ನಿಮ್ಮ ಹೃದಯದ ಬಗ್ಗೆ ಎಚ್ಚರಿಕೆ ಇರಲಿ

ಲೇಖನ

ನಿಮ್ಮ ಹೃದಯದ ಬಗ್ಗೆ ಎಚ್ಚರಿಕೆ ಇರಲಿ

ಕೆ.ವಿ.ವಾಸು

 ಕಳೆದ ವರ್ಷದ  (2021) ಅಕ್ಟೋಬರ್‌ ತಿಂಗಳಲ್ಲಿ ಕನ್ನಡಿಗರ ಕಣ್ಮಣಿಯಾಗಿದ್ದ ಹಾಗೂ ಯುವ ಜನತೆಯ ಆಶಾಕಿರಣವಾಗಿದ್ದ ದಿವಂಗತ  ಡಾ.ರಾಜ ಕುಮಾರ್ ರವರ ಸುಪುತ್ರ ಪವರ್ ಸ್ಟಾರ್ ಡಾ.  ಪುನೀತ್ ರಾಜಕುಮಾರ್

ಹೃದಯಾಘಾತಕ್ಕೆ ಒಳಪಟ್ಟು ನಿಧನರಾದ ನಂತರ, ರಾಜ್ಯಾದ್ಯಂತ ಜನತೆಯಲ್ಲಿ ಹೃದಯದ ಬಗ್ಗೆ ವಿಶೇಷ ಎನ್ನ

ಬಹುದಾದ  ಕಾಳಜಿ ಅಥವಾ ಗಾಭರಿ  ಮೂಡಿದ್ದು, ಪ್ರತಿಯೊಬ್ಬರೂ ಸಹ ತಮ್ಮ ಹೃದಯದ ಕಾರ್ಯ ನಿರ್ವಹಣೆಯ ಬಗ್ಗೆ ಆತಂಕಗೊಡು, ಆಸ್ಪತ್ರೆಗಳಿಗೆ, ಕ್ಲಿನಿಕ್ ಗಳಿಗೆ ಬೇಟಿ

ನೀಡುತ್ತಿದ್ದಾರೆ.  ಹೃದಯ ತಜ್ನರಿಗೆ ಈಗ ಅಪಾರವಾದ ಬೇಡಿಕೆ ಇದ್ದು ಕೆಲವು ಖ್ಯಾತನಾಮ ವೈದ್ಯರ ಕ್ಲಿನಿಕುಗಳ

ಮುಂದೆ ಜನ ಇರುವೆಯ ಸಾಲಿನ ರೀತಿಯಲ್ಲಿ ನಿಂತಿರುತ್ತಾರೆ.  ಅದೂ ಅಲ್ಲದೇ, ಕಳೆದ ಮೂರು ವರ್ಷಗಳ ಹಿಂದೆ ಜಗತ್ತಿನ ಬಹುಭಾಗದ ಮೇಲೆ ಕೋವಿಡ್ ಸೋಂಕು ಅಪ್ಪಳಿಸಿದ ಮೇಲಂತೂ ಜನರು

ತಮ್ಮ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ.  ಹೃದಯದ ಕಾಯಿಲೆಗಳಿಗೆ ಹಲವಾರು

ಕಾರಣಗಳಿರುತ್ತವೆ.  ಅಧಿಕ ರಕ್ತದ ಒತ್ತಡ, ಅಧಿಕ ತೂಕ

ಮದುಮೇಹ ಮುಂತಾದ ಕಾರಣಗಳ ಜೊತೆಗೆ ವಂಶ ಪಾರಂಪರ್ಯವಾಗಿ ಬರುವ  ಕೆಲವು ದೇಹ ಸ್ಥಿತಿಗಳು ಕೂಡ

ಹೃದಯಕ್ಕೆ ಅಪಾಯವನ್ನು ತರಬಲ್ಲವು.  ಕೆಲವು ಸಂಧರ್ಭಗಳಲ್ಲಿ, ಯಾವುದೇ ಕಾರಣವಿಲ್ಲದಿದ್ದರೂ ಸಹ,

ಹೃದಯಾಘಾತ ಸಂಭವಿಸಿ, ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯ

ಪ್ರಾಣ ಹೋಗಿಬಿಡುವ ಸಂಧರ್ಭಗಳು ಇರುತ್ತದೆ.  ಇದಕ್ಕೆ

ಸಾಕಷ್ಟು ಉದಾಹರಣೆಗಳನ್ನು ನಾವು ಪ್ರತಿ ನಿತ್ಯ ಪತ್ರಿಕೆಗಳಲ್ಲಿ ಹಾಗೂ ಇನ್ನಿತರ ದೃಶ್ಯ ಮಾದ್ಯಮಗಳಲ್ಲಿ

