ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ನೀನು ತೊರೆದ ದಿನವೇ ಗಜಲ್ ಬರೆಸಿತು
ನೀ ತೋರಿದ ಸೆಡುವೇ ಗಜಲ್ ಬರೆಸಿತು
ಮರುಭೂಮಿಗೂ ಮಳೆ ಮುಕ್ಕಿಸುವ ಆಸೆ
ಸಂಬಂಧ ಬೆಸೆಯದ ಕಾಲವೇ ಗಜಲ್ ಬರೆಸಿತು
ಬಾನು ಭೂಮಿ ಒಂದಾಗುವುದು ಭ್ರಮೆ ಅಷ್ಟೆ
ನೋವಲ್ಲಿ ದೂರಾದ ಕ್ಷಣವೇ ಗಜಲ್ ಬರೆಸಿತು
ನಿನ್ನ ಹೆಸರ ಉಸಿರು ಕಣ್ಣೀರಾಗಿ ಸುರಿಸಿತು
ನೋವು ತುಂಬಿದ ನಯನವೇ ಗಜಲ್ ಬರೆಸಿತು
ಮೊಹಬತ್ತಿನ ತಡಪಲ್ಲಿ ಸಾಯುವೆ ಏಕೆ “ಮಾಜಾ”
ನೊಂದ ಮನದ ಭಾವವೇ ಗಜಲ್ ಬರೆಸಿತು