ಕಾವ್ಯಸಂಗಾತಿ
ದಿವ್ಯಮಂತ್ರ
ಹಂಸಪ್ರಿಯ
ದಿವ್ಯಮಂತ್ರ ಭಾಷೆ ನೂರು
ಸದ್ಭಾವವೊಂದೆ ವಸುಧೆಯೊಳಗೆ..!
ವಸುದೈವ ಕುಟುಂಬಕಂವೆಂಬ
ದಿವ್ಯಮಂತ್ರ ಭಾರತೀಯರೆದೆಯೊಳಗೆ ..//ಪ//
ಸಪ್ತಖಂಡಗಳ
ಪೃಥ್ವಿಯ ಹೃದಯವು
ಭರತ ಭೂಶಿರವು…..
ಭರತ ಮಾತೆಗೆ
ಹಿಮಗಿರಿಗಳೆ ಮಣಿಮುಕುಟವು
ವಿಂಧ್ಯ- ಸಹ್ಯಾದ್ರಿ ಗಿರಿಶಿಖರಗಳು
ದಿವ್ಯಾಸ್ತ್ರಗಳು…
ತ್ರಿ-ಸಾಗರಗಳಲಿ
ತೇಲುವ ಭರತ ಭೂಮಿಯೂ
ಧರೆಯಮೇಲಿನ ಸ್ವರ್ಗವು……//1//.
ನರ- ನಾಡಿಗಳಲ್ಲಿ ಹರಿವ ಧಮನಿಯಂತೆ
ಹರಿವವಿಲ್ಲಿ ಜಲ- ಜೀವನದಿಗಳು…
ಗಂಗೆ-ತುಂಗೆ;ಕಾವೇರಿ-ಕೃಷ್ಣೆ,
ನರ್ಮದಾ-ಸಿಂಧೂ; ಗೋದಾವರಿ-ಭದ್ರೆ,
ನಾನಾ ನದಿಗಳ ಶರಧಿ ಸಮ್ಮಿಲವು…//2//
ಗಡಿಗಳೆಲ್ಲ ಗುಡಿಗಳಂತೆ
ಹೊಳೆಯುವಂತೆ ಕಳಸ
ಸೌಹಾರ್ದತೆಯ ಬೆಳಕು
ಸಹೃದಯರ ಮನ – ಮಂದಿರಗಳಲಿ……//3//
ಬಂದರೆಷ್ಟೋ ದಾಳಿಕೋರರು
ಬಂಧುಗಳಾಗಿ ಬಾಳುತಿಹರು
ವಿವಿಧ ಧರ್ಮ
ಉಡುಗೆ – ತೊಡುಗೆ
“ದಯ” ವೆಂಬ ಏಕತೆಯ
ದಿವ್ಯ ಸೂತ್ರ ಮನ – ಮನೆಗಳೊಳಗೆ…..//4//