ಡಾ.ಡೋ ನಾ ವೆಂಕಟೇಶ-ಬಿಸಿಲ ಕೋಲು

ಕಾವ್ಯಸಂಗಾತಿ

ಬಿಸಿಲ ಕೋಲು

ಡಾ.ಡೋ ನಾ ವೆಂಕಟೇಶ

ಬಿರು ಬೇಸಿಗೆಯ
ನಟ್ಟಿರುಳ ಬಿಸಿಯುಸಿರು ಪ್ರಿಯೇ
ಕಾತುರದಿ ಕಾಯುತ್ತೆ
ನಿನ್ನ ಆಗಮನದ ಮಳೆಗಾಲ.
ತುದಿಗಾಲ ಮೇಲೆ ನಿಂತ
ನೀ ಬರುವ ಪು ವಾಸನೆ

ಬರುವ ಮುನ್ನ ಧಡಧಡಿಸಿ
ನೀ ಸಿಡಿಲಾಗಿ ಒಡಲಾಳದಿ
ಅಲ್ಲಲ್ಲಿ ಮಿಂಚು
ಕಂಡಾಗ ಮೈ ಮನಗಳ ಸಂಚು

ಧೋ ಎಂದು ಸುರಿವ ಸೋನೆ
ರಾತ್ರಿಯೆಲ್ಲಾ ಕನಸುಗಳ ಕಾರ್ಖಾನೆ ನನಸುಗಳ
ಕಾರ್ಯಾಗಾರ!!
ಕುಶಾಲ ಕರ್ಮಿಗಳೆಲ್ಲ!!

ಮುಂದೆ
ಚಿನ್ನಾ ಜೀವನವೆಷ್ಟು ಚೆನ್ನ
ಹಸುರುಟ್ಟ ಮೈ!

ದಾನ
ಧರ್ಮದ ಮೂಲ
ನನ್ನ ನಿನ್ನ ಮೈದಾನದ
ಬಿಸಿಯುಸಿರು

ಈಗೀಗ
ಮಳೆಗಾಲ ಚಳಿಗಾಲ
ಮತ್ತೆ ಬೇಸಿಗೆಯ ಕಾಲ
ಎಲ್ಲಾ ಒಂದೇ

ಉಳಿದದ್ದು ನೆನಪಿನ
ಬಿಸಿಲ ಕೋಲು
ನೆಟ್ಟ ಕೋಲಿನ ನಡುವೆ
ಕಂಡ ಬ್ರಹ್ಮಾಂಡ
ಜೀವನದಿ ಮಾಡಿದ್ದು
ಮಾಡದೇ ಉಳಿಸಿದ್ದು

ಎಲ್ಲ ನಾನಾಗಲೇ ಹೇಳಿದಂತೆ
ಬರೆ ಬರೇ ಬಿಸಿಲ ಕೋಲು!!!


4 thoughts on “ಡಾ.ಡೋ ನಾ ವೆಂಕಟೇಶ-ಬಿಸಿಲ ಕೋಲು

  1. ಉಳಿದದ್ದು ಬಿಸಿಲ ಕೋಲು ಕವನ ಮಾತ್ರಾ ಸುಡು ಬಿಸಿಲಿನಲ್ಲಿ ತಂಪೆರೆಯುವ ಹನಿ ಮಳೆ

  2. ನಿಮ್ಮ ಈ ಸುಂದರವಾದ ಈ ಕವಿತೆಯನ್ನು ಓದಿ
    ನನ್ನ ಹ್ರದಯದಲ್ಲೊಂದು ಬಿಸಿಲಕೋಲು

Leave a Reply

Back To Top