ಕಾವ್ಯಸಂಗಾತಿ
ತನಗ
-ನಿಂಗಮ್ಮ ಭಾವಿಕಟ್ಟಿ
1
ಕೆಡುಕಿನ ಹಿಂದೆಯೇ
ಒಳಿತೂ ಬರುತ್ತದೆ
ಅದರ ಗುಂಗಿನಲ್ಲಿ
ಇದು ಕಾಣುವುದಿಲ್ಲ
2
ಒಳಿತನ್ನೇ ಮಾಡಿದ್ರೂ
ಎಷ್ಟು ಕಷ್ಟ ಜೀವನ
ಅದು ಇಂದಿನದಲ್ಲ
ಹಿಂದಿನ ಕರ್ಮ ಭೋಗ
3
ಈ ಜೀವನವೆಂದರೆ
ಬಾಲ್ಯ ಪ್ರಾಯ ಮುಪ್ಪಿನ
ನಡುವೆ ನಡೆಯುವ
ಅರ್ಥವಿಲ್ಲದ ಆಟ
4
ಹೂವಿನ ತೋಟದಲ್ಲಿ
ಮುಳ್ಳೇಕೆ ಬಿತ್ತುವುದು?
ತಿಳಿಯ ಕದಡುವ
ಯಾವ ಹಕ್ಕಿದೆ ನಿನಗೆ?
5
ಇರುಳಲಿ ಕುಳಿತು
ಬೆಳಕ ನೆನೆಯದೇ
ಹೊರಗೆ ಬಾ, ನಿನಗೇ
ಕಾಯುತ್ತಿದೆ ಬೆಳಕು