ಸವತೆ ಪುರಾಣ

ಲಹರಿಅಧ್ಯಾಯ- ಎರಡು

ಸವತೆ ಪುರಾಣ¡


ಅಧ್ಯಾಯ -೨

ರೂಪ ಮಂಜುನಾಥ

ಬಗೆಬಗೆ ವ್ಯಂಜನಕೆ ಬೇಕಲ್ಲ ಸವತೆ

ಆಗಿನ ಕೋಸಂಬರಿಗೂ

ಈಗಿನ ಸಾಲಡ್ಗೂ

ಆಗಿನ ಮೊಸರ ಬಜ್ಜಿಗೂ

ಈಗಿನ ಬರ್ಗರಿಗೂ

ಆಗಿನ ಮಜ್ಜಿಗೆ ಹುಳಿಗೂ

ಈಗಿನ ಬ್ರೆಡ್ ಸ್ಯಾಂಡ್‌ವಿಚ್ಚಿಗೂ

ಆಗಿನ ತಂಬುಳಿಗೂ

ಈಗಿನ ರಾಯತಾಗೂ

ಯಾವಾಗಿನ ಉಪ್ಪಿನಕಾಯಿಗೂ

ಎಲ್ಲಕೂ ಹೊಂದುವಳೀ ಸವತೆ¡

ಅವಲಕ್ಕಿ , ಚಿತ್ರಾನ್ನ,

ಪಲಾವು,ಆಗಲಿ¡

ಬಿರಿಯಾನಿ,

ಉಪ್ಪಿಟ್ಟು, ಚಪಾತಿಗಾಗಲೀ!

ರೊಟ್ಟಿ,ರೋಟಿ, ಪರೋಟವಾಗಲಿ,

ಎಲ್ಲಕು ಪಕ್ಕದಲಿ ¡

ಊಟಕ್ಕೂ ಜೊತೆಯಲಿ,

ಇದ್ದರೆ ಚೆನ್ನ,ನಮ್ ಸವತೆ!

ಬಲಿತ ಸವತೆ ಮಜ್ಜಿಗೆ ಹುಳಿ,

ಮಂಗಳೂರಿನ ಸವತೆ ಸಾಂಬಾರ್,

ಘಟ್ಟದ ಕಡೆಯ ಸವತೆ ಕೂಟು,

ಎಲ್ಲ ಅಡಿಗೆಯಲು ಸವತೆಯ ನಂಟು¡

ಸವತೆ ತಿನ್ನಲು ಬಲು ಮಜವುಂಟು!

ಸವತೆ  ದೋಸೆ ಬಲ ಮೃದುವಂತೆ¡

ಸವತೆ ತುರಿ ಬೆರೆಸಿ, ರೊಟ್ಟಿ ತಟ್ಟಬಹುದಂತೆ¡

ಸವತೆ ಸೆಪ್ಪೆಯ ಜಟ್ನೀನೂ ಚೆನ್ನವಂತೆ¡

ಹೇಗೇ  ತಿನ್ನಿ, ಸವತೆ ರುಚಿಯಂತೆ¡

ಮತ್ತೇಕೆ ಹಾಗಿದ್ರೆ ತಿನ್ರೋಕೆ ಚಿಂತೇ?

ಎಲ್ಲ ಬಾತಿಗೂ ಸವತೆ ನೀಡುವುದು ಸಾತು!

ಜ್ಯೂಸು, ಸ್ಮೂತಿಗೂ ಸವತೆಯದೇ ಬಾತು!

ಸವತೆಯ ಮಸಾಲೆಯಂತೂ,”ಮಸ್ತ್ ಮಸ್ತ್¡”

ಸವತೆ ಕಳೆವುದು ದೇಹದ ಸುಸ್ತು¡

ಎಂಬಲ್ಲಿಗೆ ಹೊಳೆನರಸೀಪುರ ಕ್ಷೇತ್ರದ ರೂಪಾ ಕಾವ್ಯಕಾಂಡದ ಸವತೆ ಪುರಾಣದ ಎರಡನೆ ಅಧ್ಯಾಯವು ಮುಗಿದಿದೆ.ಕರ್ಪೂರ ಹಚ್ಚಿಕೊಂಡಿ ಸವತೇಶ್ವರಿಗೆ ಆರತಿ ಬೆಳಗಿ, ಎರಡು ಮಂಗಳೂರು ಸವತೆಗಳನ್ನ ಚಿವುಟಿ ನೈವೇದ್ಯ ಮಾಡಿ.

ಹೆಚ್ಚಿನ ತೆಂಗಿನತುರಿ, ನೆನೆಸಿದ ಕಡ್ಲೆಬೇಳೆ ಜೊತೆಗೆ ಸವತೆ ಹೆಚ್ಚಿಹಾಕಿ

ಕೋಸಂಬರಿ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ,ಉದರ ಕೃಪೆಗೆ ಪಾತ್ರರಾಗಿ¡


Leave a Reply

Back To Top