ್ಷಣಿಕ ಸಾಧನೆಗೆ ಅಂಬೇಡ್ಕರ್ ಪ್ರಶಸ್ತಿ, ಬೆಂಗಳೂರು.

೭.     ದಲಿತ ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ-೨೦೧೧

೮.    ಗೊರಖನಾಥ ಪುರಸ್ಕರ ತಮಿಳುನಾಡು-೨೦೧೧

೯.    ಸ್ನೇಹಸೇತು ರಾಜ್ಯಮಟ್ಟದ ಪ್ರಶಸ್ತಿ ೨೦೧೦

೧೦.    ಫ.ಗು. ಹಳಕಟ್ಟಿ ರಾಷ್ಟಿçÃಯ ಪ್ರಶಸ್ತಿ-೨೦೦೯

೧೧.    ಮಾದಾರಚೆನ್ನಯ್ಯ ಬಹುಮುಖಿ ಅಧ್ಯಯನಕೃತಿಗೆಕರ್ನಾಟಕರಾಜ್ಯ ಸಾಹಿತ್ಯಅಕಾಡೆಮಿ ೨೦೦೬ರ ಪುಸ್ತಕ ಬಹುಮಾನ

೧೨.    ಸುವರ್ಣ ನಗರಿ ಸುಣಕಲ್ಲ ಬಿದರಿ ಪುಸ್ತಕಕ್ಕೆ ಅಖಿಲ ಕರ್ನಾಟಕ ಸಾಹಿತ್ಯ ಪರಿಷತ್ತು ಪುಸ್ತಕ ಬಹುಮಾನ-೨೦೦೫

೧೩.    ಪಾವಗಡತಾಲ್ಲೂಕರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರ-೨೦೧೨

ಎಂ. ಫಿಲ್ ಮಾರ್ಗದರ್ಶನ (ಯಶಸ್ವಿ)

           ಸಂಶೋಧನಾ ವಿದ್ಯಾರ್ಥಿಗಳು    ವಿಷಯ

    1.   ಎನ್.ಬಿ. ನಾಗರತ್ನ            : ಸಾರಾ ಅಬೂಬಕರ್. ಅವರ ‘ಚಂದ್ರಗಿರಿ ತೀರದಲ್ಲಿ’ ‘ವಜ್ರಗಳು’ ಮತ್ತು ‘ಸಹನಾ’ ಕಾದಂಬರಿಗಳಲ್ಲಿ ಮಹಿಳಾಪಾತ್ರಗಳು: ತೌಲನಿಕ ಅಧ್ಯಯನ

    2.  ಎಚ್.ಎಸ್. ಬಸವರಾಜಪ್ಪ : ದಾವಣಗೆರೆ ತಾಲ್ಲೂಕಿನ ‘ಕಾಳವ್ವನ ಹಬ್ಬ’-ಒಂದು ಸಾಂಸ್ಕೃತಿಕ ಅಧ್ಯಯನ

ಪಿಎಚ್.ಡಿ. ಮಾರ್ಗದರ್ಶನ (ಯಶಸ್ವಿ-21)    

          ಸಂಶೋಧನಾ ವಿದ್ಯಾರ್ಥಿಗಳು      ವಿಷಯ    ವರ್ಷ

     1.   ಡಾ. ಚೈತ್ರ.ಎ.ಪಿ.- “ ಆಧುನಿಕಕಥನ ಸಾಹಿತ್ಯದಲ್ಲಿ ಲಿಂಗರಾಜಕಾರಣದ ಸ್ವರೂಪ” ೨೦೨೨

     2.    ಡಾ. ಮೇಘನಾ.ಕೆ. : ಯಶವಂತ ಚಿತ್ತಾಲರ ಕಥೆಗಳಲ್ಲಿ ಮಾನವೀಯ ಸಂಬAಧಗಳು-೨೦೨೨

     3.    ಡಾ. ರಮೇಶ್. ಆರ್. : ಕನಕದಾಸರು ಮತ್ತು ಶಿಶುನಾಳ ಶರೀಫರ ತೌಲನಿಕ ಅಧ್ಯಯನ-೨೦೨೨

     4.    ಡಾ. ಬರಗೂರಪ್ಪ: ಅರವಿಂದ ಮಾಲಗತ್ತಿ ಅವರ ಕಾವ್ಯದ ವಿಭಿನ್ನ ನೆಲೆಗಳು-೨೦೨೧

     5.    ಡಾ. ಮಾಲತೇಶ ಪೂಜಾರ: ವೀರಶೈವ ಪುರಾಣಗಳಲ್ಲಿ ದಲಿತ ವರ್ಗದ ಶಿವಶರಣರು-೨೦೧೯

      6.    ಡಾ. ಮಂಜುನಾಥ ಸುಣಗಾರ: ಪ್ರಗತಿಶೀಲ ಕತೆಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ಮತ್ತು ಪ್ರತಿಭಟನೆ-೨೦೧೭

