ಸವತೆ ಪುರಾಣ¡

ಲಹರಿ–

ಸವತೆ ಪುರಾಣ¡


ಅಧ್ಯಾಯ –4

ರೂಪ ಮಂಜುನಾಥ

ಅಬ್ಬೋ¡ ಸವತೆಯಲ್ಲೆ ಏಟೊಂದು ಬಗೆ ಐತೆ¡

ಒಂದ್‌ಒಂದ್‌ ಜಾತೀಗು ಒಂದ್ ರುಚಿ ಐತೆ¡

ಏಟ್ ಬಗೆಯಿದ್ರೂ,ಇರ್ಲಿ ಬಿಡಿ,

ನಮ್ಮೂರ್ನ ಸವತೆ ರುಚಿ, ಯಾವ್ ಸವ್ತೇಗೈತೇ?

ನೀರ್ ಸವತೆ,ಗೀರ್  ಸವತೆ,

ಹಳದಿ ಸವತೆ, ಹಸಿರ್ ಸವತೆ¡

ಕಂದ್ ಸವತೆ, ಮುಳ್ಳ್ ಸವತೆ¡

ಸಾಂಬಾರ್ ಸವತೆ, ಗರ್ಕಿನ್ ಸವತೆ¡

ದುಂಡಗಿರುವ ಚಂಡಿನಂತೆ,

ಬೆಳ್ಳನೆಯ ಚೆಂದುಳ್ಳಿಯಂತೆ,,

ಉದ್ದಕೆ ಬಾರುಕೋಲಿನಂತೆ,

ಸುತ್ತು ಮಲಗಿದ ಹಾವಿನಂತೆ,

ಪುಟ್ಟ ತೊಂಡೆಕಾಯಿಯಂತೆ,

ಬಣ್ಣಬಣ್ಣದ ರಂಗಿನಲ್ಲಿ,

ಬಗೆಬಗೆಯ ಆಕಾರದಲ್ಲಿ,

ಸೃಷ್ಟಿಯಾಗಿರುವಳು ನಮ್ಮ ಸವತೆಮಾತೆ!

ಹಸಿಮೆಣಸಿನ ಖಾರ ಸವತೆಗೆ ಮಸ್ತಂತೆ¡

ಕೆಂಪು ಖಾರವೂ ನಡೆಯುವುದಂತೆ¡

ಕರಿಮೆಣಸಿನ ಜೊತೆ ಸೇವಿಸಲು,

ಶೀತ ತಡೆಯುವುದಂತೆ¡

ಎಲ್ಲರ ಬಾಯಲು ಜೊಲ್ಲು ಹರಿಯುವುದು,

ಉಪ್ಪುಖಾರದ ಜೊತೆಯೊಲು,

ನೋಡಲು ಸವತೆ!

ಪ್ರವಾಸಕ್ಕೆ ಒಯ್ಯಲು, ಬಲು ಹಿತಕರ  ಸವತೆ¡

ಪ್ರಾಯಾಸವಾದಾಗಲೂ ಸವತೆ,

ಉತ್ಸಾಹ ಕೊಡುವುದಂತೆ¡

ಎಲ್ಲರಿಗೂ ಎಟುಕುವ ಈ ಸವತೆ¡

ತಿನ್ನಲು ಬೇಸರ ಯಾತಕೇ? ನಿಮಗ್ಯಾತಕೆ?

ಎಂಬಲ್ಲಿಗೆ ಹೊಳೆನರಸೀಪುರ ಕ್ಷೇತ್ರದ ರೂಪಾ ಕಾವ್ಯಕಾಂಡದ ಸವತೆ ಪುರಾಣದ ನಾಲ್ಕನೇ ಅಧ್ಯಾಯವು

ಮುಗಿಯಿತು.ಮೂರು ಕಣ್ಣಿನ ತುಪ್ಪದಾರತಿ ಹಚ್ಚಿಕೊಳ್ಳಿ, ಎರಡು ಗರ್ಕಿನ್ ಸವತೆಯನ್ನ ಖೀರಾ ಅಮ್ಮಾಳ್ ಗೆ ತೋರಿಸಿ  ಚಿವುಟಿ ನೈವೇದ್ಯಕ್ಕಿಟ್ಟು  ಸಮರ್ಪಿಸಿ!

ಸವತೆಯ ಜೊತೆ ದಾಳಿಂಬೆ, ಕ್ಯಾರೆಟ್ಟು,ಕಡಲೆಬೀಜ ಬೆರೆಸಿ

ಸಾಲಡ್‌ ಮಾಡಿ ತಿನ್ನಿ,ನೆತ್ತಿ ತಂಪಾಗಿರಿಸಿಕೊಂಡು ನಗುನಗುತ್ತಿರಿ¡


Leave a Reply

Back To Top