ನೋಡುತ್ತಲೇ ಇರುತ್ತೇವೆ.  ಬಸ್ ಅನ್ನು ಓಡಿಸುತ್ತಿರುವಾಗಲೇ ಚಾಲಕನಿಗೆ‌ ಹೃದಯಾಘಾತ,

ಪಾಠಗಳನ್ನು ಮಾಡುತ್ತಿದ್ದ ಸಂದರ್ಭದಲ್ಲೇ ಶಿಕ್ಷಕರಿಗೆ

ಹೃದಯಾಘಾತ ಹೀಗೆ ಹೃದಯಾಘಾತ ಯಾರಿಗೆ ಯಾವಾಗ ಬೇಕಾದರೂ ಸಂಭವಿಸಬಹುದು.  ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರಲ್ಲಿ‌ ಮತ್ತು ಮಕ್ಕಳಲ್ಲಿ ಸಹ  ಹೃದ್ರೋಗ ಕಾಣಿಸಿಕೊಳ್ಳುತ್ತಿವೆ.  ಹುಟ್ಟುವಾಗಲೇ ಹೃದ್ರೋಗ ಹೊಂದುತ್ತಿರುವ ಮಕ್ಕಳ ಸಂಖ್ಯೆಯು ಸಹಾ ಸಾಕಷ್ಟಿದೆ.  ಇನ್ನು

ಹೃದಯದ ಕಾರ್ಯ ವೈಖರಿಯ ಬಗ್ಗೆ ಸ್ವಲ್ಪ ವಿವರಗಳನ್ನು ತಿಳಿಯೋಣ.

ಮಾನವ ದೇಹದ ಅತ್ಯದ್ಭುತವಾದ ಅಂಗವಾದ ಹೃದಯ

ಮೆದುಳಿನ ಆದೇಶದಂತೆ ಕಾರ್ಯನಿರ್ವಹಿಸಿದರೂ ಸಹ,

ಕೇವಲ ಕೆಲವು ನಿಮಿಷಗಳಷ್ಟು ಕಾಲ ಹೃದಯವು ರಕ್ತ

ಸರಬರಾಜನ್ನು ನಿಲ್ಲಿಸಿದರೂ ಸಹ ಮೆದುಳು ಶಾಶ್ವತವಾಗಿ

ಸತ್ತುಹೋಗುತ್ತದೆ.

ಹೃದಯವೆಂಬುದು ಅದ್ಭುತವಾದ ” ಪಂಪ್” ಹಾಗೂ

ಬಿಡುವಿಲ್ಲದೇ ನಮ್ಮ ಉಸಿರಿರುವತನಕವೂ  ದುಡಿಯುವ ಪ್ರಾಮಾಣಿಕ ಹಾಗೂ  ನಂಬಿಕಸ್ತ ಅಂಗ.  ಹೃದಯವು ಸ್ನಾಯುವಿನಿಂದ ಕೂಡಿದ್ದು, ಶಂಕುವಿನಾಕಾರದಲ್ಲಿ ಇದೆ ಹಾಗೂ ವ್ಯಕ್ತಿಯೋರ್ವನ ಮುಷ್ಟಿಯಷ್ಟಿರುತ್ತದೆ.  ಅದರ ತೂಕ ಸುಮಾರು 300 ಗ್ರಾಮ್  ಆಗಿರುತ್ತದೆ.  ಪ್ರತಿಬಾರಿಯೂ, ಹೃದಯವು,

70 ಮಿಲಿ ಲೀಟರ್ ನಷ್ಟು ಅಂದರೆ ಸುಮಾರು ಅರ್ಧ 

ಕಪ್ಪಿನಷ್ಟು ರಕ್ತವನ್ನು ಒಂದು ಬಡಿತದಲ್ಲಿ ಹೊರಚೆಲ್ಲುತ್ತದೆ.

