ಜಯಶ್ರೀ.ಭ.ಭಂಡಾರಿ. ಹೊಸ ಗಜಲ್

ಕಾವ್ಯಸಂಗಾತಿ

ಗಜಲ್

ದತ್ತ ಪದ.ಗಡಿಯಾರ
ಗಝಲ್.

ಜಯಶ್ರೀ.ಭ.ಭಂಡಾರಿ

ಸೂರ್ಯನಷ್ಟೆ ಒಮ್ಮನದಿ ಕೆಲಸ ಮಾಡುತಿದೆ ಗಡಿಯಾರ.
ಕಾರ್ಯದಲಿ ಇಮ್ಮನವ ತಾಳದೆ ‌ಸಾಗುತಿದೆ ಗಡಿಯಾರ.

ಹೊತ್ತಿಗೆ ಇರುವ ಬೆಲೆ ಇನ್ನಾವದಕೂ ಇಲ್ಲ ಜಗದಲಿ.
ಗತ್ತಿನಲಿ ಗೋಡೆಯ ಮೇಲೆ ಕುಳಿತು ಹೇಳುತಿದೆ  ಗಡಿಯಾರ.

ಹತ್ತು  ಹೊಡೆದರೆ ಸಾಕು ಬೆವರಲು ಶುರುವಾಗುವದು.
ಮೆತ್ತಗೆ ಶಾಲೆಯತ್ತ ಹೊರಡು ಎನುತಿದೆ ಗಡಿಯಾರ.

ಸಮಯ ನೋಡಾಕ  ಪುರುಸೊತ್ತಿಲ್ಲದಂತೆ  ಬದುಕುವುದು.
ವಿಸ್ಮಯದಿಂದ ಅಂಕಿಗಳು ಓಡುತ ಕಾಡುತಿದೆ ಗಡಿಯಾರ.

ಮುತ್ತು ಒಡೆದರೆ ಮರಳಿ ತರಬಹುದು ಅಲ್ಲವೆ ಮರುಳೆ
ಮತ್ತಿನಲಿ ಮೈಮರೆತರೆ ಕಷ್ಟವೋ ಬೇಡುತಿದೆ ಗಡಿಯಾರ.

ತಿರು ತಿರುಗಿ ನಿಮಿಷಗಳ ಪರಿಭಾಷೆ 
ಅರಿಯದಿರೆ. ಮರು ಮರುಗಿ ನಾಳೆಗಳ ಕಾಳಜಿ ದೂರುತಿದೆ ಗಡಿಯಾರ
 
ಬೆನ್ನಟ್ಟಿ ಕತ್ತಲೆಯ ಹೊಡೆದೋಡಿಸಲು ಕೋಳಿಯ ಸುಪ್ರಭಾತ.
ಕಣ್ಣಿಟ್ಟು ಕಾವಲುಗಾರನಂತೆ ಬೆಳಗು ತೋರುತಿದೆ ಗಡಿಯಾರ


Leave a Reply

Back To Top