ಎ. ಹೇಮಗಂಗಾ-ಗಜಲ್

ಕಾವ್ಯಸಂಗಾತಿ

ಗಜಲ್

ಎ. ಹೇಮಗಂಗಾ

ಇಹ, ಪರದ ಅರಿವೇ ಇಲ್ಲದಂತಾಗಿದೆ ನಿನ್ನಲ್ಲಿರೆ ನನ್ನ ಮನಸು
ಹಸಿವು, ನಿದಿರೆ ಏನೂ ಕಾಣದಂತಾಗಿದೆ ನಿನ್ನಲ್ಲಿರೆ ನನ್ನ ಮನಸು

ನಿನ್ನೊಡನೆ ನನ್ನ ಈ ಪರಿ ಬೆಸೆದ ಶಕ್ತಿಯಾದರೂ ಯಾವುದು ?
ಹಗಲಿರುಳಿನ ಅಂತರ ತಿಳಿಯದಂತಾಗಿದೆ ನಿನ್ನಲ್ಲಿರೆ ನನ್ನ ಮನಸು

ಬಾಳು ಹೊಸ ತಿರುವು ಪಡೆವುದೆಂಬ ನಿರೀಕ್ಷೆ ಕಿಂಚಿತ್ತೂ ಇರಲಿಲ್ಲ
ನನ್ನನ್ನೇ ನಾ ಪೂರ್ಣ ಮರೆತಂತಾಗಿದೆ ನಿನ್ನಲ್ಲಿರೆ ನನ್ನ ಮನಸು

ಮೈ ಸವರುವ ಕುಳಿರ್ಗಾಳಿಯೂ ವಿರಹದ ಬೇಗೆ ತಣಿಸಿಲ್ಲವೇಕೆ ?
ಜೀವಕ್ಕೆ ಜೀವವೇ ನೀನಾದಂತಾಗಿದೆ ನಿನ್ನಲ್ಲಿರೆ ನನ್ನ ಮನಸು

ಮಿಲನದ ಘಳಿಗೆ ಎಂದು ಬರುವುದೋ ತಿಳಿಯದು ಹೇಮ ಳಿಗೆ
ನಿತ್ಯ ಕಾಯುವುದೇ ಕಾಯಕದಂತಾಗಿದೆ ನಿನ್ನಲ್ಲಿರೆ ನನ್ನ ಮನಸು


Leave a Reply

Back To Top