ಸಾಮಾನ್ಯವಾಗಿ, ಆರೋಗ್ಯವಂತರಲ್ಲಿ ಹೃದಯವು ಒಂದು ನಿಮಿಷಕ್ಕೆ 60 ರಿಂದ 80 ಬಾರಿ ಬಡಿಯುತ್ತದೆ.

ಮಕ್ಕಳಲ್ಲಿ ಮತ್ತು ಕ್ರೀಡಾ ಪಟುಗಳಲ್ಲಿ ಹೃದಯದ ಬಡಿತ

ಹೆಚ್ಚಾಗಿರುತ್ತದೆ. ನಾವು ಶ್ರಮದ ಕೆಲಸ ಮಾಡಿದಾಗ, ವ್ಯಾಯಾಮ ಮುಂತಾದ ದೈಹಿಕ ಚಟುವಟಿಗಳಲ್ಲಿ  ನಿರತರಾಗಿರುವಾಗ , ಹೃದಯ ಬಡಿತ ಹೆಚ್ಚಾಗಬಹುದು ಅದೇ ರೀತಿ  ಆತಂಕ ( anxiety) ಅಥವಾ ಉದ್ವೇಗಕ್ಕೆ ಒಳಗಾದಾಗಲೂ ಸಹ ಹೃದಯದ ಬಡಿತ ಹೆಚ್ಚಾಗುತ್ತದೆ.  ಇದಕ್ಕಾಗಿ ಗಾಭರಿ ಪಡುವ  ಅಗತ್ಯ ಇಲ್ಲ. ಕೆಲಸದ ಒತ್ತಡದಿಂದಲೂ ಸಹ ಹೃದಯ ಬಡಿತದಲ್ಲಿ ವ್ಯತ್ಯಾಸ ಆಗಬಹುದು.  ಆದರೂ ಒಮ್ಮೆ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.. .ಹೃದಯವು ದಿನಕ್ಕೆ ಸುಮಾರು 7000

ಗ್ಯಾಲನ್ ನಷ್ಟು  ರಕ್ತವನ್ನು ಪಂಪ್ ಮಾಡುತ್ತದೆ.  ರಕ್ತ ಸಂಚಾರದ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಹೇಗೆ

ಮಾಡುತ್ತದೆ ಎಂಬುದೇ ಸೋಜಿಗದ ಸಂಗತಿ.  ಹೃದಯದಲ್ಲಿ ನಾಲ್ಕು ಕೋಣೆಗಳಿರುತ್ತದೆ. ಮೇಲಿನ ಎರಡು ಕೋಣೆಗಳಿಗೆ ಹೃತ್ಕರ್ಣಗಳೆಂದು, ಕೆಳಗಿನ ಎರಡು

ಕೋಣೆಗಳಿಗೆ ಹೃತ್ಕುಕ್ಷಿಗಳೆಂದು ಕರೆಯಲಾಗುತ್ತದೆ.  ಹೃತ್ಕರ್ಣಗಳು, ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೂ

ಸರಬರಾಜು ಮಾಡುವ ಕೋಣೆಗಳಾಗಿವೆ.  ಹೃದಯದ ಎಡ ಭಾಗದಿಂದ ಹರಿದು ಹೋಗುವ ರಕ್ತವು, ದೇಹದಾದ್ಯಂತ ಹರಡಿರುವ ರಕ್ತನಾಳಗಳ ಮೂಲಕ

ದೇಹದ ಎಲ್ಲಾ ಜೀವ ಕೋಶಗಳು ತಮ್ಮ ಕಾರ್ಯ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ.  ಬಲಭಾಗದಿಂದ ಹರಿದು ಹೋಗುವ ರಕ್ತವು ಶ್ವಾಸಕೋಶಗಳತ್ತ ಸಾಗಿ ಅಲ್ಲಿ

ಇಂಗಾಲದ ಡೈ ಆಕ್ಸೈಡ್ ಅನ್ನು ಹೊರ ಹಾಕಿ, ಉಸಿರಾಟದಲ್ಲಿ ಗಾಳಿಯ ಮೂಲಕ ಪಡೆದ ಆಮ್ಮಜನಕವನ್ನು  ಹೀರಿ ರಕ್ತ ಶುದ್ದಿಕರಣ ಹೊಂದುವಂತೆ

