“ಅಮ್ಮಿಯವರ ಗಜಲ್ಗಳ ಬಗ್ಗೆ” ಬಾಗೇಪಲ್ಲಿ.

ಪುಸ್ತಕ ಸಂಗಾತಿ

“ಅಮ್ಮಿಯವರ ಗಜಲ್ಗಳ ಬಗ್ಗೆ”

ಅಮೃತ ಉಮೇಶ್ ಶೆಟ್ಟಿ ಮೇಡಂ ಅವರು ಗೌರವ ಪೂರಕವಾಗಿ ಜೂನ್ ತಿಂಗಳಲ್ಲೇ ಸಂಕಲನದ ಪ್ರತಿಯನ್ನು ಕಳುಹಿದರು.ಓದ ಬೇಕಿದ್ದ ಹಲವು ಪುಸ್ತಕಗಳ ಜೊತೆಗೆ ಇದೂ ಸೇರಿತು.ಇದರ ಸರದಿ ಬೇಗನೆ ಬರಲಿಲ್ಲ. ನನ್ನ ಶಿಸ್ತನ್ನು ನಾನು ಮುರಿಯಲು ನನಗೆ ಹಕ್ಕಿಲ್ಲವೇ? ಎಂದು ಸ್ವ ಪ್ರಶ್ನಿಸಿಕೊಂಡು ಹಲವನು ಪಕ್ಕಕ್ಕೆ ಇರಿಸಿ ಓದಿದೆ. ಶಿಸ್ತಉಮುರಿಯ ಬಲವಾದ ಕಾರಣ,

ನನಗೆ ವಿದ್ಯಾ ಇಲಾಖೆಯ  ಶಿಕ್ಷಕ, ಉಪಾಧ್ಯಾಯ,ಪ್ರಾಧ್ಯಾಪಕ,ಉಪನ್ಯಾಸಕ, ಕನ್ನಡ ಎಂ ಎ ಪದವೀಧರರು ರಚಿಸುವ ಯಾವುದೇ ಪ್ರಾಕಾರದ ಸಾಹಿತ್ಯಕ್ಕಿಂತ ಇತರೆ ಕ್ಷೇತ್ರದಲ್ಲಿ ದುಡಿದು/ ಯುತ್ತಾ ಸಹಜ ಪ್ರವೃತ್ತಿಯಿಂದ ಸಾಹಿತ್ಯಕೆ ಒಲವುತೋರಿ ರಚಿಸಿದ ಕೃತಿಗಳ ಬಗ್ಗೆ ಚೂರು ಹೆಚ್ಚು ಆಸಕ್ತಿ.

ನನ್ನನೂ ಸೇರಿಸಿ (ಪೋಲೀಸು,ಕಂದಾಯ,ವ್ಯವಸಾಯ,ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ) ಇತರೆಯವರಿಗೆ ವಿದ್ಯಾ ಇಲಾಖೆಯವರಂತೆ ಶಿಷ್ಯವರ್ಗ, ವಾಚನಾಲಯ, ರಜೆ ಸೌಲಭ್ಯ, ಸಮಯ, ಪಾಠ ಮಾಡಲೇಬೇಕೆಂಬ ಉಧ್ಧೇಶದ ಬಲವಂತ ಅಧ್ಯಯನದ ಸೌಲತ್ತು ಇರುವುದಿಲ್ಲವೆಂದು ನನ್ನ ಅನಿಸಿಕೆ.

