ಲಹರಿ–
ಸವತೆ ಪುರಾಣ¡
ಅಧ್ಯಾಯ –3
ರೂಪ ಮಂಜುನಾಥ
ಸವತೆ ಆರೋಗ್ಯಕೂ ಒಳ್ಳೆಯದಂತೆ¡
ನೀರಿನ ಅಂಶವು ತುಂಬಿರುವುದಂತೆ¡
ಪೌಷ್ಟಿಕಾಂಶಗಳ ಹೊಂದಿದೆಯಂತೆ¡
ತಿಂದಿದ್ದನ್ನು ಅರಗಿಸುವುದಂತೆ
ಹೆಚ್ಚಾದ ಕೊಬ್ಬನು ಕರಗಿಸುವುದಂತೆ
ದೇಹದ ತೂಕವ ಇಳಿಸುವುದಂತೆ
ಸಕ್ಕರೆ ಕಾಯಿಲೆಯ ತಗ್ಗಿಸುವುದಂತೆ
ರಕ್ತದೊತ್ತಡವ ಇಳಿಸುವುದಂತೆ
ಮೂಲವ್ಯಾಧಿಗೂ ಒಳ್ಳೆಯದಂತೆ
ಹೊಟ್ಟೆಯ ಉಬ್ಬರವ ತಗ್ಗಿಸುವುದಂತೆ¡
ದೇಹವನ್ನು ತಂಪಾಗಿಡುವುದಂತೆ!
ಸೌಂದರ್ಯ ವರ್ಧನೆಗೂ ಸವತೆ ಬೇಕಂತೆ¡
ಮುಖದ ಕಲೆಗಳ ಇಲ್ಲವಾಗಿಸುವುದಂತೆ!
ಮುಖದ ಕಾಂತಿಯ ಹೆಚ್ಚಿಸುವುದಂತೆ!
ಕಣ್ಣುಗಳ ಹೊಳಪು ಬೆಳಗುವುದಂತೆ!
ಮುಖ ನಯವಾಗಲು ಸಹಕರಿಸುವುದಂತೆ¡
ನಮ್ಮೂರಿನಾ ಸವತೆಗೆ ವಿಶೇಷ ಗುಣವಂತೆ¡
ನೋಡಲು ಬಲು ನಯವಂತೆ¡
ಸಾರದಲ್ಲೂ ಬಲು ಸಿರಿವಂತೆ¡
ರುಚಿಯಲ್ಲೂ ಮುಂದು ನಮ್ ಸವತೆ¡
ಇಂತಹ ಸವತೆ, ತಿನ್ನಲು ಏಕೆ ಚಿಂತೆ?
ಓಡಿ ಮಾರುಕಟ್ಟೆಗೆ, ತಂದು ತಿನ್ನಿ ಸವತೆ¡
ಎಂಬಲ್ಲಿಗೆ ಹೊಳೆನರಸೀಪುರ ಕ್ಷೇತ್ರದ ರೂಪಾ ಕಾವ್ಯಕಾಂಡದ ಸವತೆ ಪುರಾಣದ ಮೂರನೆಯ ಅಧ್ಯಾಯವು
ಮುಗಿಯಿತು.ತುಪ್ಪದ ಎರಡು ಬತ್ತಿ ಹಚ್ಚಿ ಅಮ್ಮನಿಗೆ ಬೆಳಗಿ,ಎರಡು ದಾವಣೆಗೆರೆಯ ಸವತೆ ಕಾಯನ್ನ ಉರ್ವಾರುಕಮ್ ಅಮ್ಮಾಳ್ ಗೆ ನೈವೇದ್ಯಕಿಟ್ಟು, ಸಮರ್ಪಯಾಮಿ ಎಂದು ಹೇಳಿ.
ಹೆಸರು ಕಾಳು ಮೊಳಕೆಯ ಜೊತೆ ಸವತೆಯ
ಸೇರಿಸಿ ಕೋಸಂಬರಿ ಮಾಡಿ,ಸವತೆಯಮ್ಮನಿಗೆ ನೈವೇದ್ಯ ಮಾಡಿ, ಸತ್ ಸಂತಾನದ ಅಭಿವೃದ್ದಿಗಾಗಿ ಪ್ರಾರ್ಥನೆ ಮಾಡಿಕೊಳ್ಳಿ,ಪರಿವಾರಕ್ಕೆಲ್ಲ ಹಂಚಿ ದೇವಿಯ ಕೃಪೆಗೆ
ಪಾತ್ರರಾಗಿ.