ಮಾಡುತ್ತದೆ.  ಇದು ನಮ್ಮ ಪುಟ್ಟ ಹೃದಯದ ಕಾರ್ಯವೈಖರಿಯ ಬಗ್ಗೆ ಒಂದು ಚಿಕ್ಕ ಟಿಪ್ಪಣಿ.   ಹೃದ್ರೋಗಗಳಲ್ಲಿ ನಾನಾ ವಿಧಗಳಿವೆ.  ಬಹುಮುಖ್ಯವಾಗಿ Congenital Heart Disease,  Coronary Artery Disease Cardio myopathy,  Atrial Fibrillation ಮುಂತಾದವುಗಳನ್ನು ಹೆಸರಿಸಬಹುದು

ಇಂದು ಪ್ರಪಂಚದಲ್ಲಿ ಹೃದಯಾಘಾತ ಅಥವಾ ಹೃದ್ರೋಗಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಹೃದಯಾಘಾತಕ್ಕಿಂತ ಹೃದಯ ಸ್ಥಂಬನ ಭೀಕರವಾಗಿದೆ.

ಹೃದಯ ಸ್ಥಂಬನ ಸಂಭವಿಸಿದ ಕೂಡಲೇ ವ್ಯಕ್ತಿ ಮೃತ

ಹೊಂದುತ್ತಾನೆ.  ಆದರೆ, ಹೃದಯಾಘಾತಕ್ಕೆ ಒಳಪಟ್ಟ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ  ದೊರೆತರೆ, ಬದುಕುಳಿಯುತ್ತಾನೆ.  ಹೃದಯಾಘಾತಕ್ಕೆ

ಒಳಪಟ್ಟ ಒಂದು ಗಂಟೆಯ ಅವಧಿಯಲ್ಲಿ ರೋಗಿಯನ್ನು

ಆಸ್ಪತ್ರೆಗೆ ಸಾಗಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡಿಸಿದರೆ,

ವ್ಯಕ್ತಿ ಬದುಕುಳಿಯುವ ಸಾದ್ಯತೆ ಹೆಚ್ಚು. ‌ವೈದ್ಯಕೀಯ

ಪರಿಭಾಷೆಯಲ್ಲಿ ಇದನ್ನು ” ಗೋಲ್ಡನ್ ಹವರ್” (Golden

Hour) ಎಂದು ಕರೆಯಲಾಗುತ್ತದೆ.  ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಜಗತ್ತಿನಲ್ಲಿ ಸಾಕಷ್ಟು ಸಂಶೋಧನೆಗಳು ಜರುಗುತಲಿದ್ದು ಹೃದಯಕ್ಕೆ ಸಂಬಂದಪಟ್ಟ ಬಹುತೇಕ ರೋಗಗಳನ್ನು ಗುಣಪಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.  ಮಲ್ಟಿ

ಸ್ಪೇಷಾಲಿಟಿ ಸೂಪರ್ ಸ್ಪೇಷಾಲಿಟಿ ಮುಂತಾದ ನವ ನವೀನ ಹೆಸರಿನ ಆಸ್ಪತ್ರೆಗಳು ಇಂದು ಪ್ರಾರಂಭಗೊಳ್ಳುತ್ತಿವೆ.  ಜಯದೇವ ಆಸ್ಪತ್ರೆ, ಫೋರ್ಟಿಸ್, ನಾರಾಯಣ

ಚಿಕಿತ್ಸಾಲಯ, ಬಿಜಿಎಸ್ ಅಪೋಲೋ , ಮಣಿಪಾಲ್ ಆಸ್ಪತ್ರೆ,   ವೊಕಾರ್ಡ್  ಮುಂತಾದ  ಹೆಸರಾಂತ ಆಸ್ಪತ್ರೆಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ವಿಶೇಷ ರೀತಿಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ

ನಡೆಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಹ ಸೂಕ್ತ ಚಿಕಿತ್ಸೆ ದೊರೆಯುತ್ತದೆ.  ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಾದ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಬೈಪಾಸ್ ಸರ್ಜರಿಗಳ ಜೊತೆಗೆ  ‌‌ಇತ್ತೀಚಿನ ವರ್ಷಗಳಲ್ಲಿ ” ಕೀ ಹೋಲ್

ಸರ್ಜರಿ”  ಅಥವಾ ರಂಧ್ರ  ಶಸ್ತ್ರಚಿಕಿತ್ಸೆಯ ಮೂಲಕ  ಹೃದ್ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.  