ಉಡಪಿ ಕಡಲ ತೀರದ ಹಚ್ಚ ಪರಿಸರದ ಪ್ರಕೃತಿ ಮಡಿಲಲ್ಲಿ ಹುಟ್ಟಿ ಬೆಳೆದು, ಮಾನವರ ಸಂಪರ್ಕಕಿಂತ ಇತರ ಜೀವಿಗಳ ಜೊತೆ ಬಾಲ್ಯಕಳೆದು, ತಾಯ ಪ್ರೀತಿ ಕುಂದಾಗದಂತೆ ಅತ್ತೆ ಪ್ರೀತಿಯ ಪಡೆದು, ಪತಿಯ ಪ್ರೋತ್ಸಾಹದಿಂದ ವಕೀಲೆ ಎನಿಸಿ ಸಂಸಾರ ಜಂಜಾಟಗಳಲ್ಲಿ ಕವಿತೆಗಳ ಬರೆದು ಗಜಲ್ಗಳ ಮೇಲಿನ ಪ್ರೀತಿಯಿಂದ,ಅವುಗಳ ಬಗ್ಗೆ ಕೇಳಿ ಅರಿತು ಸಂಕಲನ ತಂದಿರುವುದು ಖಂಡಿತವಾಗಿಯೂ ಅಭಿನಂದನೀಯ. ಅಮ್ಮನ ಪ್ರೀತಿಯನು ಅತ್ತೆಯಲೂ ಪಡೆದು ತಾನು ‘ಅಮ್ಮಿ’ ಎಂಬ ‘ತಖಲ್ಲೂಸ್’ ಆಯ್ಕೆ  ಮಾಡಿರುವುದು ಸೂಕ್ತವಾಗಿದೆ. ಬಹಳಷ್ಟು ಅರಂಬಿಕ ಗಜಲುಗಳಿಗೆ ತಖಲ್ಲೂಸ್ ಬಹಳ ಹೊಂದಿಕೆಯಾಗಿದ್ದು ತೀರಿಸಲಾಗದ ತಾಯ ಋಣಕ್ಕೆ ನ್ಯಾಯ ದೊರಕಿಸಿದೆ.

ಬಾಳಿನ ದಾರಿಗೆ ವಾತ್ಸಲ್ಯ ದೀವಿಗೆಯಾಗಿ” (ಗಜಲ್ 1) ರಿಂದ ತಿಳಿಯುತ್ತದೆ.

ಅಮ್ಮಿಯಬಾಳಿಗೆ ಸುಖದ ಗಂಟೆಯನು ಜೋರಾಗಿಯೇ ಬಾರಿಸುತಿರು (ಗಜಲ್3).

“ಅಮ್ಮಿಯ ಮಾತುಗಳ ಕೇಳುತ ಸಾಗೆ ಚಂದದಿ ಉಳಿಯಬಹದು.” ಎಂಬ ಸಾಲುಗಳು ಗಜಲಿನ ಅರ್ಥಕ್ಕೆ ಹೊಂದುವುದಲ್ಲದೆ ಸಮಗ್ರವಾಗಿ ಅಮ್ಮನ ಮಾತೃ ಪ್ರೀತಿಯ ಛಾಯೆಯನೂ ನೆನಪಿಸುತ್ತವೆ.

ಇದು ಕೊನೆಯವರೆಗೂ(ಗಜಲ್70)ಸಹ ಮಾರ್ಧನಿಸಿ. ಮಾತೆಯ ಮಮತೆ (ಕವಿತೆ)ಯಲ್ಲಿ ಅಪಸ್ವರ ಇಲ್ಲ(ಗಜಲ್68)

ಖಂಡಿತವಾಗಿಯೂ ನಾನು ವಿಮರ್ಶೆ ಮಾಡುತ್ತಿಲ್ಲ, ನಾ ತಿಳದ ಮಟ್ಟದ ಗಜಲಿನ ಜ್ಞಾನಕ್ಕೆ ತಟ್ಟಿದ್ದು ಹೇಳುತ್ತಿರುವೆ.

ನನಗೆ ಇಡೀ ಎಲ್ಲಾ ಗಜಲುಗಳಲ್ಲಿ ಕಂಡದ್ದು ಅಮೃತ ರವರ ವಿನೀತ ಭಾವ. ಹೇಳಬೇಕೆಂದಿರುವುದನು ಸರಳ ಭಾಷೆಯಲಿ ನವಿರಾಗಿ ಪದಗಳನು ಸರ್ಕಸ್ ಗೆ ಒಳಪಡಿಸದೆ ಬಳಸಿದ್ದಾರೆ.

ಗಜಲಿನ ನಿಯಮಗಳಿಗೆ ಹೆಚ್ಚು ಗಮನ ನೀಡಿ ಹೊಸ ಪ್ರಯೋಗಗಳ ಮಾಡದೆ ತಮ್ಮ ಮಿತಿಯನರಿತು ಬರೆದಿದ್ದಾರೆ. ಈ ಭಾವ ಅವರ ಮುಂದಿನ ಕೃತಿಗಳಲೂ ಇರಿಸಲಿ ಎಂದು ಆಶಿಸುವೆ.

