ಕಾವ್ಯ ಸಂಗಾತಿ
ವೈರುಧ್ಯವೇ ಜೀವನ
ಲಕ್ಷ್ಮೀದೇವಿ ಪತ್ತಾರ


ಏನು ಮಾಡಲಾಗದು
ಈ ಪ್ರಕೃತಿಯೇ ಹೀಗೆ
ಹೂವಿನ ಜೊತೆ
ಮುಳ್ಳನ್ನು ಸಹಿಸಬೇಕು
ಬೆಳೆಯೊಂದಿಗೆ ಬೆಳೆಯುವ
ಕಳೆಯನು ಕೀಳುತ್ತಲಿರಬೇಕು
ಸಜ್ಜನರೊಂದಿಗೆ ದುರ್ಜನರ
ಸಂಪರ್ಕವಾಗುವುದು
ಯಾರನ್ನು ಎಲ್ಲಿ ಇಡಬೇಕೆಂಬುದ
ತಿಳಿದಿರಬೇಕು
ಮಳೆಯೊಂದಿಗೆ ಕೊಳೆಯು
ಹರಿದು ಬರುವುದು
ಸೋಸಿ ಕುಡಿಯಬೇಕು
ಇಲ್ಲ ತಿಳಿಯಾಗುವ ತನಕ ತಾಳಬೇಕು
ಯೌವ್ವನದ ಬಂದಂತೆ
ಮುಪ್ಪು ಆವರಿಸಿಕೊಳ್ಳುವದು
ಮಾಗುತ್ತಾ ಬಾಗುತ್ತಾ ಜೀವನ ಸೇವಿಸಬೇಕು
ಕತ್ತಲೆ ಬೆಳಕಿನ ಚೆಲ್ಲಾಟವನ್ನು
ಕಂಡು ಆನಂದಿಸುವದ ಕಲಿಬೇಕು
ಸುಖ ದುಃಖಗಳ ಜೋಕಾಲಿ
ಜೀಕಿ ಗೆಲ್ಲಬೇಕು