ಡಾ.ದಾನಮ್ಮಕವಿತೆ-ಬದುಕಲು ಬಿಡಿ

ಕಾವ್ಯಸಂಗಾತಿ

ಬದುಕಲು ಬಿಡಿ

ಡಾ.ದಾನಮ್ಮ

ಹೊಟ್ಟೆಯಲ್ಲಿಯೇ ಹಿಚುಕದಿರಿ
ಬಟ್ಟೆಯಲ್ಲಿ ಬಿಸಾಡದಿರಿ
ವರದಕ್ಷಿಣೆಗಾಗಿ ನೋಯಿಸದಿರಿ
ಬಾಲಕಾರ್ಮಿಕತೆಗೆ ನೂಕದಿರಿ
ದೇವತೆಯೆಂದು ವಿಜೃಂಬಿಸದಿರಿ
ಮಹಿಳಾ ಗೋಷ್ಟಿಗೆ ಸೀಮಿತಗೊಳಿಸದಿರಿ
ಜಾಹೀರಾತಿನಲಿ ವಿರೂಪಗೊಳಿಸದಿರಿ
ಭೋಗ ವಸ್ತು ಎಂದರಿಯದಿರಿ
ಅಕ್ಷರಮಾಲೆ ತೊಡಿಸಿನೋಡಿ
ಅವಕಾಶ ಕೊಟ್ಟು ಬಿಡಿ
ಉದ್ಯೋಗ ನೀಡಿ ನೋಡಿ
ವೇತನ ನನಗಾಗಿ ಬಿಡಿ
ನಿರ್ಣಯ ಮಾಡಲು ಬಿಡಿ
ಆಶಯಂತೆ ಬಾಳ ಕೊಡಿ
ನಿರ್ಧಾರ ಹೇರಬೇಡಿ


ಹೆಣ್ಣು ಹೆಣ್ಣೆಂದು ಜರಿಯಬೇಡಿ
ಆಧುನಿಕತೆಯ ಸುಳಿಯಲ್ಲಿ
ಹೊಸದಾದ ಶೋಷಣೆಯಲ್ಲಿ
ಬಗೆ ಬಗೆಯ ರೂಪದಲ್ಲಿ
ಕಟ್ಟಿಹಾಕದಿರಿ ಲಿಂಗಬೇಧದಲ್ಲಿ
ನನಗೂ ಬದುಕಲಿ ಬಿಡಿ


ಡಾ.ದಾನಮ್ಮ

Leave a Reply

Back To Top