ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಮೊದಲ ಪದವಿ ಧರೆ ಮತ್ತು ವೈದ್ಯೆ
ಕದಂಬನಿ ಗಂಗೂಲಿ (1861-1923)
ಕದಂಬನಿ ಗಂಗೂಲಿಯವರು 18 ಜುಲೈ 1861 ರಂದು ಬಿಹಾರದ ಭಾಗಲ್ಪುರದಲ್ಲಿ ಜನಿಸಿದರು. ಬ್ರಹ್ಮಸಮಾಜ ಸುಧಾರಕರಾದ ಕಿಶೋರ ಬಸು ಇವರ ತಂದೆ. ಇವರ ತಂದೆಯವರು ಭಾಗಲ್ಪುರ ಶಾಲೆಯ ಮುಖ್ಯೋಪಾಧ್ಯಯರಾಗಿದ್ದರು. ಕದಂಬನಿಯವರ ತಂದೆ ಮತ್ತು ಅಭಯ ಚರಣ ಮಲ್ಲಿಕ್ ಅವರು ಭಾರತದಲ್ಲಿ ಪ್ರಪಥಮ ಬಾರಿಗೆ ಮಹಿಳೆಯರ ಬೆಳವಣಿಗಾಗಿ ಬಾಗಲ್ಪುರದಲ್ಲಿ “ಭಾಗಲ್ಪುರಾ ಮಹಿಳಾ ಸಮಿತಿ” ಯನ್ನು 1893 ರಲ್ಲಿ ಪ್ರಾರಂಭ ಮಾಡಿದರು. ಕದಂಬಿನಿಯವರು ಭಾರತದ ಮೊದಲ ವೈದ್ಯೆಯಾಗಿದ್ದಾರೆ.
ಕದಂಬನಿಯವರು ತಮ್ಮ ವಿದ್ಯಾಭಾಸವನ್ನು ಭಂಗ ವಿದ್ಯಾಲಯದಲ್ಲಿ ಪ್ರಾರಂಭಿಸಿದರು. ಬೇಥುನವರು ಸ್ಥಾಪನೆ ಮಾಡಿದ ಬೇಥುನ ಶಾಲೆಯಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಮಹಿಳೆಯಾಗಿದ್ದಾರೆ. ಕದಂಬನಿಯವರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರ ಫಲವಾಗಿ 1883 ರಲ್ಲಿ ಭೇಥುನ ಶಾಲೆಯವರು ಮೊದಲ ಬಾರಿಗೆ ಲಲಿತಕಲೆ ಮತ್ತು ಪದವಿ ಶಿಕ್ಷಣವನ್ನು ಪ್ರಾರಂಬಿಸಿದರು. ಬೇಥುನ ಶಾಲೆಯಿಂದ ಕದಂಬನಿ ಮತ್ತು ಚಂದ್ರಮುಖಿ ಬಸು ಇವರು ತೇರ್ಗಡೆ ಹೊಂದಿದ ಪ್ರಥಮ ವಿದ್ಯಾರ್ಥಿಗಳಾದರು. ಬ್ರಿಟೀಷರ ಆಳ್ವಿಕೆಯಲ್ಲಿ ಪ್ರಥಮವಾಗಿ ಪದವಿ ಪಡೆದ ಮಹಿಳೆಯರಾಗಿದ್ದಾರೆ.
ಸಮಾಜದ ವಿರೋಧದ ನಡುವೆಯು ಕದಂಬನಿಯವರು 1883 ಕೊ¯್ಕತ್ತಾ ವೈದ್ಯಕೀಯ ಕಾಲೇಜಿಗೆ ಪ್ರವೇಶವನ್ನು ಪಡೆದರು. 1886ರಲ್ಲಿ ಜಿ.ಬಿ.ಎಂ.ಸಿ ಮತ್ತು ಪಾಶ್ಚಾತ್ಯ ವೈದ್ಯಕೀಯ ಡಿಗ್ರಿಯನ್ನು ಪಡೆದ ಭಾರತ ಮೊದಲ ಮಹಿಳೆಯಾಗಿದ್ದರು. 1892 ರಲ್ಲಿ ಯುನೈಟೆಡ್ ಕಿಂಗ್‍ಡಮ್‍ಗೆ ತೆರಳಿ ಎಲ್‍ಆರ್‍ಸಿಪಿ (ಐಡಿಂಬರ್ಗ) ಎಲ್‍ಆರ್‍ಸಿಎಸ್(ಗ್ಲಾಸುಗೌ) ಮತ್ತು ಜಿಇಪಿಎಸ್(ಡಬ್ಲಿನ್) ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಭಾರತಕ್ಕೆ ಮರಳಿಬಂದರು. ನಂತರ ತಮ್ಮದೆ ಆದ ಖಾಸಗಿ ವೈದ್ಯಾಭ್ಯಾಸವನ್ನು ಪ್ರಾರಂಭಿಸಿದರು.
ಕದಂಬನಿಯವರು ವೈದ್ಯವೃತ್ತಿಯೊಂದಿಗೆ ಸಮಾಜ ಸುಧಾರಣೆ ಕೆಲಸದಲ್ಲಿ ತೊಡಗಿಕೊಂಡರು. ಕದಂಬನಿಯವರ ಗಂಡ ದ್ವಾರಕಾನಾಥ ಗಂಗೂಲಿ ಅಭಿವೃದ್ದಿಯ ಚಳುವಳಿಯ ನಾಯಕರಾಗಿದ್ದರು. ಗಂಡ ಹೆಂಡತಿ ಇಬ್ಬರು ಹೆಣ್ಣು ಮಕ್ಕಳ ಉದ್ದಾರಕ್ಕಾಗಿ ತಮ್ಮ ಜೀವನವನ್ನು ಮುಡಾಪಾಗಿಟ್ಟರು. ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಪರವಾಗಿ ನಡೆದ ಚಳುವಳಿಯಲ್ಲಿ ಭಾಗವಹಿಸಿದರು. 1889 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‍ನ ಐದನೇ ಅಧಿವೇಶನದಲ್ಲಿ ಪಾಲ್ಗೊಂಡ ಆರು ಜನ ಮಹಿಳೆಯರಲ್ಲಿ ಇವರು ಕೂಡ ಒಬ್ಬರು. ಕಾರ್ಮಿಕ ಆಂದೋಲನಕ್ಕೆ ಸಹಾಯ ಮಾಡಲು ಕೊಲ್ಕಾತ್ತದಲ್ಲಿ ಸಭೆಯನ್ನು ಆಯೋಜಿಸಿದಲ್ಲದೆ ಅದರ ಅಧ್ಯಕ್ಷತೆಯನ್ನು ವಹಿಸಿದರು. ಹಾಗೇಯೆ ಕಾರ್ಮಿಕರಿಗೆ ಹಣದ ಸಹಾಯ ಮಾಡಲು ಸಂಘ ಕಟ್ಟಿದರು. 1923ರಲ್ಲಿ ನಿಧನರಾದ ಕದಂಬನಿ ಗಂಗೂಲಿಯವರ ವ್ಯಕ್ತಿತ್ವವು ತುಂಬಾ ವಿಶಿಷ್ಟವಾದದ್ದು. ಇಂದಿಗೂ ಹೆಣ್ಣು ಮಕ್ಕಳ ಬದುಕಿಗೆ ಸ್ಪೂರ್ತಿದಾಯಕವಾಗಿದೆ.
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