ಅಗತ್ಯವಿರುವ ರೋಗಿಗಳಿಗೆ ಹೃದಯ ಕಸಿ ಅಂದರೆ Heart Transplantation ಕೂಡ ಮಾಡಲಾಗುತ್ತದೆ.

ಇಷ್ಟಾದರೂ ಸಹ, ಹೃದಯಾಘಾತಕ್ಕೆ ಒಳಗಾಗಿ ಸಾವನ್ನುಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಅಧಿಕಗೊಳ್ಳುತ್ತಿದೆ. ಹೃದಯಾಘಾತವನ್ನು ” ಸೈಲೆಂಟ್ ಕಿಲ್ಲರ್” ಎಂದು ಕರೆಯಲಾಗುತ್ತದೆ  ಏಕೆಂದರೆ ಇದು ಯಾವ ಮುನ್ಸೂಚನೆ ನೀಡದೆ ನಮ್ಮ ಮೇಲೆ ದಾಳಿ ಮಾಡಬಹುದು. .  ಹೀಗಾಗಿ ಇದರ ಬಗ್ಗೆ

ನಾವು ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ.

ಏಕೆಂದರೆ ಹೃದಯಾಘಾತವಾದ ಕೆಲವೇ ಸೆಕೆಂಡುಗಳಲ್ಲಿ

ರೋಗಿ ಸಾವನ್ನಪ್ಪುತ್ತಾನೆ.  ಅನೇಕ ಸಂಧರ್ಭಗಳಲ್ಲಿ, ರೋಗಿ ಆಸ್ಪತ್ರೆ ತಲುಪುವ ಮೊದಲೇ ಸಾವನ್ನಪ್ಪುವುದರಿಂದ ” ಹೃದಯಾಘಾತದಿಂದ ಪಾರಾಗಿ ಉಳಿಯುವುದು ” ಒಂದು ಪವಾಡ” ಎಂದರೆ ತಪ್ಪಾಗಲಾರದು. 

ಎದೆಯ ಮಧ್ಯಭಾಗದಲ್ಲಿ ತೀವ್ರ ರೀತಿಯ ನೋವು, ಅನಿರ್ಬಂಧಿತ ಹೃದಯ ಬಡಿತ, ಉಸಿರು ಕಟ್ಟಿದಂತೆ ಭಾಸವಾಗುವುದು   ಎದೆಯ ಮೇಲೆ ಬಾರವಾದ ವಸ್ತುವನ್ನು ಇಟ್ಟ ಅನುಭವ, ಎಡ ಭುಜದಲ್ಲಿ ತೀವ್ರ ರೀತಿಯ ನೋವು ಮುಂತಾದ ಲಕ್ಷಣಗಳು ಗೋಚರಿಸಬಹುದು.‌ಯಾವುದೇ ಲಕ್ಷಣ ಇಲ್ಲದೆಯೂ ಸಹ ಹೃದಯಾಘಾತ ಉಂಟಾಗಬಹುದು.  ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಗಾಭರಿಯಾಗದೆ  ತುರ್ತ

 ವೈದ್ಯಕೀಯ ನೆರವು ಪಡೆಯುವುದು ಅವಶ್ಯಕ.  ಸಾಮಾನ್ಯವಾಗಿ ಯಾರೇ ಎದೆ

ನೋವಿನ ಸಮಸ್ಯೆ ಹೇಳಿಕೊಂಡು ವೈದ್ಯರ ಬಳಿ‌ ಹೋದರೂ  ಮೊದಲು ಇ ಸಿ‌‌‌ ಜಿ

ಪರೀಕ್ಷೆ ಮಾಡಲಾಗುತ್ತದೆ.  ಹೃದಯಾಘಾತವಾಗಿದ್ದರೆ , ಇ ಸಿ ಜಿ ಯಲ್ಲಿ  ಗೊತ್ತಾಗುತ್ತದೆ.  ಹೃದಯದ ವಿದ್ಯುತ್ ತರಂಗಗಳು ( electrical activity)

ಹೇಗೆ ಕೆಲಸ ಮಾಡುತ್ತದೆ ಎಂಬುದು ಸಹ ಇಸಿಜಿ  ( Electro Cardio Gram) ಮೂಲಕ  ಗೊತ್ತಾಗುತ್ತದೆ.

