ಕವಿತೆ-ಯ.ಮಾ.ಯಾಕೊಳ್ಳಿ ಸವದತ್ತಿ

ಕಾವ್ಯ ಸಂಗಾತಿ

ಕವಿತೆ

ಯ.ಮಾ.ಯಾಕೊಳ್ಳಿ ಸವದತ್ತಿ

ಒರೆಗೆ ಹಚ್ಚದಿರು
ಮುಳ್ಳು ಚುಚ್ಚುವದು
ಗೀರಿ ಗಾಯವಾಗಿದ್ದೂ
ನನಗೆ ನೋವಾಗದು

ಎಷ್ಟು ಸಲ ಹೇಳುವದು
ಅದದೇ ನೋವುಗಳ
ಹಾಡು ಹಳೆಯದಾಗಿದೆ
ವೀಣೆಯ ದಾರ ಸೋತಿವೆ

ಹಾಡು ಹೊಸದಾದರೇನು?
ಹರೆಯ‌ ಮರಳುವದೇ
ಮುರುಟಿದ ಚರ್ಮ ಅದಾವ
ಕಂಪನಿಯ ಮುಲಾಮು
ಚೇತನ ತರಲಾರದು

ಎಲೆ ಉದುರಿ‌ ಮರಳಿ
ಹೊಸತಾಗುವ ಭಾಗ್ಯವಿಲ್ಲದ
ಮರುಳು ಮನುಜರು ನಾವು
ಏನನೂ ಬಯಸಿದರೂ ಸಿಗದು

ಇರುವದಿಷ್ಟೇ ಹಳಹಳಿಕೆ
ಕವಿತೆ ಬರೆದಂತಲ್ಲ ಬದುಕು
ಇಷ್ಟಾದರೂ ಸಾದ್ಯವಾದುದಕ್ಕೆ
ನಾನೂ ನೀನೂ ಸಂಭ್ರಮ ಪಡಬೇಕು


ಒರೆಗೆ ಹಚ್ಚದಿರು
ಮುಳ್ಳು ಚುಚ್ಚುವದು
ಗೀರಿ ಗಾಯವಾಗಿದ್ದೂ
ನನಗೆ ನೋವಾಗದು

ಎಷ್ಟು ಸಲ ಹೇಳುವದು
ಅದದೇ ನೋವುಗಳ
ಹಾಡು ಹಳೆಯದಾಗಿದೆ
ವೀಣೆಯ ದಾರ ಸೋತಿವೆ

ಹಾಡು ಹೊಸದಾದರೇನು?
ಹರೆಯ‌ ಮರಳುವದೇ
ಮುರುಟಿದ ಚರ್ಮ ಅದಾವ
ಕಂಪನಿಯ ಮುಲಾಮು
ಚೇತನ ತರಲಾರದು

ಎಲೆ ಉದುರಿ‌ ಮರಳಿ
ಹೊಸತಾಗುವ ಭಾಗ್ಯವಿಲ್ಲದ
ಮರುಳು ಮನುಜರು ನಾವು
ಏನನೂ ಬಯಸಿದರೂ ಸಿಗದು

ಇರುವದಿಷ್ಟೇ ಹಳಹಳಿಕೆ
ಕವಿತೆ ಬರೆದಂತಲ್ಲ ಬದುಕು
ಇಷ್ಟಾದರೂ ಸಾದ್ಯವಾದುದಕ್ಕೆ
ನಾನೂ ನೀನೂ ಸಂಭ್ರಮ ಪಡಬೇಕು

———————————————

Leave a Reply

Back To Top