ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

man and woman kissing

ಡಾ.ಗೋವಿಂದ ಹೆಗಡೆ

ಗಜಲ್

ನನ್ನದೆಲ್ಲವನ್ನೂ ಅಪಹರಿಸಿದ್ದಾನೆ ಈ ಸಖ
ಜೀವದ ಜೀವವೇ ಆಗಿಬಿಟ್ಟಿದ್ದಾನೆ ಈ ಸಖ

ಕುಡಿನೋಟ ಬೀರಿ ಹೇಗೆ ಕರೆಯುತ್ತಾನೆ!
ನೋಟದಲ್ಲೇ ನನ್ನ ಕುಡಿಯುತ್ತಾನೆ ಈ ಸಖ

ಕುಡಿಮೀಸೆಯ ಅವನ ಮುಖವೆಷ್ಟು ಚಂದ!
ಮುಖಕ್ಕೆ ಮುಖವಿಟ್ಟು ‌ಮೈಮರೆಸಿದ್ದಾನೆ ಈ ಸಖ

ಅವನ ಪಿಸುನುಡಿಗೇ ಮೈತುಂಬ ಮಿಂಚು
ಬೇಸಗೆಯಲ್ಲೂ ನವಿಲ ಕುಣಿಸಿದ್ದಾನೆ ಈ ಸಖ

ಬರ ಬಿದ್ದ ಎದೆಯಲ್ಲಿ ಸುಗ್ಗಿ ಬಂದಿದೆ ಹೇಗೆ
ಸಗ್ಗವಿದ್ದರೆ ಅದನು ಇಳಿಸಿದ್ದಾನೆ ಈ ಸಖ

**************************

About The Author

2 thoughts on “ವ್ಯಾಲಂಟೈನ್ಸ್ ಡೇ ಸ್ಪೆಶಲ್”

  1. ಶ್ರೀನಿವಾಸ್ ಬಿ.ಎಸ್

    ಸುಂದರ ಭಾವಪೂರ್ಣ ಗಝಲ್! ಅಭಿನಂದನೆಗಳು

  2. ಬರ ಬಿದ್ದ ಎದೆಯಲ್ಲಿ ಸುಗ್ಗಿ ಬಂದಿದೆ ಸಖ ನಾ ನೆನಯುವಿಕೆಯಲ್ಲಿ

Leave a Reply

You cannot copy content of this page