ರೋಗಿಯ ದೇಹಸ್ಥಿತಿಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ  ಎಕೋ ( Echo),

ಟ್ರೆಡ್ ಮಿಲ್ ( tread mill), ಸಿ ಟಿ ಸ್ಕಾನ್  ಮುಂತಾದ ಹೃದಯಕ್ಕೆ ಸಂಬಂಧಿಸಿದ  ಪರೀಕ್ಷೆಗಳನ್ನು ಮಾಡುತ್ತಾರೆ. ಆಂಜಿಯೋಗ್ರಾಮ್  ಮೂಲಕ ರಕ್ತನಾಳಗಳು ಬಿರುಸುಗೊಂಡಿವೆಯೇ ಅಥವಾ ಹೃದಯದ ನಾಳಗಳಲ್ಲಿ 

ರಕ್ತ ಸಂಚಾರಕ್ಕೆ ಅಡ್ಡಿಯಾಗಿದೆಯೇ  ಎಂಬುದನ್ನು ಕಂಡು ಹಿಡಿಯಲಾಗುತ್ತದೆ.. ಹಲವಾರು 

ಆಸ್ಪತ್ರೆಗಳಲ್ಲಿ ಹೃದ್ರೋಗಕ್ಕೆ ಸಂಬಂಧಪಟ್ಟ‌ ವಿಶೇಷ  ಪ್ಯಾಕೇಕ್ ಇದ್ದು, ಎಲ್ಲಾ

ಪರೀಕ್ಷೆಗಳನ್ನು ರಿಯಾಯಿತಿ ದರಗಳಲ್ಲಿ ಮಾಡಲಾಗುತ್ತದೆ.

 ತೆರೆದ ಹೃದಯ ಚಿಕಿತ್ಸೆ, ಬೈಪಾಸ್ ಸರ್ಕರಿ, ಕೀ ಹೋಲ್ ಸರ್ಜರಿ ಮುಂತಾದವುಗಳ ಮೂಲಕ

ಹೃದಯಕ್ಕೆ ಸಂಭವಿಸಿರುವ ಹಾನಿಯನ್ನು ಸರಿಪಡಿಸಲಾಗುತ್ತದೆ.  ಹಾಗೆಯೇ ” ಆಂಜಿಯೋ ಪ್ಲಾಸ್ಟಿ”

ಮೂಲಕ ಗಡುಸುಗೊಂಡ ಹೃದಯದ ರಕ್ತನಾಳಗಳನ್ನು

ಸರಿಪಡಿಸಿ, ರಕ್ತ ಸಂಚಾರವನ್ನು ಸುಗಮಗೊಳಿಸಲಾಗುತ್ತದೆ. ವೈದ್ಯಕೀಯ ಜಗತ್ತಿನಲ್ಲಿ

ನಡೆದಿರುವ ನಿರಂತರ ಸಂಶೋದನೆಗಳು, ಹೃದ್ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ

ಯಶಸ್ವಿಯಾಗಿವೆ.  ಇಷ್ಟೆಲ್ಲಾ ಇದ್ದರೂ ಸಹ, ಹೃದಯಾಘಾತಕ್ಕೆ ತುತ್ತಾಗಿ ಮರಣಹೊಂದುತ್ತಿರುವರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.  ಬಹುಶಃ ಇದಕ್ಕೆ

ರೋಗಿಗೆ ಸೂಕ್ತ ವೇಳೆಯಲ್ಲಿ ಚಿಕಿತ್ಸೆ ದೊರಕದೇ ಹೋಗದಿರುವುದೇ ಕಾರಣವೆನ್ನಬಹುದು.  ಏಕೆಂದರೆ

ಅನೇಕ ರೋಗಿಗಳು ಆಸ್ಪತ್ರೆ ತಲುಪುವ ಮುನ್ನವೇ ಸಾವಿಗೀಡಾಗುತ್ತಾರೆ.  ಆದ್ದರಿಂದ ಹೃದಯದ‌  ಆರೋಗ್ಯದ ಬಗ್ಗೆ ನಾವೆಲ್ಲರೂ ಹೆಚ್ಚು ಗಮನ ಕೊಡಬೇಕು. ಪ್ರಿವೆಬ್ಷನ್ ಇಸ್ ಬೆಟರ್ ದಾನ್ ಕ್ಯೂರ್

(Prevention is better than cure) ಎಂಬ ಪ್ರಸಿದ್ದ

ಮಾತಿದೆ.  ಅಂದರೆ, ರೋಗವನ್ನು ಗುಣಪಡಿಸುವುದಕ್ಕಿಂತ

ಅದು ಬಾರದಂತೆ ತಡೆಯುವುದೇ ಒಳ್ಳೆಯದು.

