ಗಜಲ್ ಶಂಕರಾನಂದ ಹೆಬ್ಬಾಳ

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

Burning hibiscus flower

ಬರೆದ ಗೀತೆಗೆ ರಾಗವನು ನೀಡಲಿಲ್ಲ ನೀನು
ಮರೆತ ಹೃದಯಕ್ಕೆ ಒಲವನು ಬೇಡಲಿಲ್ಲ ನೀನು

ಆಡಿದ ದಿನಗಳು ಮನದಿ ಮರೆಯಾದವೆ ಸಖಿ
ನೋಡಿದ ಕ್ಷಣದಿ ಪ್ರೀತಿಯಲಿ ಕಾಡಲಿಲ್ಲ ನೀನು

ತಾಳ ಲಯಕ್ಕೆ ಹೊಂದಾಣಿಕೆ ತಪ್ಪಿ ಹೋಯಿತೆ
ನಾಳಿನ ಬದುಕಲಿ ಸ್ಥಿರವಾಗಿ ಮೂಡಲಿಲ್ಲ ನೀನು

ಏಳು ಬೀಳಿನಲಿ ಜೊತೆಗೆ ಇರುವೆನೆಂದು ಹೇಳಿದೆ
ಗೋಳಿನ ಜೀವನ ಕಣ್ಣೆದುರು ನೋಡಲಿಲ್ಲ ನೀನು

ವಿರಹದುರಿ ಅಭಿನವಗೆ ಅವಿರತ ಬೆನ್ನು ಹತ್ತಿತಲ್ಲ
ತೊರೆದು ಹೊರಟ ಜೀವವನು ಕೂಡಲಿಲ್ಲ ನೀನು


Leave a Reply

Back To Top