     7.    ಡಾ. ನಂದಿನಿ ಆರ್.: ಎಚ್. ದೇವಿರಪ್ಪ ಅವರ ಸಾಹಿತ್ಯದಲ್ಲಿ ಆಶಯ ಮತ್ತು ವಿನ್ಯಾಸ-೨೦೧೭

      8.   ಡಾ. ರಾಜೀವ್ ನಾಯ್ಕ ಎಸ್.: ಕಾಡಗೊಲ್ಲರ ಮತ್ತು ಮ್ಯಾಸಬ್ಯಾಡರ ಸಾಂಸ್ಕೃತಿಕ ಮುಖಾಮುಖಿ-೨೦೧೬

      9.   ಡಾ. ಸುರೇಶಗೌಡ ಪಿ. ಗೌಡರ: ಬೇಂದ್ರೆ ಕಾವ್ಯದಲ್ಲಿ ದೇಶಿಯ ನೆಲೆಗಳು-೨೦೧೬

    10.   ಡಾ. ಸಣ್ಣ ಹನುಮಂತಪ್ಪ ಜಿ.: ಜನಪದ ಕಥನಗೀತೆಗಳಲ್ಲಿ ಹೆಣ್ಣು-೨೦೧೬     

    11.    ಡಾ. ಅಂದಾನಿಶೆಟ್ಟರ: ಕನ್ನಡ ರಂಗಭೂಮಿಗೆ ಮಾಂಡ್ರೆಕರ್ ಅವರ ಕೊಡುಗೆ-೨೦೧೫

     12.   ಡಾ. ಅನ್ನಪೂರ್ಣ ಪಾಟೀಲ: ಮಹಿಳಾ ಕಥಾ ಸಾಹಿತ್ಯದಲ್ಲಿ ದೇಸಿ ನೆಲೆಗಳು-೨೦೧೪  

     13.   ಡಾ. ಪುಷ್ಪಾಭಾರತಿ ಎ.ಆರ್.: ಬರಗೂರರ ಸಮಗ್ರ ಸಾಹಿತ್ಯದ ವಿಭಿನ್ನ ನಿಲುವುಗಳು ಮತ್ತು ಆಶಯಗಳು-೨೦೧೪

     14.   ಡಾ. ಅಣ್ಣಯ್ಯ : ಕನ್ನಡ ದಲಿತ ಬಂಡಾಯ ಕತೆಗಳಲ್ಲಿ ಸಮುದಾಯ, ಸಂಸ್ಕೃತಿ-ಸAಘರ್ಷ-೨೦೧೪

     15.  ಡಾ. ದೊಡ್ಡ ಉಜ್ಜಪ್ಪ ಬಿ.ಎಚ್.: ಶ್ರೀರಂಗರ ನಾಟಕಗಳಲ್ಲಿ ವಸ್ತುವಿನ್ಯಾಸ-೨೦೦೯

     16.  ಡಾ. ದೊಡ್ಮನಿ ದುರಗಪ್ಪ ಸುಭಾಷ: ಕನ್ನಡ ಸಾಹಿತ್ಯಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ-೨೦೦೮

     17.  ಡಾ. ವಿಠ್ಠಲರಾವ್ ಶ್ಯಾಮರಾವ್ ಮುಕರಂಬ: ಡಾ.ಚನ್ನಣ್ಣ ವಾಲೀಕಾರರ ಸಮಗ್ರ ಕಾವ್ಯ; ಒಂದು ಅಧ್ಯಯನ-೨೦೦೮

     18.  ಡಾ. ಸಂಜೀವಣ್ಣನವರ ಹನುಮಂತಪ್ಪ ಪುಟ್ಟಪ್ಪ : ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ-೨೦೦೮