ನಮ್ಮ‌ ಜೀವನ ಶೈಲಿಗಳಲ್ಲಿ ಅಂದರೆ, ನಮ್ಮ ಆಹಾರ ವಿಹಾರಗಳಲ್ಲಿ ಸೂಕ್ತ ಮಾರ್ಪಾಡು, ಧ್ಯಾನ, ಯೋಗ,

ನಡಿಗೆ, ವ್ಯಾಯಾಮ ಮುಂತಾದ ಹಲವಾರು ಕ್ರಮಗಳಿಂದ

ನಾವು ನಮ್ಮ ಅಮೂಲ್ಯವಾದ ಹಾಗೂ ಬೆಲೆಕಟ್ಟಲಾಗದ

ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳಬಹುದು.  

ಪ್ರೀತಿಗೂ, ಹೃದಯಕ್ಕೂ ಅವಿನಾಭಾವ ಸಂಬಂಧವಿದೆ.

ಹೃದಯವನ್ನು ಪ್ರೀತಿಯ ಸಂಕೇತವಾಗಿ ಬಳಸುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ.  ” ಎಷ್ಟೋ ಪ್ರೇಮಿಗಳು ನನ್ನ ಹೃದಯವನ್ನೇ ನಿನಗೆ ನೀಡಿದ್ದೇನೆ” ಎಂದು ಭಾವುಕವಾಗಿ ಹೇಳುವ ಮಾತುಗಳು ಕೇಳಿದರೆ

ನಗು ಬರುತ್ತದೆ.  ಹೃದಯವನ್ನು ಕಿತ್ತು ಬೇರೆಯವರಿಗೆ ನೀಡಲು ಸಾದ್ಯವೇ ಆದರೆ, ಹೃದಯವನ್ನು ಕಿತ್ತು ಬೇರೆಯವರಿಗೆ ನೀಡಲು ಜೈವಿಕವಾಗಿ ಸಾದ್ಯವಾಗದೇ

ಹೋದರೂ, ಪ್ರೀತಿಯ ಅಮೃತಧಾರೆಯನ್ನು ನೀಡಬಹುದು.  ಆದ್ದರಿಂದ, ಹೃದಯವನ್ನು ಪ್ರೀತಿಯ ಜೊತೆ ಸಮೀಕರಿಸಿ ಹೇಳುವಾಗ ಇಂತಹ ಬಾವೋದ್ವೇಗ

ನುಡಿಗಳು ಹೆಚ್ಚಿನ ಅರ್ಥ ಮತ್ತು ಮಹತ್ವ ಪಡೆದುಕೊಂಡು

ಮಾತಿನಲ್ಲಿ ಹೇಳಲಾಗದ ಬಾಂಧವ್ಯಕ್ಕೆ ಬಾಷ್ಯ ಬರೆಯುತ್ತವೆ.  ದೇಹದ ಇನ್ಯಾವುದೇ ಅಂಗವನ್ನು ಪ್ರೀತಿಗೆ

ಹೋಲಿಸಲಾಗುವುದಿಲ್ಲ.  ಆದರೆ, ಅನಾದಿ ಕಾಲದಿಂದಲೂ ಪ್ರೀತಿಗೂ ಹೃದಯಕ್ಕೂ ” ಗಳಸ್ಯ ಕಂಠಸ್ಯ” ನಂಟು ಬೆಳೆದು ಬಂದಿದೆ.

ಈ ರೀತಿ ಹೃದಯ ಮಾನವನ ಅತ್ಯಂತ ಪ್ರಮುಖ ಅಂಗವಾಗಿ, ಪ್ರೀತಿಯ ಸಂಕೇತವಾಗಿ ನಮ್ಮ‌ಆತ್ಮೀಯ

ಬಂಧು, ಗೆಳೆಯ ಅಷ್ಟೇ ಏಕೆ ಸರ್ವಸ್ವವೂ ಆಗಿದೆಯೆಂದರೆ

ತಪ್ಪಾಗಲಾರದು.


ಕೆ.ವಿ.ವಾಸು

Leave a Reply

Back To Top