ಕಾವ್ಯಸಂಗಾತಿ
ಗಜಲ್
ಬಾಗೇಪಲ್ಲಿ
ಎನ್ನ ಬೇಡಿಕೆಗಳು ಇಂಗಿತು ನೀನೊಪ್ಪದೆ
ನನ್ನ ಜೀವ ಸೊರಗಿ ಹೋದವು ನೀದಕ್ಕದೆ
ಕಂಡ ಕನಸ ವಿವರಿಸೆ ಕೇಳಿ ಆನಂದಿಸಿದೆ
ನನಸಾಗದೆ ಅವುಗಳ ಮೃಗತೃಷ್ಣೆ ಆಗಿಸಿದೆ
ನಾನೆಂದೂ ಶೃತಿ ಮೀರಿ ಹಾಡಲಿಲ್ಲ ಖರೆ
ಕಛೇರಿ ಚಂದ ಆಲಿಸಿ ಮಂಗಳವ ಕೆಡಸಿದೆ
ಕಾಲ ಮಿಂಚಿಲ್ಲ ಇನ್ನೊಮ್ಮೆ ಯೋಚಿಸು.
ಬಲವಂತ ಮಾಘಸ್ನಾನ ಪುಣ್ಯ ತರುವುದೆ
ಕೃಷ್ಣಾ! ಪ್ರೀತಿ ಇದ್ದೂ ಸಹ ಇಲ್ಲದಂತಾಡಿದೆ
ಪ್ರೇಮಾಲಾಪದ ಗಜಲ ಶೃತಿಯ ಕೆಡಸಿದೆ
ಬಾಗೇಪಲ್ಲಿ