     19.  ಡಾ. ಶ್ರೀಮತಿ ಭಾಗ್ಯವತಿ ಎಮ್.: ಬೇಂದ್ರೆ ಮತ್ತು ಕುವೆಂಪು ಕಾವ್ಯಗಳ ತೌಲನಿಕ ಅಧ್ಯಯನ-೨೦೦೮     

     20.  ಡಾ. ಕೆ.ಎಚ್. ಹಾದಿಮನಿ: ಹಾವೇರಿ ಜಿಲ್ಲೆಯ ಜನಪದ ದೈವಗಳು ಒಂದು ಅಧ್ಯಯನ-೨೦೦೮

     21. ಡಾ. ಶಂಕರಪ್ಪ ಗುಡದಪ್ಪ ಸಜ್ಜಲಗುಡ್ಡ: ಮುದೇನೂರು ಸಂಗಣ್ಣ ಜೀವನ ಮತ್ತು ಸಾಧನೆ-೨೦೦೭

                ಪ್ರಗತಿಯಲ್ಲಿದೆ-8​

      1.   ತಿಪ್ಪೇಸ್ವಾಮಿ.ಟಿ.- “ ಬಿ.ಕೃಷ್ಣಪ್ಪ ಮತ್ತುಕರ್ನಾಟಕದಲಿತ ಚಳವಳಿ ಹಾಗೂ ಕನ್ನಡ ಸಾಹಿತ್ಯ ಪರಿಣಾಮಗಳು”-೨೦೧೭

      2.   ಪ್ರವೀಣ.ಹೆಚ್.-“ ಗಿರೀಶ್‌ಕಾರ್ನಾಡ್ ಮತ್ತುಚಂದ್ರಶೇಖರಕAಬಾರರ ನಾಟಕಗಳು: ಪುರಾಣ ಮತ್ತು ಜಾನಪದ”-೨೦೧೭​

      3.   ಉತ್ತಮ ವಡಗೋಲೆ- “ ಲಿಂಗಾರೆಡ್ಡಿ ಸಾಹಿತ್ಯದಲ್ಲಿ ಬಂಡಾಯದ ಸಂಘರ್ಷಾತ್ಮಕ ನೆಲೆಗಳು”-೨೦೧೭

      4.   ಮಂಜಪ್ಪ.ಎA._ ”ಕನಕದಾಸರ ಸಾಹಿತ್ಯ: ತಳಸಮುದಾಯಗಳ ಪುನರ್‌ರಚನೆ”-೨೦೧೭

      5.   ಮಮತ- “ನವೋದಯ ಕಾವ್ಯಗಳಲ್ಲಿ ಹೆಣ್ಣೆನಕುರಿತಾದ ಗ್ರಹಿಕೆಗಳು”-೨೦೧೮

      6.   ಪವಿತ್ರ- “ಆಧುನಿಕಕನ್ನಡ ಕಾದಂಬರಿಗಳಲ್ಲಿ ಅಲಕ್ಷಿತ ಮಹಿಳೆಯರ ಸಾಂಸ್ಕೃತಿಕ ಪ್ರತಿನಿಧಿಕರಣ”-೨೦೧೮

      7.   ರಂಜಿತ- “ಬಿ.ಟಿ.ಜಾಹ್ನವಿ ಮತ್ತು ಹೆಚ್.ನಾಗವೇಣಿಅವರಕಥಾ ಸಾಹಿತ್ಯದಲ್ಲಿಜಾತಿ ಮತ್ತು ಲಿಂಗರಾಜಕಾರಣ: ತೌಲನಿಕ ಅಧ್ಯಯನ”-೨೦೨೦

      8.   ಕವಿತಾಜಂಗವಾಡ- “ ರಾಘವಾಂಕನ ಹರಿಶ್ಚಂದ್ರಕಾವ್ಯದಲ್ಲಿ ಪ್ರಭುತ್ವ ಮತ್ತು ಮಹಿಳೆ” – ೨೦೨೦

        ಪಿ.ಡಿ.ಎಫ್(ಪೋಸ್ಟ್ ಡಾಕ್ಟರಲ್ ಫೆಲೊ) ಮಾರ್ಗದರ್ಶನ

     1.    ಡಾ.ಗುರುರಾಜಎಸ್. ನವಲಗುಂದ- “ಕನ್ನಡ ಶಾಸನಗಳಲ್ಲಿ ಆಯಗಾರಿಕೆ”-೨೦೧೯ 


ವಾಣಿ ಭಂಡಾರಿ

ವಿಶೇಷ ಲೇಖನ

ಕುವೆಂಪು ವಿವಿ ಕನ್ನಡ ಭಾರತೀಯ ಹೆಮ್ಮೆಯ ಸಾಧಕ
ಡಾ. ಶಿವಾನಂದ ಕೆಳಗಿನಮನಿ

                            

Leave a Reply

Back To Top