ಮಂಡಲಗಿರಿ ಪ್ರಸನ್ನ-ಗಜಲ್

ಕಾವ್ಯಸಂಗಾತಿ

ಗಜಲ್

ಮಂಡಲಗಿರಿ ಪ್ರಸನ್ನ

ಊರುಕೇರಿ ನೋಟಗಳು ಈಗ ಬದಲಾಗುತ್ತಿವೆ
ಎದೆಯೊಳು ಮಾತುಗಳು ಈಗ ಬದಲಾಗುತ್ತಿವೆ

ಬೇವಿನ ಬೀಜವ ಬಿತ್ತಿ ಬೆಲ್ಲದ ಸವಿಯ ನಿರೀಕ್ಷೆ
ತಿಳಿಗೊಳದಲಿ ಬಿಂಬಗಳು ಈಗ ಬದಲಾಗುತ್ತಿವೆ

ತುಟಿ ಮೇಲಿನ ನುಡಿ ಹೃದಯದ ಒಳಗೆ ವಿಕೃತಿ
ಮನದ ಸುಪ್ತ ಭಾವಗಳು ಈಗ ಬದಲಾಗುತ್ತಿವೆ

ಅದೆಂಥ ಸುಂದರ ರೂಪ ಕಣ್ಣೊಳಗೆ ತುಂಬಿತ್ತು
ಸ್ಪಷ್ಟ ನವಿರಾದ ಚಿತ್ರಗಳು ಈಗ ಬದಲಾಗುತ್ತಿವೆ

ಮಾತು ಮೌಲ್ಯಗಳೆಲ್ಲ ಹರಾಜಾಗಿ ಹೋಗುತಿವೆ
‘ಗಿರಿ’ ಬದುಕ ಅರ್ಥಗಳು ಈಗ ಬದಲಾಗುತ್ತಿವೆ


Leave a Reply

Back To Top