“ನಾಳೆ ಹುಟ್ಟುವ ಭರವಸೆಗೆ ಇಂದು ರವಿಯು ಮುಳುಗುವುದನೋಡು” ಎಂಬ ಗಜಲ್63 ರ ಅವರ ಸಾಲೇ ಅವರಿಗೆ ಊರ್ಗೋಲಾಗಲಿ.

ಗಜಲ್53; ಶೀರ್ಷಿಕೆ ಬರೆಯದೆ ಹೋದೆಯಾ ಎಂಬ ಸಾಲಿದೆ, ಚಿಂತೆಯಿಲ್ಲಾ ನೀವಿಟ್ಟ ಶೀರ್ಷಿಕೆ ಶತ ಪ್ರತಿ ಸರಿಯಿದೆ.

ಗಜಲ್47;  ನಿಮ್ಮಿಂದ ಅರಳಿದ ಹೂ ಚಂದವಿದೆ ಮುಳ್ಳಿರಲು ಅದು ಗುಲಾಬಿಯಲ್ಲ ಮಾತೃ ದೇವತೆಗೆ ಅರ್ಪಿಸಿದ ಪರಿಮಳದ ಪಾರಜಾತ ವಾಗಿದೆ.

ಗಜಲ46; ನಲಿವ ಮುಂಗುರಳ ಬೆರಳಲಿ ತಿವಿದು ನೋಡಿದ ಶೃಂಗಾರ ರಸವೂ ಇದೆ.

ಗಜಲ40; ಒಡಲ ಗುಡಿಯ ಪ್ರೇಮ ಜ್ವಾಲೆಗಳ ಬಗ್ಗೆಯೂ ಇದೆ

ಗಜಲ17 : ಜೋಡಿ ನಕ್ಷತ್ರಗಳು ತಾಯಿ,ಅತ್ತೆ ನಿಮ್ಮ ಮುಂದಿನ ಗಜಲುಗಳಿಗೆ ದಾರಿ ತೋರಲಿ ಎಂದು ಬಯಸುವೆ.

ನಾನೂ ಸಹ ಗಜಲಕೃಷಿಕನಾದ್ದರಿಂದ ಹಲವುಕಡೆ ಪದಗಳಿಗೆ ಇನ್ನೂ ಚಂದದ ಪರ್ಯಾಯ ಪದಗಳು ಓದುವಾಗ ಸ್ವಾಭಾವಿಕವಾಗಿ ಹೊಳೆದವು.

ಅಮೃತಾರವರೂ ಸಹ ಇನ್ನೂ ಚೂರು ಪದ ಸಂಪತ್ತುನ್ನ ವಿಶಾಲ ಗೊಳಿಸಲು ಇತರರ ಗಜಲ್ ಹೆಚ್ಚು ಓದಲು ಸೂಚಿಸಿ,

ಸುತ್ತಲ ಸಮಾಜದ ಆಗು ಹೋಗುಗಳಿಗೆ ಸಹಕಾರಿಯಾಗುವ ಸಾಹಿತ್ಯ ರಚನೆ ಮುಂದೆ ಮಾಡುವಂತಾಗಲಿ ಎಂದು ಬಯಸಿ, ಅವರಿಗೆ ಶುಭಕೋರಿ ವಿರಮಿಸುವೆ.


ಬಾಗೇಪಲ್ಲಿ.

One thought on ““ಅಮ್ಮಿಯವರ ಗಜಲ್ಗಳ ಬಗ್ಗೆ” ಬಾಗೇಪಲ್ಲಿ.

  1. ತಮ್ಮ ಪ್ರತಿಕ್ರಿಯೆ ಅನಂತ ಅಮೂಲ್ಯ ಓದುಗರ ಗಮನಕ್ಕೆ ಪ್ರಕಟಿಸಿ ತಂದುದಕೆ ನನ್ನ ಧನ್ಯವಾದಗಳು.
    ಬಾಗೇಪಲ್ಲಿ.

Leave a Reply

Back To Top