ಡಾ. ಎಚ್ ಎಲ್ ಪುಷ್ಪಾ  ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ

ನಮ್ಮೆಲ್ಲರ ಅಚ್ಚುಮೆಚ್ಚಿನ, ಆತ್ಮೀಯರಾದ ಡಾ. ಎಚ್ ಎಲ್ ಪುಷ್ಪಾ ಮೇಡಂ ಮೊನ್ನೆ ಭಾನುವಾರ ನಡೆದ

” ಕರ್ನಾಟಕ ಲೇಖಕಿಯರ ಸಂಘ ” ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು ಮೇಡಂ.

ಹೆಚ್.ಎಲ್.ಪುಷ್ಪರವರು ದೊಡ್ಡಬಳ್ಳಾಪುರದ ಹೊಸಳ್ಳಿ ಉಜ್ಜನಿಯಲ್ಲಿ 18 ನೇ ಸೆಪ್ಟಂಬರ್‌ 1962ರಂದು  ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ವಿಜ್ಞಾನದಲ್ಲಿ ಪದವಿಯನ್ನು , ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ರಾಜ್ಯದ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದು,  ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ‘ ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ‘ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.‌ಡಿ ಪದವಿ ಪಡೆದಿರುತ್ತಾರೆ.

ಪುಷ್ಪರವರ ಪ್ರಮುಖ ಕೃತಿಗಳೆಂದರೆ

ಅಮೃತಮತಿಯ ಸ್ವಗತ ,

ಗಾಜುಗೊಳ,

ಮದರಂಗಿ ,

ವೃತ್ತಾಂತ ,

ಲೋಹದ ಕಣ್ಣು (ಕವನ ಸಂಕಲನ),

ಭೂಮಿಲ್ಲ ಇವಳು,

ಗೆಲ್ಲಲಾರ್ಕುಮೆ ಮೃತ್ಯುರಾಜನಂ ,

ಪರ್ವಾಪರ್ವ (ನಾಟಕ),

ಅವಲೋಕನ,

ಗಂಧಗಾಳಿ,

ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ)

ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಾಗೆ ಪುಷ್ಪರವರು ದೆಹಲಿ, ಸಿಕ್ಕಿಂ, ಭುವನೇಶ್ವರಗಳಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿ ಹಾಗೆ ಅನೇಕ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.

‘ ಸ್ತ್ರೀ ಎಂದರೆ ಅಷ್ಟೇ ಸಾಕೆ ’ ವಿಮರ್ಶಾ ಸಂಕಲನಕ್ಕೆ 2015ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ ಸಾಹಿತ್ಯ ಶ್ರೀ ‘  ಗೌರವ ಪ್ರಶಸ್ತಿ ಸಂದಿದೆ. ಮಂತ್ರಂ ಆರ್ಟ್ಸ್ ಸಂಸ್ಥೆಯ ಆಫ್ರಿಕಾದ ಪ್ರಸಿದ್ದ ಕವಿಯತ್ರಿ ‘ ಮಾಯಾ ಏಂಜಲೋ ‘ ಹೆಸರಿನ ಕಾವ್ಯ ಪುರಸ್ಕಾರ, ನಾಡಚೇತನ ಸಂಸ್ಥೆಯ ಗೌರವ ಪುರಸ್ಕಾರ , ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್‌ ಕಾವ್ಯ ಪ್ರಶಸ್ತಿ ,  ಸಾರಂಗಮಠ ಪಾಟೀಲ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸದ್ಯ  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರ ” ರಸಗ್ರಹಣ ” ಅಂಕಣ ಪ್ರಕಟಗೊಳ್ಳುತ್ತಿದೆ.

ಎರಡು ವರ್ಷದ ಹಿಂದೆ ನಮ್ಮ ಒಂದು ಸಮಾರಂಭಕ್ಕೆ ಪುಷ್ಪ ಮೇಡಂ ಅನುಮತಿ ಪಡೆಯದೆ ಅವರ ಹೆಸರನ್ನು ಹಾಕಿ , ಆಹ್ವಾನ ಪತ್ರಿಕೆ ಕಳಿಸಿದ್ದೆ. ಹಾಗೆ ಅವರಲ್ಲಿ ಕ್ಷಮೆ ಕೇಳಿ, ಬನ್ನಿ ಎಂದಿದ್ದೆ. ಬಂದು ತುಂಬಾ ಅರ್ಥಪೂರ್ಣ ಮಾತುಗಳನ್ನಾಡಿದ್ದರು. ಅವರ ಸರಳ , ಸಜ್ಜನಿಕೆಗೆ ಇದು ಸಾಕ್ಷಿ..

ಸಾಹಿತ್ಯ ಲೋಕದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಪುಷ್ಪ ಮೇಡಂರವರ  ನಾಯಕತ್ವದಲ್ಲಿ ಒಂದಷ್ಟು ಆರೋಗ್ಯಕರ ಚಿಂತನೆಗಳು ಮೂಡಲಿ ಎಂದು ಹಾರೈಸುವೆ.

ಡಾ. ಎಂ. ಈ. ಶಿವಕುಮಾರ ಹೊನ್ನಾಳಿ

One thought on “ಡಾ. ಎಚ್ ಎಲ್ ಪುಷ್ಪಾ  ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ

Leave a Reply

Back To Top