ಸಂಯೋಗ- ಹಂಸಪ್ರಿಯ

ಕಾವ್ಯ ಸಂಗಾತಿ

ಸಂಯೋಗ

ಹಂಸಪ್ರಿಯ

ನೆನಪಿನ ಸೆಲೆ

ಬತ್ತಿ ಹೋಗಿದ್ದವು ಇನಿಯ;

ಮತ್ತೆ ಇದಿರು ಬಂದಾಗ

ತೋಡಿದ ಒರತೆಯಲ್ಲಿ ಜಲದ ಝರಿ ಹರಿದಂತೆ

ಜಿನುಗಿದವು ನೆನಪುಗಳು…..

ಮಿಂಚಂತೆ ಇದಿರು ನಿಂತೆ!

ಹೊಳಪಿರದ ಕಣ್ಣಲ್ಲಿ

ಹೊಸ ಬೆಳಕು ಮೂಡಲಿಲ್ಲ..

ಮುತ್ತಿಟ್ಟಿದ್ದ ತುಟಿಗಳು

ಮಾತಾಡಲಿಲ್ಲ …                                          

 ನೋಡಿದ ಕಣ್ಣುಗಳೇ

ಮಾತನಾಡಿದವು…

ಮೌನ  ಮಾತಾದಾಗ ಕದ್ದು ಕೇಳುವುರಾರು?

ರಾಮನಲ್ಲ ನೀ  ಕೃಷ್ಣನಲ್ಲ; ನಾ

ಸೀತೆ ಅಲ್ಲ ; ಅಲ್ಲ ನಾ.. ಪಾಂಚಲಿ…

ಭೋಗದಲ್ಲಿಲ್ಲ ‘ಪ್ರೇಮ’..                                  

ಇರುವುದು

ಸಂಯೋಗದಲಿ…

ನೀ ಪ್ರೀತಿಸಿದ

ಪುಷ್ಪಕೆ ದುಂಬಿಗಳು ಸಾಲು ಸಾಲು..

ಮಕರಂದವು ನಿನಗೆ ಮೀಸಲು…

ಆಲಂಗಿಸಿ..

ಚಿಮ್ಮಿಸಿ ಜೀವಜಲ..

ಜೀವಜಲದ  ಸದ್ದ ಆಲಿಸಿದ “ನಲ್ಲ”…

ಬರುವುವೆಯಾ?                                                   

ನೀ ಬರಲಾರೆ…

ಮತ್ತೆ ಸಿಗಲಾರೆ…….


ಹಂಸಪ್ರಿಯ

Leave a Reply

Back To Top