ಮಲಯಾಳಂ ಕವಿತೆ- ಸ್ತನ…!

ಅನುವಾದ ಸಂಗಾತಿ

ಸ್ತನ…!

ಮಲಯಾಳಂ ಮೂಲ:
ಸಲೀಂ ಚೇನ

ಕನ್ನಡ ಅನುವಾದ:
ಐಗೂರು ಮೋಹನ್ ದಾಸ್, ಜಿ
.

ಅದು ಹೃದಯದಿಂದ
ಹೊರಗೆಗೆ ಉರುಳಿ
ಬಂದಿರುವ ಎರಡು ಉಬ್ಬುಗಳು…!

ಹೆಣ್ಣು ಅದನ್ನು
ಆಟಿಕೆ ವಸ್ತು ರೀತಿ
ತೆರೆದು ಇಡುವುದು
ಪುರುಷರ ತುಟಿಗಳಿಗೆ…!

ಪುರುಷ ಜನ್ಮಅದನ್ನು
ಚೀಪಿ ಚೀಪಿ ಕುಡಿಯುವಾಗ
ಅದರೊಳಗೆ ಖಾಲಿ ಇದ್ದರೂ…
ಸುಮ್ಮನೆ ಅದರೊಳಗೆ ಒಂದು
‘ಸಮುದ್ರ’ವನ್ನು ಎಳೆದು ಕುಡಿದೆ
ಎಂದು ಹೆಣ್ಣಿನ ಕಿವಿಯಲ್ಲಿ
ಒಂದು ಸುಳ್ಳು ಹೇಳುತ್ತಾನೆ..!

ಹಲವು ಬಾರಿ
ಆ ದೇಹದ ಮೇಲೆ
ಏರಿ ಇಳಿಯುವಾಗ
ಅವನ ಪಾಲಿಗೆ ಹೊಸ
ಹೊಸ ಹಿಮ ಪರ್ವತ
ಅವಳು…!

ಮನದಲ್ಲಿ ಕೈಗಳಿಂದ
ಹಿಡಿದು ನಿಲ್ಲಿಸಿರುವಂತಹ
ಬೆಟ್ಟ ಶಿಖರಗಳು..!
ಅಂತಹ ಪ್ರಣಯದ
ಮಧುರ ಘಳಿಗೆಯ ಸುಖದ
ಉಡೂಗರೆಯನ್ನು ನೀಡಿದ್ದು
ನನ್ನ ಪ್ರಿಯಸಖಿ…!!

ಈ ಭೂಮಿಯ ಸಕಲ ಜೀವ ಜಂತುಗಳಲ್ಲಿ ಉತ್ತಮವಾದ
ಸೃಷ್ಟಿ ನಿನ್ನದ್ದು..!
ಎಂತಹ ಹೊಳಪು
ನನ್ನ ಪ್ರೇಮ ಸಖಿಯ
ಕಣ್ಣುಗಳಿಗೆ…!

ನನ್ನ ಪ್ರಣಯ ಸಖಿಯಾಗಿರುವ
ನಿನ್ನ ಯಾವುದೇ ‘ತಪ್ಪು’ ಗಳನ್ನು
ದೇವರು ಹೇಳಿದ್ದರೂ ಸಹ
ಸಮುದ್ರದಲ್ಲಿ ಮುಳುಗಿಸಿ
ನಾನು ಸಾಯಿಸುವೆ…!

ಒಂದು ಮಾತು
ಮಾತ್ರ ಸತ್ಯ..!
ಭಗವಂತನ ಸೃಷ್ಟಿಯ
ಈ ‘ಸ್ತನ’ಗಳು ಮಾತ್ರ
ಒಂದು ‘ಜಾಹೀರಾತು’
ವಸ್ತುವಲ್ಲ…!!!


ಮಲಯಾಳಂ ಮೂಲ:
ಸಲೀಂ ಚೇನಂ.

ಕನ್ನಡ ಅನುವಾದ:
ಐಗೂರು ಮೋಹನ್ ದಾಸ್, ಜಿ.

2 thoughts on “ಮಲಯಾಳಂ ಕವಿತೆ- ಸ್ತನ…!

Leave a Reply

Back To Top