ಕಾವ್ಯ ಸಂಗಾತಿ
ಹೈಕುಗಳಲ್ಲಿ ಅಡಗಿದ ಗಾಂಧಿ
ಡಾ.ವಾಯ್.ಎಮ್ ಯಾಕೊಳ್ಳಿ
೧
ಅಂತಹ ಸಂತ
ಇನ್ನೆಲ್ಲಿ ಬರುವನು
ಇಲ್ಲಂತೂ ಇಲ್ಲ
೨
ಮನುಜ ಜೀವ
ದೇವನಾಗುವ ಪರಿ
ಮಹಾತ್ಮ ಪಥ
೩
ಕೊಲ್ಲುವವನಿಗೂ
ಕರುಣೆ,ಕ್ಷಮೆ ಶಾಂತಿ
ಆತ ಮಹಾಂತ.
೪
ದೇವನೆಂಬವ
ನರರೂಪದಿ,ಇಹ
ಬೆಳಕಾಯಿತು
೫
ಕರುಣಾಮೂರ್ತಿ
ಅವ ಇರುವನಕ
ನೆಲವು ನಾಕ
೬
ಇದ್ದು ತೋರಿದ
ನಮ್ಮೊಡನೆ,ಹೋದನು
ಮತ್ತೆ ಕತ್ತಲು
೦೭
ಅರೆ ಬಟ್ಟೆಯ
ಸಂತ ನಡೆದ ದಾರಿ
ಬೆಳದಿಂಗಳು
೦೮
ಸೂರ್ಯ ಕುಂದದ
ನಾಡ ದ್ವಜ ಮೌನದಿ
ಕೆಳಗಿಳಿದಿತ್ತು
೦೯
ಸಹನೆ ಶಾಂತಿ
ಕರುಣೆ ಪ್ರಿತಿಗಳಷ್ಟೆ
ಗೆಲ್ಲುವದಿಲ್ಲಿ
೧೦
ತನಗೆನದೆ
ಬದುಕಿದ ದಾರಿಯೇ
ಮಹಾತ್ಮನದು
೧೧
ಲೋಕ ಸೋಲದು
ಅಸ್ತ್ರಗಳಿಗೆ,ಜಯವು
ಕರುಣೆ ,ಪ್ರೀತಿಗೆ
೧೨
ದೇಶವ ದಾಟಿ
ಗಳಿಸಿದ ಪದವಿ
ಕಾಲ ಕೆಳಗೆ
೧೩
ದೇಹದಲ್ಲಿ ನೆಟ್ಟ
ಬುಲೆಟ್ ಹೆತ್ತ ಪದ
ದೇವ ಕ್ಸಮಿಸು!
೧೪
ಹೊದ್ದ ಬಟ್ಟೆಯ
ತೆರೆದು ನೋಡಿದರೆ
ಬರೀ ಬೆಳಕು
೧೫
ಧೀರ ನಡೆದ
ದಾರಿ ,ಅಲ್ಲ ಸರಳ
ಶರಧಿಯಂತೆ!
೧೬
ಎರಡು ಮಾತು
ನಿಮಷದ ಮೌನವು
ಈ ಬೆಳಗಿಗೆ
ತುಂಬ ಗಹನವಾದ ಸಾಲುಗಳು
ಚಂದದ ಹೈಕುಗಳು
Beautiful.