ಹಮೀದಾ ಬೇಗಂ ದೇಸಾಯಿರವರ ಗಜಲ್

ಕಾವ್ಯ ಸಂಗಾತಿ

ಗಜಲ್

ಹಮೀದಾ ಬೇಗಂ ದೇಸಾಯಿ

ವಿಷವೂಡುವ ಜನರ ನಡುವಲಿ ಬದುಕಬೇಕಾಗಿದೆ
ವಂಚಿಸುವ ಕುತಂತ್ರರ ಜಾಲದಲಿ ನರಳಬೇಕಾಗಿದೆ

ಮುಖವಾಡವ ಹಾಕಿದವರ ಜೊತೆಯಲಿ ನಡೆಯಬೇಕಾಗಿದೆ
ಜಾತಿಬೇಲಿಯ ಕಟ್ಟಿದವರ ನೆರಳಲಿ ನಲುಗಬೇಕಾಗಿದೆ

ಅಂಧಶ್ರದ್ಧೆಯ ಹರಡಿದವರ ಕತ್ತಲಲಿ ತೆವಳಬೇಕಾಗಿದೆ
ಬಂಧುರವ ಮುರಿದವರ ಹಂಗಿನಲಿ ಮರುಗಬೇಕಾಗಿದೆ

ಎಂಜಲೆಲೆಯ ನೆಕ್ಕುವವರ ತಟ್ಟೆಯಲಿ ಹಳಸಬೇಕಾಗಿದೆ
ಅನಾಚಾರವ ಮೆರೆವವರ ಅಬ್ಬರದಲಿ ಕೊರಗಬೇಕಾಗಿದೆ

ನೆತ್ತರವ ಸುರಿವವರ ಧಾರೆಯಲಿ ನೆನೆಯಬೇಕಾಗಿದೆ
ಬೇಗಂ ಮನವ ರಮಿಸುವವರ ಒಲವಿನಲಿ ಬೆರೆಯಬೇಕಾಗಿದೆ-

——————————————

.

2 thoughts on “ಹಮೀದಾ ಬೇಗಂ ದೇಸಾಯಿರವರ ಗಜಲ್

Leave a Reply

Back To Top